ವಿಕಿಪೀಡಿಯ
From Wikipedia
ವಿಕಿಪೀಡಿಯ ಒಂದು ಮುಕ್ತ ವಿಶ್ವಕೋಶ. ಇದು ಅನೇಕ ಓದುಗರ, ಸದಸ್ಯರ ಸಹಯೋಗದಿ೦ದ ಒಟ್ಟಾಗಿ ಬರೆಯಲ್ಪಡುತ್ತಿರುವ ವಿಶ್ವಕೋಶ. ೧೯೫ಕ್ಕೂ ಹೆಚ್ಚಿನ ವಿವಿಧ ಭಾಷೆಗಳಲ್ಲಿ ಆವೃತ್ತಿಗಳನ್ನು ಹೊಂದಿರುವ ವಿಶ್ವಕೋಶಗಳ ಸಮೂಹ ವಿಕಿಮೀಡಿಯ ಫೌಂಡೇಷನ್ ನಿಂದ ಪ್ರಾಯೋಜಿಸಲ್ಪಟ್ಟಿದೆ. ಸಾಂಪ್ರದಾಯಿಕ ವಿಶ್ವಕೋಶಗಳ ಲೇಖನಗಳ ವಿಷಯಗಳ ಮೇಲೆ ಹಾಗೂ ಪ್ರಚಲಿತ ವಿದ್ಯಮಾನಗಳ ಬಗೆಗೆ ಲೇಖನಗಳನ್ನು ಒಳಗೊಂಡ ವಿಕಿಗಳ ಸಮೂಹ, ವಿಕಿಪೀಡಿಯ.
ಕನ್ನಡ ಭಾಷೆಯಲ್ಲಿನ ವಿಕಿಪೀಡಿಯದ ಬಗ್ಗೆ ಮಾಹಿತಿಗಾಗಿ ಕನ್ನಡ ವಿಕಿಪೀಡಿಯ ಲೇಖನವನ್ನು ನೋಡಿ.