Privacy Policy Cookie Policy Terms and Conditions ಬುಧ - Wikipedia

ಬುಧ

From Wikipedia

ಬುಧ - ಸೂರ್ಯನಿಗೆ ಅತ್ಯಂತ ಸಮೀಪವಾದ ಮತ್ತು ಸೌರಮಂಡಲದಲ್ಲಿ ಅತಿ ಸಣ್ಣದಾದ ಗ್ರಹವಾದ ಬುಧವು ಸೂರ್ಯನ ಸುತ್ತ ಪ್ರತಿ 88 ದಿನಗಳಿಗೊಮ್ಮೆ ಪ್ರದಕ್ಷಿಣೆ ಹಾಕುತ್ತದೆ. ಸಾಮೀಪ್ಯತೆಯ ಕಾರಣದಿಂದಾಗಿ ಸೂರ್ಯನ ಪ್ರಖರತೆಯು ಬುಧವನ್ನು ಸ್ಪಷ್ಟವಾಗಿ ಕಾಣದಿರುವಂತೆ ಮಾಡುತ್ತದೆ. ಬುಧದ ಗೋಚರ ಪ್ರಮಾಣವು −2.0 ರಿಂದ 5.5 ವರೆಗೆ ಇದ್ದರೂ, ನಸುಕಿನಲ್ಲಿ ಮಾತ್ರ ಇದನ್ನು ಬರಿಗಣ್ಣಿನಿಂದ್ದ ನೋಡಬಹುದು. ಬುಧಗ್ರಹದ ಬಗ್ಗೆ ಇದುವರೆಗೂ ಬಹಳಷ್ಟು ತಿಳಿದುಬಂದಿಲ್ಲ: ಬುಧವನ್ನು ಸಮೀಪಿಸಿದ ಒಂದೇ ಒಂದು ನೌಕೆಯೆಂದರೆ 1974 ಮತ್ತು 1975 ರಲ್ಲಿ ಬುಧದ ಮೇಲ್ಮೈನ 40-50% ಭಾಗದ ನಕ್ಷೆಯನ್ನು ತಯಾರಿಸಿದ ಮ್ಯಾರಿನರ್ 10.

ಅಪ್ಪಳಿಕೆ ಕುಳಿಗಳಿರುವ ಕಾರಣ, ಬುಧವು ಹೊರಗಿನಿಂದ ನೋಡುವುದಕ್ಕೆ ನಮ್ಮ ಚಂದ್ರನಂತೆಯೇ ಇದೆ. ಬುಧಕ್ಕೆ ಯಾವುದೇ ನೈಸರ್ಗಿಕ ಉಪಗ್ರಹಗಳಿಲ್ಲ ಮತ್ತು ಗಮನಾರ್ಹವಾದ ವಾಯುಮಂಡಲವೂ ಇಲ್ಲ. ಈ ಗ್ರಹದ ಒಳಭಾಗದಲ್ಲಿ ಕಬ್ಬಿಣದ ದೊಡ್ಡದೊಂದು ವಲಯವಿದೆ. ಭೂಮಿಯ ಕಾಂತಕ್ಷೇತ್ರದ 1%ರಷ್ಟು ಶಕ್ತಿಯುಳ್ಳ ಕಾಂತಕ್ಷೇತ್ರವನ್ನು ಈ ಕಬ್ಬಿಣದ ವಲಯವು ಬುಧದ ಮೇಲೆ ಉಂಟುಮಾಡುತ್ತದೆ. ಬುಧದ ಮೇಲ್ಮೈ ತಾಪಮಾನವು -180 ರಿಂದ 430°ಸೆ. ವ್ಯಾಪ್ತಿಯಲ್ಲಿರುತ್ತದೆ. ಸೂರ್ಯನಿಗೆ ನೇರವಾಗಿ ಕೆಳಗಿರುವ ಬಿಂದುವು (subsolar point) ಅತ್ಯಂತ ಬಿಸಿಯಾಗಿರುತ್ತದೆ ಹಾಗೂ ಧ್ರುವಗಳ ಬಳಿಯಿರುವ ಕುಳಿಗಳ ಕೆಳಭಾಗಗಳು ಬೇರೆಲ್ಲೆಡೆಗಳಿಗಿಂತ ತಣ್ಣಗಿರುತ್ತವೆ.

