ವಿಂದಾ ಕರಂದೀಕರ್
From Wikipedia
ಗೋವಿಂದ್ ವಿನಾಯಕ್ ಕರಂದೀಕರ್ (ಜನನ: ಆಗಸ್ಟ್ ೨೩, ೧೯೧೮): ವಿಂದಾ ಕರಂದೀಕರ್ ಎಂದೇ ಕರೆಯಲ್ಪಡುವ ಮರಾಠಿ ಕವಿ. ಇವರಿಗೆ ೨೦೦೩ ವರ್ಷದ ಜ್ಞಾನಪೀಠ ಪ್ರಶಸ್ತಿ ಸಂದಿದೆ. ಇವರು ಆಧುನಿಕ ಮರಾಠಿ ಕವಿಗಳಲ್ಲಿ ಪ್ರಯೋಗಶೀಲರೆಂದು ವಿಮರ್ಶಕರ ಅಭಿಪ್ರಾಯವಾಗಿದೆ. ಕಾವ್ಯವಷ್ಟೇ ಅಲ್ಲದೆ, ಪ್ರಬಂಧ, ವಿಮರ್ಶೆ ಹಾಗು ಅನುವಾದಗಳನ್ನು ಸಹ ಮಾಡಿದ್ದಾರೆ. ಅರಿಸ್ಟೋಟಲ್ ರಚಿಸಿದ ಗ್ರೀಕ್ ಕಾವ್ಯಗಳನ್ನು ಮರಾಠಿ ಭಾಷೆಗೆ ಅನುವಾದಿಸಿದ್ದಾರೆ ಹಾಗು ತಮ್ಮ ಕವಿತೆಗಳನ್ನು ಆಂಗ್ಲ ಭಾಷೆಗೆ ಭಾಷಾಂತರಿಸಿ, ಆಂಗ್ಲದಲ್ಲಿಯೂ "ವಿಂದಾ ಪೊಯೆಮ್ಸ್ ಆಫ್ ೧೯೭೫" ಕವನ ಸಂಕಲನವನ್ನು ರಚಿಸಿರುವರು. ಧ್ಯಾನೇಶ್ವರಿ, ಅಮೃತಾನುಭವ್ ನಂತಹ ಹಳೆಯ ಮರಾಠಿ ಸಾಹಿತ್ಯ ಕೃತಿಗಳಿಗೆ ನೂತನ ರೂಪ ಕೊಟ್ಟಿರುತ್ತಾರೆ. ಇವರು ಜ್ಞಾನಪೀಠ ಪಡೆದಿರುವ ೩ನೆಯ ಮರಾಠಿ ಸಾಹಿತಿ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
- ಸ್ವೇದಗಂಗಾ (೧೯೪೯)
- ಮೃದ್ಗಂಧ್ (೧೯೫೪)
- ಧ್ರುಪದ್
- ಸಂಹಿತಾ
- ವಿರೂಪಿಕಾ
[ಬದಲಾಯಿಸಿ] ಶಿಶು ಸಾಹಿತ್ಯ
- ರಾಣಿಚಿ ಬಾಗ್
- ಸಶಾಚೇ ಕಾನ
- ಪರಿ ಗ ಪರಿ
[ಬದಲಾಯಿಸಿ] ಪ್ರಶಸ್ತಿ
- ಜ್ಞಾನಪೀಠ ಪ್ರಶಸ್ತಿ
- ಕೇಶವಸುತ ಪ್ರಶಸ್ತಿ
- ಸೋವಿಯತ್ ಲ್ಯಾಂಡ್ ನೆಹರು ಸಾಹಿತ್ಯ ಪ್ರಶಸ್ತಿ
- ಕಬೀರ್ ಸಮ್ಮಾನ್
- ಸಾಹಿತ್ಯ ಅಕಾಡೆಮಿಯ ಫೆಲೋಷಿಪ್
[ಬದಲಾಯಿಸಿ] ಹೊರಗಿನ ಸಂಪರ್ಕ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
ಕನ್ನಡ
ಕುವೆಂಪು | ದ.ರಾ.ಬೇಂದ್ರೆ | ವಿನಾಯಕ ಕೃಷ್ಣ ಗೋಕಾಕ | ಶಿವರಾಮ ಕಾರಂತ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯು.ಆರ್.ಅನಂತಮೂರ್ತಿ | ಗಿರೀಶ್ ಕಾರ್ನಾಡ್
ಹಿಂದಿ
ಮಹಾದೇವಿ ವರ್ಮ | ನಿರ್ಮಲಾ ವರ್ಮ | ಸುಮಿತ್ರಾ ನಂದನ್ ಪಂತ್ | ರಾಮ್ಧಾರಿ ಸಿಂಘ್ ದಿನಕರ್ | ಅಜ್ಞೇಯ | ನರೇಶ್ ಮೆಹ್ತಾ | ನಿರ್ಮಲ್ ವರ್ಮಾ
ಬೆಂಗಾಲಿ
ಮಹಾಶ್ವೇತಾದೇವಿ
ಗುಜರಾತಿ
ರಾಜೇಂದ್ರ ಕೇಶವ್ಲಾಲ್ ಷಾ
ಮರಾಠಿ
ವಿಂದಾ ಕರಂದೀಕರ್ | ಕುಸುಮಾಗ್ರಜ್
ತೆಲುಗು
ವಿಶ್ವನಾಥ ಸತ್ಯನಾರಾಯಣ
ಮಳಯಾಳಂ
ಎಂ.ಟಿ.ವಾಸುದೇವನ್ ನಾಯರ್ | ಜಿ. ಶಂಕರ ಕುರುಪ್