ಯುರೇನಸ್
From Wikipedia
ಯುರೇನಸ್ ನಮ್ಮ ಸೌರಮಂಡಲದ ಏಳನೇ ಗ್ರಹ.ಇದನ್ನು ೧೭೮೧ರಲ್ಲಿ ವಿಲಿಯಮ್ ಹರ್ಷಲ್ ಸಂಶೋಧಿಸಿದ.ಯುರೇನಸ್ ಎಂದರೆ ಗ್ರೀಕ್ ಭಾಷೆಯಲ್ಲಿ "ಆಕಾಶ ದೇವತೆ" ಎಂದರ್ಥ.ಈ ಗ್ರಹವು ಅನಿಲ ಹಾಗು ದ್ರವದಿಂದ ಮಾಡಲ್ಪಟ್ಟ ದೊಡ್ಡ ಚೆಂಡಿನಂತಿದೆ.ಇದು ಮುಖ್ಯವಾಗಿ ಜಲಜನಕ ಹಾಗೂ ಹೀಲಿಯಂನಿಂದ ಮಾಡಲ್ಪಟ್ಟಿದೆ.ಇದರ ದ್ರವ್ಯರಾಶಿಯು ಭೂಮಿಯ ೧೪.೫ ಪಟ್ಟು ಹೆಚ್ಚು.ಸೂರ್ಯನಿಂದ ಸರಾಸರಿ ದೂರ ೨,೮೭,೫೦,೦೦,೦೦೦ ಕಿ.ಮೀ. ವ್ಯಾಸ: ೫೧,೧೧೮ ಕಿ.ಮೀ.ಗಾತ್ರದಲ್ಲಿ ಭೂಮಿಗಿಂತ ದೊಡ್ಡದಾದರೂ, ಗುರು ಮತ್ತು ಶನಿ ಗ್ರಹಗಳಿಗಿಂತ ಚಿಕ್ಕದು.ಈ ಗ್ರಹದ ಒಂದು ದಿನ ಸುಮಾರು ೧೧ ಘಂಟೆಗಳಿಗೆ ಮುಕ್ತಾಯಗೊಳ್ಳುತ್ತದೆ. ಸೂರ್ಯನ ಸುತ್ತ ಒಂದು ಪ್ರದಕ್ಷಿಣೆಗೆ ಬೇಕಾದ ಅವಧಿ: ೩೦,೬೮೫ ಭೂದಿನಗಳು. ಇದರ ವಾತಾವರಣದ ಉಷ್ಣತೆ ಮೈನಸ್ ೨೧೪ ಡಿಗ್ರಿ ಸೆಲ್ಷಿಯಸ್ಅದರೆ ಗ್ರಹದ ಗರ್ಭದಲ್ಲಿ ಉಷ್ಣತೆ ೨೩೦೦ ಡಿಗ್ರಿ ಸೆಲ್ಷಿಯಸ್ ನಿಂದ ೭೦೦೦ ಡಿಗ್ರಿ ಸೆಲ್ಷಿಯಸ್ವರೆಗೆ ಇದೆ.ಹೀಗಾಗಿ ಇದರ ಮೇಲ್ಮೈಯಲ್ಲಿ ಚಳಿ ಹೆಚ್ಚು. ಇದಕ್ಕೆ ೧೭ ಉಪಗ್ರಹಗಳಿವೆ.
ನಮ್ಮ ಸೌರವ್ಯೂಹ |
ಸೂರ್ಯ | ಬುಧ | ಶುಕ್ರ | ಭೂಮಿ (ಚಂದ್ರ) | ಮಂಗಳ | ಎಸ್ಟೆರೊಇಡ್ ಪಟ್ಟಿ |
ಗುರು | ಶನಿ | ಯುರೇನಸ್ | ನೆಪ್ಚೂನ್ | ಪ್ಲುಟೊ | ಕೈಪರ್ ಪಟ್ಟಿ | ಊರ್ಟ್ ಮೋಡ |