ಪ್ರಾಚೀನ ರೋಮನ್ನರು ವೇಗವಾಗಿ ಚಲಿಸುವ ರೋಮನ್ ದೇವತೆಯಾದ ಮರ್ಕ್ಯೂರಿಯ ಆಧಾರದ ಮೇಲೆ ಈ ಗ್ರಹಕ್ಕೆ ಹೆಸರಿಟ್ಟರು (ಬಹುಶಃ ಬುಧವು ಸೂರ್ಯನ ಸುತ್ತ ವೇಗವಾಗಿ ಚಲಿಸುವ ಕಾರಣದಿಂದಾಗಿ). ಕ್ರಿ.ಪೂ. 5ನೇ ಶತಮಾನಕ್ಕೆ ಮುನ್ನ ಗ್ರೀಕ್ ಖಗೋಳಶಾಸ್ತ್ರಜ್ಞರು ಬುಧವನ್ನು ಎರಡು ಪ್ರತ್ಯೇಕವಾದ ಕಾಯಗಳೆಂದು ನಂಬಿದ್ದರು. ಇವುಗಳಲ್ಲಿ ಒಂದು ಕಾಯವು ಸೂರ್ಯೋದಯದ ಹೊತ್ತಿನಲ್ಲಿ ಮಾತ್ರ ಕಾಣಿಸುತ್ತದೆ ಮತ್ತು ಇನ್ನೊಂದು ಸೂರ್ಯಾಸ್ತದ ಹೊತ್ತಿನಲ್ಲಿ ಮಾತ್ರ ಕಾಣಿಸುತ್ತದೆ ಎಂದು ಅವರ ನಂಬಿಕೆಯಾಗಿತ್ತು. ಭಾರತದಲ್ಲಿ ಈ ಗ್ರಹಕ್ಕೆ ಚಂದ್ರನ ಮಗನಾದ ಬುಧನ ಹೆಸರನ್ನು ಇಡಲಾಗಿದೆ. ಚೀನಾ, ಕೊರಿಯಾ, ಜಪಾನ್ ಮತ್ತು ವಿಯತ್‌ನಾಮ್ ಸಂಸ್ಕೃತಿಗಳಲ್ಲಿ ಬುಧವನ್ನು ಜಲ ನಕ್ಷತ್ರ ಎಂದು ಕರೆಯಲಾಗುತ್ತದೆ. ಪಂಚಭೂತಗಳ ಆಧಾರದ ಮೇಲೆ ಈ ಹೆಸರನ್ನು ಇಡಲಾಯಿತು ಎನ್ನಲಾಗಿದೆ. ಯೆಹೂದಿಗಳು ಇದನ್ನು ಬಿಸಿಕಾಯದ ನಕ್ಷತ್ರವೆಂದು ಕರೆದರು (ಇಲ್ಲಿ ಬಿಸಿಕಾಯವು ಸೂರ್ಯನನ್ನು ಸೂಚಿಸುತ್ತದೆ).

ಪರಿವಿಡಿ

[ಬದಲಾಯಿಸಿ] ರಚನೆ

ಸೌರಮಂಡಲದಲ್ಲಿರುವ 4 ಘನರೂಪಿ ಗ್ರಹಗಳಲ್ಲಿ ಬುಧವೂ ಒಂದು. ಅರ್ಥಾತ್: ಭೂಮಿಯಂತೆಯೇ ಬುಧವು ಶಿಲೆ/ಖನಿಜಗಳಿಂದ ರಚಿತವಾಗಿದೆ. ಸಮಭಾಜಕದಲ್ಲಿ 4879ಕಿ.ಮೀ. ವ್ಯಾಸವನ್ನು ಹೊಂದಿರುವ ಬುಧವು ಈ 4 ಘನರೂಪಿಗಳಲ್ಲಿ ಅತಿ ಸಣ್ಣದಾಗಿದೆ. ಬುಧವು 70% ಲೋಹ ಮತ್ತು 30% ಸಿಲಿಕೇಟ್ ವಸ್ತುಗಳನ್ನು ಒಳಗೊಂಡಿದೆ. ಪ್ರತಿ ಘನ ಸೆಂ.ಮೀ. ಗೆ 5.43 ಗ್ರಾಂ ಪ್ರಮಾಣದಲ್ಲಿ ಬುಧವು ಸೌರಮಂಡಲದಲ್ಲಿ ಎರಡನೇ ಅತಿ ಹೆಚ್ಚು ಸಾಂದ್ರತೆಯನ್ನು ಹೊಂದಿರುವ ಗ್ರಹವಾಗಿದೆ. ಇದು ಭೂಮಿಯ ಸಾಂದ್ರತೆಗಿಂತ ಸ್ವಲ್ಪವೇ ಕಡಿಮೆಯಿದೆ. ಗುರುತ್ವ ಸಂಕ್ಷೇಪಣೆಗೆ ತಿದ್ದುಪಡಿ ಮಾಡಿದಾಗ ಬುಧವು ಭೂಮಿಗಿಂತ ಹೆಚ್ಚು ಸಾಂದ್ರತೆ ಹೊಂದಿರುವುದು ಕಂಡುಬರುತ್ತದೆ (ಬುಧದ ಅಸಂಕ್ಷೇಪಿತ ಸಾಂದ್ರತೆ: 5.3ಗ್ರಾಂ/ಪ್ರತಿ ಘನ ಸೆಂ.ಮೀ. ಮತ್ತು ಭೂಮಿಯ ಸಾಂದ್ರತೆ 4.4ಗ್ರಾಂ/ಪ್ರತಿ ಘನ ಸೆಂ.ಮೀ.[೧]

[ಬದಲಾಯಿಸಿ] ಆಂತರಿಕ ರಚನೆ: ಒಳಭಾಗ, ನಡುಭಾಗ ಮತ್ತು ಮೇಲ್ಪದರ

ಚಿತ್ರ:Mercury inside Lmb.png
ಬುಧದ ದೊಡ್ಡ ಒಳಭಾಗದ ಚಿತ್ರ

ಬುಧದ ಹೆಚ್ಚು ಪ್ರಮಾಣದ ಸಾಂದ್ರತೆಯಿಂದ ಅದರ ಆಂತರಿಕ ರಚನಾ ವಿವರಗಳನ್ನು ತಾರ್ಕಿಸಬಹುದು. ಭೂಮಿಯ ಅಧಿಕ ಸಾಂದ್ರತೆಗೆ ಸ್ವಲ್ಪಮಟ್ಟಿಗೆ ಕಾರಣ ಭೂಮಿಯ ಒಳಭಾಗದಲ್ಲಿ ಸಂಕ್ಷೇಪಣೆ. ಆದರೆ, ಬುಧವು ಭೂಮಿಗಿಂತ ಬಹಳ ಚಿಕ್ಕದು ಹಾಗೂ ಅದರ ಒಳಭಾಗವು ಭೂಮಿಯಷ್ಟು ಇಕ್ಕಟ್ಟಿನಿಂದ ಕೂಡಿಲ್ಲ. ಈ ಕಾರಣದಿಂದ, ಬುಧಕ್ಕೆ ಅಷ್ಟು ಹೆಚ್ಚು ಸಾಂದ್ರತೆ ಬರಲು ಅದರ ಒಳಭಾಗವು ದೊಡ್ಡದಾಗಿ ಹಾಗು ಕಬ್ಬಿಣದಿಂದ ಸಮೃದ್ಧವಾಗಿರಬೇಕು[೨]. ಭೂವಿಜ್ಞಾನಿಗಳ ಅಂದಾಜಿನ ಪ್ರಕಾರ ಬುಧದ ಒಳಭಾಗವು ಅದರ 42%ರಷ್ಟು ಗಾತ್ರವನ್ನು ವ್ಯಾಪಿಸುತ್ತದೆ (ಭೂಮಿಯ ಒಳಭಾಗವು ಭೂಮಿಯ ಬರೀ 17%ಗಾತ್ರವನ್ನು ವ್ಯಾಪಿಸುತ್ತದೆ).

