ಮಹಾಶ್ವೇತಾದೇವಿ
From Wikipedia
ಮಹಾಶ್ವೇತಾದೇವಿ ಯವರು ಬಾಂಗ್ಲಾದೇಶದ ರಾಜಧಾನಿಯಾಗಿರುವ ಢಾಕಾದಲ್ಲಿ ೧೯೨೬ ಜನೆವರಿಯಲ್ಲಿ ಜನಿಸಿದರು. ಸಾಮಾಜಿಕವಾಗಿ ಸೂಕ್ಷ್ಮಸಂವೇದಿಯಾದ ಮಹಾಶ್ವೇತಾದೇವಿ, ೧೭ ವರ್ಷದವರಿದ್ದಾಗಲೆ ಬಂಗಾಲದ ಬರಗಾಲದಲ್ಲಿ (೧೯೪೩), ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಿದ್ದರು.
[ಬದಲಾಯಿಸಿ] ಶಿಕ್ಷಣ, ವಿವಾಹ, ಉದ್ಯೋಗ ಜೀವನ
ರವೀಂದ್ರನಾಥ ಠಾಗೋರರ ಶಾಂತಿನಿಕೇತನದಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ ಮಹಾಶ್ವೇತಾದೇವಿ ೧೯೪೭ರಲ್ಲಿ ಬಿಜನ ಭಟ್ಟಾಚಾರ್ಯ ಎನ್ನುವ ನಾಟಕಕಾರರೊಂದಿಗೆ ಮದುವೆಯಾದರು. ಅಂಚೆ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ನೌಕರಿ ಪ್ರಾರಂಭಿಸಿದ ಮಹಾಶ್ವೇತಾದೇವಿ, ಕಮ್ಯುನಿಸ್ಟ ರಿರುವರೆಂಬ ಕಾರಣದಿಂದಾಗಿ ನೌಕರಿ ಕಳೆದುಕೊಂಡರು. ಹೊಟ್ಟೆಪಾಡಿಗಾಗಿ ವಿವಿಧ ಚಿಲ್ಲರೆ ಕೆಲಸಗಳನ್ನು ಮಾಡಿದರು.( ಅಮೆರಿಕೆಗೆ ಮಂಗಗಳನ್ನು ರಫ್ತು ಮಾಡುವ ಕೆಲಸವನ್ನು ಸಹ!).
೧೯೬೨ರಲ್ಲಿ ಬಿಜನ ಭಟ್ಟಾಚಾರ್ಯರಿಂದ ವಿಚ್ಚೇದಿತೆಯಾದ ಮಹಾಶ್ವೇತಾದೇವಿ ಅಸಿತ ಗುಪ್ತಾ ಎನ್ನುವ ಲೇಖಕರನ್ನು ಮದುವೆಯಾದರು. ೧೯೬೩ರಲ್ಲಿ ಇಂಗ್ಲಿಷ ಸಾಹಿತ್ಯದಲ್ಲಿ ಎಮ್.ಏ. ಪದವಿ ಪಡೆದುಕೊಂಡು, ಕಾಲೇಜ ಅಧ್ಯಾಪಕರಾದರು.೧೯೮೪ರಲ್ಲಿ ಈ ವೃತ್ತಿಗೆ ರಾಜೀನಾಮೆ ನೀಡಿದ ಮಹಾಶ್ವೇತಾದೇವಿ ತಮ್ಮನ್ನು ಸಂಪೂರ್ಣವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಆದಿವಾಸಿ ಜನರಿಗೆ ಇವರು ಸಲ್ಲಿಸಿದ ಸೇವೆಗಾಗಿ ೧೯೭೯ರಲ್ಲಿ ಭಾರತ ಸರಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಅದೇ ವರ್ಷ ಇವರ ಕಾದಂಬರಿ ಅರಣ್ಯೇರ ಅಧಿಕಾರ ಕ್ಕೆ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿತು.
ಮಹಾಶ್ವೇತಾದೇವಿಯವರಿಗೆ ೧೯೯೬ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಯಿತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
ಕನ್ನಡ
ಕುವೆಂಪು | ದ.ರಾ.ಬೇಂದ್ರೆ | ವಿನಾಯಕ ಕೃಷ್ಣ ಗೋಕಾಕ | ಶಿವರಾಮ ಕಾರಂತ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯು.ಆರ್.ಅನಂತಮೂರ್ತಿ | ಗಿರೀಶ್ ಕಾರ್ನಾಡ್
ಹಿಂದಿ
ಮಹಾದೇವಿ ವರ್ಮ | ನಿರ್ಮಲಾ ವರ್ಮ | ಸುಮಿತ್ರಾ ನಂದನ್ ಪಂತ್ | ರಾಮ್‍ಧಾರಿ ಸಿಂಘ್ ದಿನಕರ್ | ಅಜ್ಞೇಯ | ನರೇಶ್ ಮೆಹ್ತಾ | ನಿರ್ಮಲ್ ವರ್ಮಾ
ಬೆಂಗಾಲಿ
ಮಹಾಶ್ವೇತಾದೇವಿ
ಗುಜರಾತಿ
ರಾಜೇಂದ್ರ ಕೇಶವ್‌ಲಾಲ್ ಷಾ
ಮರಾಠಿ
ವಿಂದಾ ಕರಂದೀಕರ್ | ಕುಸುಮಾಗ್ರಜ್
ತೆಲುಗು
ವಿಶ್ವನಾಥ ಸತ್ಯನಾರಾಯಣ
ಮಳಯಾಳಂ
ಎಂ.ಟಿ.ವಾಸುದೇವನ್ ನಾಯರ್ | ಜಿ. ಶಂಕರ ಕುರುಪ್