ಬೆಂಜಮಿನ್ ಫ್ರ್ಯಾಂಕ್‌ಲಿನ್
From Wikipedia
ಬೆಂಜಮಿನ್ ಫ್ರ್ಯಾಂಕ್ಲಿನ್ - ವಿಶ್ವದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು.(ಜನವರಿ ೧೭,೧೭೦೬-ಏಪ್ರಿಲ್ ೧೭,೧೭೯೦).
ಅಮೆರಿಕ ಸಂಯುಕ್ತ ಸಂಸ್ಥಾನದ ಬೋಸ್ಟನ್ ನಲ್ಲಿ ಜನನ.ಚಿಕ್ಕಂದಿನಿಂದಲೇ ವಿಜ್ಞಾನದಲ್ಲಿ ಆಸಕ್ತಿ.ಮುದ್ರಣಾಲಯದಲ್ಲಿ ಮೊಳೆ ಜೋಡಿಸುವುದರಿಂದ ಹಿಡಿದು,ಲೇಖನ ಬರೆಯುವವರೆಗೂ ಎಲ್ಲ ಕೆಲಸಗಳನ್ನು ಮಾಡಿದರು.ಇವರು ವಿಜ್ಞಾನಿಯಷ್ಟೇ ಅಲ್ಲ,ರಾಜಕಾರಣಿ,ಉತ್ತಮ ಬರಹಗಾರರೂ ಆಗಿದ್ದರು. ೧೭೫೨ರಲ್ಲಿ ಗುಡುಗು,ಬಿರುಗಾಳಿಯ ಸಂದರ್ಭದಲ್ಲಿ ಆಕಾಶದಲ್ಲಿ ಗಾಳಿಪಟವನ್ನು ಹಾರಿಸುವಾಗ,ಮಿಂಚಿನಲ್ಲಿ ವಿದ್ಯುತ್ ಇದೆ ಎಂದು ಕಂಡುಕೊಂಡರು.ಈ ಘಟನೆ ಫ್ರಾಂಕ್ಲಿನ್ಗೆ ಮಿಂಚುವಾಹಕಗಳನ್ನು ತಯಾರಿಸಲು ಪ್ರೇರೇಪಣೆಯಾಯಿತು.ಬೆಂಜಮಿನ್ ಫ್ರಾಂಕ್ಲಿನ್ ಮಿಂಚುವಾಹಕಗಳನ್ನಲ್ಲದೆ ಸ್ಟೌವ್,ಕನ್ನಡಕ ಮುಂತಾದುವನ್ನು ನಿರ್ಮಿಸಿದರು.ವಾತಾಯನ ವ್ಯವಸ್ಥೆ ಸರಿ ಇಲ್ಲದ ಕೋಣೆಗಳಲ್ಲಿದ್ದರೆ ಕಾಯಿಲೆ ಬಹು ಬೇಗ ಹರಡುತ್ತದೆ ಎಂಬುದನ್ನು ತಿಳಿಸಿದರು.ಲಂಡನ್ನಿನ ರಾಯಲ್ ಸೊಸೈಟಿಯ ಸದಸ್ಯತ್ವ ಇವರಿಗೆ ಲಭಿಸಿತು.
೧೭೫೩ರ ನಂತರ ಅಮೆರಿಕದಲ್ಲಿ ಅನೇಕ ಮಿಂಚುವಾಹಕಗಳನ್ನು ತಯಾರಿಸಿ,ಎಡ್ ಸ್ಟೋನ್ ಲೈಟ್ ಹೌಸ್,ಇಟಲಿಯ ಸಿಡಿಮದ್ದು ಪುಡಿ ಭಂಡಾರ,ಬ್ರಿಟಿಷ್ ಸಿಡಿಮದ್ದು ಉಗ್ರಾಣ ಮುಂತಾದ ಬಹುಮುಖ್ಯ ಕಟ್ಟಡಗಳನ್ನು ರಕ್ಷಿಸಲಾಯಿತು.ವಿದ್ಯುಚ್ಛಕ್ತಿ ಕ್ಷೇತ್ರದಲ್ಲಿ ಫ್ರಾಂಕ್ಲಿನ್ನದು ಅಚ್ಚಳಿಯದ ಹೆಸರು.