ಬುಧದ ಒಳಭಾಗವನ್ನು 600ಕಿ.ಮೀ. ದಪ್ಪವಿರುವ ಒಂದು ನಡುಭಾಗವು ಆವರಿಸಿದೆ. ಬುಧದ ಇತಿಹಾಸದ ಮೊದಲ ಭಾಗದಲ್ಲಿ ನೂರಾರು ಕಿ.ಮೀ. ಉದ್ದಗಲದ ಒಂದು ಆಕಾಶಕಾಯವು ಬುಧದ ಮೇಲೆ ಅಪ್ಪಳಿಸಿ, ಬುಧದ ನಡುಭಾಗದ ಮೂಲವಸ್ತುಗಳನ್ನು ಬಹುಮಟ್ಟಿಗೆ ನಾಶಪಡಿಸಿ, ಒಂದು ತೆಳುವಾದ ನಡುಭಾಗವನ್ನು ಬುಧದ ಮೇಲೆ ಬಿಟ್ಟುಹೋಯಿತೆಂದು ಎನ್ನಲಾಗಿದೆ.[೩] (ಪರ್ಯಾಯ ಸಿದ್ಧಾಂತ/ವಾದಗಳನ್ನು ಕೆಳಗೆ ಚರ್ಚಿಸಲಾಗಿದೆ).

ಬುಧದ ಮೇಲ್ಪದರವು 100–200ಕಿ.ಮೀ. ದಪ್ಪವಿದೆ ಎಂದು ನಂಬಲಾಗಿದೆ. ಬುಧದ ಮೇಲ್ಮೈನಲ್ಲಿ ಕಾಣಿಸುವ ಒಂದು ಬಹಳ ವಿಶಿಷ್ಟ್ರವಾದ ಲಕ್ಷಣವೆಂದರೆ ಹಲವಾರು ದಿಣ್ಣೆಯ ಸಾಲುಗಳು. ಇವುಗಳಲ್ಲಿ ಕೆಲವು ನೂರಾರು ಕಿ.ಮೀ.ಉದ್ದವಿವೆ. ಬುಧದ ಮೇಲ್ಮೈ ಘನೀಕೃತವಾದ ನಂತರ, ಒಳ ಮತ್ತು ನಡುಭಾಗಗಳು ತಣ್ಣಗಾಗುವ ಸಮಯದಲ್ಲಿ ಈ ದಿಣ್ಣೆಗಳು ರೂಪುಗೊಂಡವೆಂದು ನಂಬಲಾಗಿದೆ[೪]

ಸೌರಮಂಡಲದಲ್ಲಿರುವ ಬೇರಾವುದೇ ದೊಡ್ಡ ಗ್ರಹಕ್ಕಿಂತ ಬುಧದ ಮೇಲೆ ಅತ್ಯಧಿಕ ಕಬ್ಬಿಣಾಂಶವು ಕಂಡುಬರುತ್ತದೆ. ಬುಧದ ಈ ರೀತಿಯ ಅಧಿಕವಾದ ಲೋಹತ್ವವನ್ನು ವಿವರಿಸಲು ಹಲವಾರು ಸಿದ್ಧಾಂತಗಳನ್ನು ಪ್ರಸ್ತಾಪಿಸಲಾಗಿದೆ. ಇವುಗಳಲ್ಲಿ ಉದಾರವಾಗಿ ಒಪ್ಪಿಕೊಳ್ಳಲಾಗಿರುವ ಒಂದು ಸಿದ್ಧಾಂತದ ಪ್ರಕಾರ, ಬುಧವು ಆದಿಕಾಲದಲ್ಲಿ ಸಾಮಾನ್ಯ ಉಲ್ಕೆಗಳಲ್ಲಿ ಕಾಣಿಸುವಷ್ಟೇ ಅನುಪಾತದಲ್ಲಿ ಲೋಹ-ಸಿಲಿಕೇಟ್‌ಗಳನ್ನೊಳಗೊಂಡಿತ್ತು ಹಾಗೂ ಅದರ ದ್ರವ್ಯರಾಶಿಯು ಪ್ರಸ್ತುತದ 2.5 ಪಟ್ಟು ಹೆಚ್ಚು ಇತ್ತು; ಆದರೆ, ಸೌರಮಂಡಲದ ಇತಿಹಾಸದ ಮೊದಲ ಭಾಗದಲ್ಲಿ, ಬುಧದ 6ನೇ 1 ಪಾಲು ದ್ರವ್ಯರಾಶಿಯುಳ್ಳ, ದೊಡ್ಡದೊಂದು ಆಕಾಶಕಾಯವು ಬುಧವನ್ನು ಅಪ್ಪಳಿಸಿತು. ಈ ಅಪ್ಪಳಿಕೆಯು ಬುಧದ ಮೇಲಿದ್ದ ಹೊರ ಮತ್ತು ನಡುಭಾಗಗಳನ್ನು ಬಹಳಷ್ಟು ನಾಶಮಾಡಿ ಒಳಭಾಗವನ್ನು ಬಿಟ್ಟಿದೆ.[೩] ಭೂಮಿಯ ಚಂದ್ರನ ನಿರ್ಮಾಣವನ್ನು ವಿವರಿಸಲೂ ಇಂಥದೇ ಒಂದು ವಾದವನ್ನು ಪ್ರಸ್ತಾಪಿಸಲಾಗ್ಗಿದೆ (ಬೃಹತ್ ಅಪ್ಪಳಿಕೆ ವಾದವನ್ನು ನೋಡಿ).

ಪರ್ಯಾಯವಾಗಿ, ಸೂರ್ಯನ ಶಕ್ತಿಯ ಹೊರಸೂಸುವಿಕೆಯು ಸ್ಥಿರವಾಗುವುದಕ್ಕೆ ಮುನ್ನ ಸೌರ ಜ್ಯೋತಿಪಟಲದಿಂದ ಬುಧವು ಮೂಡಿದ್ದಿರಬಹುದು. ಆಗಿನ ಕಾಲದಲ್ಲಿ ಬುಧಕ್ಕೆ ಪ್ರಸ್ತುತದ 2ರಷ್ಟು ದ್ರವ್ಯರಾಶಿ ಇದ್ದಿರುತ್ತಿತ್ತು. ಆದರೆ, ಹೊಸದಾಗಿ ರಚಿತವಾಗುತ್ತಿದ್ದ ಸೂರ್ಯನು ಮುದುಡಿ ಸಂಕ್ಷೇಪಿತವಾಗುತ್ತಿದ್ದಂತೆ, ಬುಧನ ಮೇಲ್ಮೈ ತಾಪಮಾನವು 2500 ರಿಂದ 3500 ಕೆಲ್ವಿನ್, ಅಥವಾ 10000 ಕೆಲ್ವಿನ್‌ನಷ್ಟೂ ಹೆಚ್ಚಾಗಿದ್ದಿರಬಹುದು. ಈ ತಾಪಮಾನಗಳಲ್ಲಿ ಬುಧದ ಮೇಲ್ಮೈಯಲ್ಲಿನ ಬಹಳಷ್ಟು ಶಿಲೆಗಳು ಸುಲಭವಾಗಿ ಇಂಗಿಹೋಗಿರುತ್ತಿದ್ದವು. ಈ ರೀತಿ ಇಂಗಿದ ಧೂಳನ್ನು ಸೌರ ಮಾರುತಗಳು ಬೀಸಿಕೊಂಡು ಹೋಗಿದ್ದಿರಬಹುದು.[೫]


ಇನ್ನೊಂದು ಸಿದ್ಧಾಂತದ ಪ್ರಕಾರ, ಬುಧವನ್ನು ರೂಪಿಸುತ್ತಿದ್ದ ಕಣಗಳ ಮೇಲೆ ಸೌರ ಮಾರುತವು ಸೆಳೆತವನ್ನುಂಟುಮಾಡಿ, ಹಗುರವಾದ ಕಣಗಳನ್ನು ಬುಧದಿಂದ ದೂರ ಕರೆದೊಯ್ದಿತು.[೬] ಈ ಪ್ರತಿಯೊಂದು ಸಿದ್ಧಾಂತವೂ ಬುಧದ ಮೇಲ್ಮೈನ ರಚನೆಯನ್ನು ವಿಭಿನ್ನವಾಗಿ ಮುನ್ಸೂಚಿಸುತ್ತದೆ. ಮುಂಬರುವ ಎರಡು ಯಾತ್ರೆಗಳಾದ MESSENGER ಮತ್ತು BepiColomboಗಳು ಈ ಸಿದ್ಧಾಂತಗಳನ್ನು ಪರೀಕ್ಷಿಸಲು ಬುಧ ವೀಕ್ಷಣೆಯನ್ನು ನಡೆಸುವ ಉದ್ದೇಶವನ್ನು ಹೊಂದಿವೆ.

[ಬದಲಾಯಿಸಿ] ಮೇಲ್ಮೈ

ಬುಧದ ಮೇಲ್ಮೈ ನೋಡುವುದಕ್ಕೆ ನಮ್ಮ ಚಂದ್ರನ ಮೇಲ್ಮೈನಂತೆಯೇ ಇದೆ. ಚಂದ್ರನಂತೆ ಬುಧದ ಮೇಲೂ ಸಾಗರದಂಥ ಸಮತಳಗಳು ಕಂಡುಬರುತ್ತವೆ, ಮತ್ತು ಇವೆರಡರಲ್ಲೂ ವ್ಯಾಪಕವಾಗಿ ಕುಳಿಗಳು ಕಂಡುಬರುತ್ತವೆ. ಇವುಗಳು ಬುಧದ ಮೇಲ್ಮೈ ಕೋಟ್ಯಾಂತರ ವರ್ಷಗಳಿಂದ ಯಾವುದೇ ಚಟುವಟಿಕೆಯಿಲ್ಲದೆ ಸಿಷ್ಕ್ರಿಯವಾಗಿದೆಯೆಂದು ಸೂಚಿಸುತ್ತವೆ. ಬುಧದತ್ತ ಕೆಲವೇ ಹಾಗೂ ಮಾನವರಹಿತ ಯಾತ್ರೆಗಳು ನಡೆದಿರುವ ಕಾರಣ, ಅದರ ಭೂವಿಜ್ಞಾನವು ಬೇರೆ ಘನರೂಪಿ ಗ್ರಹಗಳ ಭೂವಿಜ್ಞಾನದಷ್ಟು ಅರ್ಥವಾಗಿಲ್ಲ. ಮೇಲ್ಮೈ ಲಕ್ಷಣಗಳಿಗೆ ಈ ಕೆಳಗಿನ ಹೆಸರುಗಳನ್ನು ಕೊಡಲಾಗಿದೆ:

ಬುಧವು ರೂಪುಗೊಂಡ ಮತ್ತು ತದನಂತರದಕಾಲದಲ್ಲಿ ಧೂಮಕೇತುಗಳು ಮತ್ತು ನಾಕ್ಷತ್ರಿಕ ಕಾಯಗಳು ಬುಧವನ್ನು ಭಾರಿ ಸಂಖ್ಯೆಯಲ್ಲಿ ಅಪ್ಪಳಿಸಿದವು. ಈ ರೀತಿಯಲ್ಲಿ ತೀವ್ರವಾದ ಕುಳಿ ನಿರ್ಮಾಣ ಕಾಲವು ಸುಮಾರು 38 ಲಕ್ಷ ವರ್ಶಗಳ ಹಿಂದೆ ಕೊನೆಗೊಂಡಿತು. ಆಕಾಶಕಾಯಗಳನ್ನು ನಿಧಾನಗೊಳಿಸಲು ಬೇಕಾದ ವಾಯುಮಂಡಲವಿಲ್ಲದ ಕಾರಣ, ಈ ಕಾಲದಲ್ಲಿ ಬುಧದ ಮೇಲ್ಮೈ ಸಂಪೂರ್ಣವಾಗಿ ಕುಳಿಗಳಿಂದ ಆವೃತವಾಯಿತು. ಈ ಕಾಲದಲ್ಲಿ ಬುಧದ ಜ್ವಾಲಾಮುಖಿಗಳೂ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದವು; ಗ್ರಹದ ಒಳಗಿನಿಂದ ಹೊರಬಂದ ಶಿಲಾದ್ರವವು en:Caloris Basinನಂಥ ಸಮತಳಗಳನ್ನು ತುಂಬಿಸಿ, ಚಂದ್ರನ ಮೇಲೆ ಕಾಣಿಸುವಂಥ ನಯವಾದ ಸಮತಳಗಳನ್ನು ನಿರ್ಮಿಸಿತು.

ಚಿತ್ರ:Mercury Caloris Basin2.jpg
Mercury's en:Caloris Basin is one of the largest impact features in the Solar System.

ಬುಧದ ಕುಳಿಗಳ ವ್ಯಾಸವು ಕೆಲವೇ ಮೀ.ಗಳಿಂದ ಹಿಡಿದು ನೂರಾರು ಕಿ.ಮೀ. ಗಳ ವ್ಯಾಪ್ತಿಯಲ್ಲಿವೆ. ಈಗ ಲಭ್ಯವಿರುವ ಮಾಹಿತಿಯ ಪ್ರಕಾರ 1300ಕಿ.ಮೀ. ವ್ಯಾಸವಿರುವ Caloris Basin ಅತ್ಯಂತ ದೊಡ್ಡ ಕುಳಿಯಾಗಿದೆ. Caloris Basin ನನ್ನು ನಿರ್ಮಿಸಿದ ಅಪ್ಪಳಿಕೆಯು ಎಷ್ಟು ಪ್ರಬಲವಾಗಿತ್ತೆಂದರೆ, ಇದು ಅಪ್ಪಳಿಕೆ ಕುಳಿಗಿಂತ 2ಕಿ.ಮೀ.ಯಷ್ಟು ಎತ್ತರದಲ್ಲಿ ಲಾವಾ ಉಂಗುರಗಳನ್ನು ಸೃಷ್ಟಿಸಿತು. Caloris Basin ನ ಕೆಳಗೆ "ವಿಚಿತ್ರ ಭೂಮಿ" ("Weird Terrain") ಎಂದು ಕರೆಯಲಾಗುವ ಉಬ್ಬುತಗ್ಗಿನ ಒಂದು ದೊಡ್ಡ ವಲಯವಿದೆ. ಸಾಮನ್ಯವಾಗಿ ಕಂಡುಬರದಿರುವ ಈ ಭೂಮಿಯ ಉಗಮವು, ಅಪ್ಪಳಿಕೆಯಿಂದುಂಟಾದ ಆಘಾತ ತರಂಗಗಳು ಗ್ರಹದ ಮೇಲ್ಮೈ ಸುತ್ತ ಚಲಿಸಿ ಪುನಃ Basinನ ಕೆಳಗೆ ಒಟ್ಟುಸೇರಿದಾಗ ಉಂಟಾದ ಒತ್ತಡದಿಂದ ಆಯಿತೆಂದು ಶಂದಿಸಲಾಗಿದೆ.[೭] ಪರ್ಯಾಯವಾಗಿ, ಈ ಉಬ್ಬುತಗ್ಗಿನ ಭೂಮಿಯು ಅಪ್ಪಳಿಕೆಯು ಹೊರಹಾಕಿದ ವಸ್ತುಗಳು ಪುನಃ ಒಂದೆಡೆ ಸೇರಿದಾಗ ನಿರ್ಮಿತವಾಯಿತೆಂದೂ ನಂಬಲಾಗಿದೆ.

ಚಿತ್ರ:Mercury's 'Weird Terrain'.jpg
The so-called "Weird Terrain" was formed by the en:Caloris Basin impact at its antipodal point.

ಬುಧದ ಸಮತಳಗಳು ಎರಡು ವಿಶಿಷ್ಟವಾದ ಬೇರೆ ಬೇರೆ ಕಾಲಗಳಲ್ಲಿ ಹುಟ್ಟಿದವು: ಈಚೆಗೆ ಸೃಷ್ಟಿಯಾದ ಸಮತಳಗಳಲ್ಲಿ ಹೆಚ್ಚಾಗಿ ಕುಳಿಗಳು ಕಾಣಿಸುವುದಿಲ್ಲ ಮತ್ತು ಇವುಗಳು ಬಹುಶಃ ಲಾವಾ ಪ್ರವಾಹವು ಮುಂಚೆಯಿದ್ದ ಮೇಲ್ಮೈಯನ್ನು ಮುಚ್ಚಿದಾಗ ನಿರ್ಮಿತವಾದವು. ಬುಧದ ಮೇಲ್ಮೈನ ಒಂದು ಅಪರೂಪದ ಲಕ್ಷಣವೆಂದರೆ ಸಮತಳಗಳ ಮೇಲೆ ಹೇರಳವಾಗಿ ಕಂಡುಬರುವ ಒತ್ತಡದಿಂದುಂಟಾದ ಮಡಿಕೆಗಳು. ಗ್ರಹದ ಒಳಭಾಗವು ತಣ್ಣಗಾಗುತ್ತಿದ್ದ ಸಮಯದಲ್ಲಿ ಸಂಕುಚಿಸಿ ಮೇಲ್ಮೈಯನ್ನೂ ಬಗ್ಗಿಸಿತು ಎಂದು ನಂಬಲಾಗಿದೆ. ಕುಳಿಗಳು, ಸಮತಳಗಳು, ಮತ್ತಿತರ ಲಕ್ಷಣಗಳ ಮೇಲೆ ಈ ಮಡಿಕೆಗಳು ಕಾಣಿಸುವುದರಿಂದ, ಇವು ಇತ್ತೀಚ್ಗೆ ಉಂಟಾದ ಮಡಿಕೆಗಳೆಂದು ತರ್ಕಿಸಬಹುದು.[೮] ಬುಧದ ಮೇಲ್ಮೈ ಬಗ್ಗುವುದಕ್ಕೆ ಸೂರ್ಯನ ಗುರುತ್ವ ಬಲದಿಂದುಂಟಾದ ಗಮನಾರ್ಹವಾದ ಉಬ್ಬರವಿಳಿತಗ್ಳೂ ಒಂದು ಕಾರಣ—ಬುಧದ ಮೇಲೆ ಸೂರ್ಯನ ಉಬ್ಬರವಿಳಿತ ಬಲವು ಭೂಮಿಯ ಮೇಲೆ ಚಂದ್ರನ ಉಬ್ಬರವಿಳಿತ ಬಲಕ್ಕಿಂತ ಸುಮಾರು 17% ಅಧಿಕವಾಗಿರುತ್ತದೆ.[೯]

ಚಂದ್ರನಂತೆಯೇ ಬುಧದ ಮೇಲ್ಮೈ ಬಹುಶಃ ಸವೆತದ ಪರಿಣಾಮಗಳನ್ನು ಅನುಭವಿಸಿದೆ. ಸೌರ ಮಾರುತ ಮತ್ತು ಸೂಕ್ಷ್ಮ ಉಲ್ಕೆಗಳ ಧಾಳಿಯು ಪ್ರತಿಫಲನಾಂಶವನ್ನು ಕಪ್ಪಾಗಿಸಿ ಮೇಲ್ಮೈನ ಪ್ರತಿಫಲನ ಗುಣಗಳನ್ನು ಬದಲಾಯಿಸುತ್ತವೆ.

ಬುಧದ ಸರಾಸರಿ ಮೇಲ್ಮೈ ತಾಪಮಾನವು 178.9°ಸೆ.ಯಾದರೂ, ವಾಯುಮಂಡಲವಿಲ್ಲದ ಕಾರಣ, ಇಲ್ಲಿ ತಾಪಮಾನವು -183.2° ಯಿಂದ 426.9° ಸೆ. ವ್ಯಾಪ್ತಿಯಲ್ಲಿರುತ್ತದೆ. ಹೋಲಿಕೆಯಲ್ಲಿ, ಭೂಮಿಯ ಮೇಲೆ ತಾಪಮಾನವು 150 ಕೆಲ್ವಿನ್‌ನಷ್ಟು ಮಾತ್ರ ಬದಲಾಗುತ್ತದೆ. ಬುಧನ ಮೇಲ್ಮೈ ಮೇಲೆ ಬೀಳುವ ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುವುದಕ್ಕಿಂತ 6.5 ಪಟ್ಟು ಹೆಚ್ಚು ತೀಕ್ಷ್ಣವಾಗಿರುತ್ತದೆ. ಇಲ್ಲಿ ಸೌರ ಸ್ಥಿರದ ಪ್ರಮಾಣವು ಪ್ರತಿ ಚ.ಮೀ. ಗೆ 9130 ವ್ಯಾಟ್‌ಗಳು.

ಮೇಲ್ಮೈ ತಾಪಮಾನವು ಬಹಳ ಹೆಚ್ಚಾಗಿದ್ದರೂ, ಬುಧದ ಮೇಲೆ ಮಂಜಿನ ಅಸ್ತಿತ್ವವು ಅವಲೋಕನೆಗಳಿಂದ ತಿಳಿದುಬರುತ್ತದೆ. ಧ್ರುವಗಳ ಬಳಿಯಿರುವ ಕೆಲವು ಆಳವಾದ ಕುಳಿಗಳ ಕೆಳಭಾಗಗಳು ಎಂದೂ ಸೂರ್ಯಕಿರಣವನ್ನು ನೋಡುವುದೇ ಇಲ್ಲ. ಈ ಎಡೆಗಳಲ್ಲಿ ತಾಪಮಾನವು ಬುಧದ ಸರಾಸರಿ ತಾಪಮಾನಕ್ಕಿಂತ ಬಹಳ ಕಡಿಮೆಯಿರುತ್ತದೆ. ನೀರು ಮತ್ತು ಮಂಜು [[en:radar|ರೆಡಾರ್] ಅಲೆಗಳನ್ನು ಚೆನ್ನಾಗಿ ಪ್ರತಿಫಲಿಸುತ್ತವೆ, ಹಾಗೂ ಧ್ರುವಗಳ ಬಳಿ ಅತಿ ಹೆಚ್ಚಿನ ರೆಡಾರ್ ಪ್ರತಿಫಲನವಿರುವುದು ಅವಲೋಕನೆಗಳಿಂದ ಕಂಡುಬರುತ್ತದೆ.[೧೦] ಈ ಪ್ರತಿಫಲನಕ್ಕೆ ಬೇರೆ ವಸ್ತುಗಳು ಕಾರಣವಿರಬಹುದಾದರೂ, ಮಂಜು ಇದಕ್ಕೆ ಹೆಚ್ಚಿನ ಸಂಭವನೀಯ ಕಾರಣವೆಂದು ಖಗೋಳಶಾಸ್ತ್ರಜ್ಞರು ನಂಬುತ್ತಾರೆ.

ಹಿಮಾವೃತ ವಲಯಗಳಲ್ಲಿ ಕೇವಲ ಕೆಲವೇ ಮೀಟರ್‌ಗಳ ದಪ್ಪನಾದ ಹಿಮವಿದೆ ಎಂದು ನಂಬಲಾಗಿದೆ. ಈ ವಲಯಗಳು ಒಟ್ಟಾಗಿ ಸುಮಾರು 1014–1015 ಕಿ.ಗ್ರಾಂ. ನೀರನ್ನು ಶೇಖರಿಸಿಟ್ಟುಕೊಂಡಿವೆ. ಹೋಲಿಕೆಯಲ್ಲಿ, ಭೂಮಿಯ ಅಂಟಾರ್ಕ್‌ಟಿಕ ಹಿಮಪ್ರದೇಶವು ಸುಮಾರು 4 x 1018 ಕಿ.ಗ್ರಾಂ. ನಷ್ಟು ಹಾಗೂ ಮಂಗಳದ ಧ್ರುವ ಪ್ರದೇಶವು ಸುಮಾರು 1016 ಕಿ.ಗ್ರಾಂ. ನಷ್ಟು ನೀರನ್ನು ಹೊಂದಿವೆ. ಬುಧದ ಮೇಲಿರುವ ಹಿಮದ ಮೂಲವು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಆದರೆ, ಗ್ರಹದ ಒಳಭಾಗದಿಂದ ನೀರಿನ ಹೊರಸೂಸುವಿಕೆ, ಅಥವಾ ಧೂಮಕೇತುಗಳು ತಮ್ಮೊಡನೆ ತಂದ ನೀರು ಈ ಹಿಮದ ಮೂಲವಾಗಿರಬಹುದು.[೧೧]

[ಬದಲಾಯಿಸಿ] ವಾಯುಮಂಡಲ

ಘನರೂಪಿ ಗ್ರಹಗಾತ್ರಗಳ ಹೋಲಿಕೆ (ಎಡದಿಂದ ಬಲಕ್ಕೆ): ಬುಧ, ಶುಕ್ರ, ಭೂಮಿ, ಮತ್ತು ಮಂಗಳ
Enlarge
ಘನರೂಪಿ ಗ್ರಹಗಾತ್ರಗಳ ಹೋಲಿಕೆ (ಎಡದಿಂದ ಬಲಕ್ಕೆ): ಬುಧ, ಶುಕ್ರ, ಭೂಮಿ, ಮತ್ತು ಮಂಗಳ

ಬುಧವು ಸಣ್ಣ ಗ್ರಹವಾಗಿರುವುದರಿಂದ ಅದರ ಗುರುತ್ವವು ವಾಯುಮಂಡಲವನ್ನು ಗ್ರಹದ ಸುತ್ತ ಹಿಡಿದಿಟ್ಟುಕೊಳ್ಳುವಷ್ಟು ಸಬಲವಾಗಿಲ್ಲ; ವಿರಳವಾಗಿರುವ ಬುಧದ ವಾಯುಮಂಡಲದಲ್ಲಿ ಜಲಜನಕ, ಹೀಲಿಯಮ್, ಆಮ್ಲಜನಕ, ಸೋಡಿಯಮ್, ಕ್ಯಾಲ್ಷಿಯಂ ಮತ್ತು ಪೊಟಾಷಿಯಂಗಳು ಸೇರಿವೆ. ವಾಯು ಕಣಗಳು ನಿರಂತರವಾಗಿ ಬಾಹ್ಯಾಕಾಶಕ್ಕೆ ತಪ್ಪಿಸಿಕೊಂಡು ಹೋಗುತ್ತಿರುತ್ತವೆ ಹಾಗೂ ಹಲವಾರು ಮೂಲಗಳಿಂದ ಹೊಸ ಕಣಗಳು ವಾಯುಮಂಡಲವನ್ನು ಸೇರುತ್ತಿರುತ್ತವೆ. ಜಲಜನಕ ಮತ್ತು ಹೀಲಿಯಂ ಕಣಗಳು ಬಹುಶಃ ಸೌರ ಮಾರುತಗಳಿಂದ ಬುಧಕ್ಕೆ ಬಂದು ನಂತರ ಪುನಃ ಬಾಹ್ಯಾಕಾಶದಲ್ಲಿ ಕಳೆದುಹೋಗುತ್ತವೆ. ಬುಧದ ಮೇಲ್ಮೈನಲ್ಲಿ ಉಂಟಾಗುವ ವಿಕಿರಣ ಕ್ಷಯವೂ ಹೀಲಿಯಂ, ಸೋಡಿಯಂ ಮತ್ತು ಪೊಟಾಷಿಯಂಗಳ ಒಂದು ಮೂಲ. ಮೇಲ್ಮೈ ಮೇಲೆ ಅಪ್ಪಳಿಸುವ ಕೆಲವು ಉಲ್ಕೆಗಳಲ್ಲಿ ನೀರಿನ ಅಂಶಗಳಿರುವುದರಿಂದ ಬಹುಶಃ ಬುಧದ ಮೇಲೂ ನೀರಾವಿ ಅಸ್ಥಿತ್ವದಲ್ಲಿದೆ.[೧೨]

[ಬದಲಾಯಿಸಿ] ಕಾಂತಕ್ಷೇತ್ರ

ಬುಧವು ತನ್ನ ಅಕ್ಷದ ಸುತ್ತ ಬಹಳ ನಿಧಾನವಾಗಿ ಸುತ್ತುತ್ತಿದ್ದರೂ, ಅದಕ್ಕೆ ಸಾಕಷ್ಟು ಶಕ್ತಿಯುತವಾದ (ಭೂಮಿಯ ಸುಮಾರು 1%ನಷ್ಟು) ಕಾಂತಕ್ಷೇತ್ರವಿದೆ. ಬುಧದ ಕಾಂತಕ್ಷೇತ್ರವು ಭೂಮಿಯ ಕಾಂತಕ್ಷೇತ್ರದಂತೆಯೇ, ಸುತ್ತುತ್ತಿರುವ ದ್ರವೀಕೃತ ಒಳಭಾಗದಿಂದ, ಉಂಟಾಗಿರಬಹುದು. ಆದರೆ, ಬುಧದ ಒಳಭಾಗವು ಇನ್ನೂ ದ್ರವರೂಪದಲ್ಲಿದೆಯೇ ಇಲ್ಲವೇ ಎಂಬುದು ವಿಜ್ಞಾನಿಗಳಿಗೆ ಖಚಿತವಾಗಿಲ್ಲ. [೧೩] ಬುಧದ ಕಕ್ಷೀಯ ಕೇಂದ್ರ ಚ್ಯುತಿಯು ಹೆಚ್ಚಾಗಿರುವ ಕಾಲಗಳಲ್ಲಿ ಉಂಟಾಗುವ ಉಬ್ಬರವಿಳಿತಗಳು, ಒಳಭಾಗವನ್ನು ಬಹುಶಃ ಇನ್ನೂ ದ್ರವರೂಪದಲ್ಲೇ ಇಟ್ಟಿರಬಹುದು. ಇದಲ್ಲದೆ, ಬುಧದ ಕಾಂತಕ್ಷೇತ್ರವು ಹಿಂದಿನ ಡೈನಮೋ ಪರಿಣಾಮದ ಅವಶೇಷವಾಗಿ ಉಳಿದಿರಬಹುದು. ಈಗ ನಿಂತುಹೋಗಿರುವ ಡೈನಮೋ ಪರಿಣಾಮವು ಬುಧದ ಒಳಭಾಗದಲ್ಲಿರುವ ಘನೀಕೃತ ವಸ್ತುಗಳಲ್ಲಿ ತನ್ನ ಕಾಂತಕ್ಷೇತ್ರವನ್ನು ಶಾಶ್ವತವಾಗಿ ಉಳಿಸಿರಬಹುದು.

ಬುಧದ ಕಾಂತಕ್ಷೇತ್ರವು ಸೌರ ಮಾರುತವನ್ನು ಗ್ರಹದ ಸುತ್ತ ಬಗ್ಗಿಸುವಷ್ಟು ಶಕ್ತಿಯುತವಾಗಿದೆ. ಇದು ಸೌರಮಾರುತಗಳಿಗೆ ಅಭೇದ್ಯವಾದ ಕಾಂತಗೋಳವೊಂದನ್ನು ಬುಧದ ಸುತ್ತ ಸೃಷ್ಟಿಸುತ್ತದೆ. ಚಂದ್ರನ ಮೇಲಿನ ಪರಿಸ್ಥಿತಿಗಿಂತ ಇದು ಬಹಳ ಭಿನ್ನವಾಗಿದೆ. ಚಂದ್ರನ ಕಾಂತಕ್ಷೇತ್ರವು ಸೌರಮಾರುತಗಳನ್ನು ತಡೆಯಲಾಗದಷ್ಟು ನಿಶ್ಶಕ್ತವಾಗಿರುವುದರಿಂದ ಅಲ್ಲಿ ಕಾಂತಗೋಳವೂ ಉಂಟಾಗುವುದಿಲ್ಲ.

ನಮ್ಮ ಸೌರವ್ಯೂಹ

ಸೂರ್ಯ | ಬುಧ | ಶುಕ್ರ | ಭೂಮಿ (ಚಂದ್ರ) | ಮಂಗಳ | ಎಸ್ಟೆರೊಇಡ್ ಪಟ್ಟಿ
ಗುರು | ಶನಿ | ಯುರೇನಸ್ | ನೆಪ್ಚೂನ್ | ಪ್ಲುಟೊ | ಕೈಪರ್ ಪಟ್ಟಿ | ಊರ್ಟ್ ಮೋಡ




ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.

Static Wikipedia (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu

Static Wikipedia February 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu