ಸಿಂಧೂತಟದ ನಾಗರೀಕತೆ
From Wikipedia
ಸಿಂಧೂ ನದಿಯ ತಟದಲ್ಲಿ ಕ್ರಿ.ಪೂ. ೨೫೦೦ರ ಸುಮಾರಿನಲ್ಲಿ ನೀರಾವರಿ ಆರಂಭವಾಯಿತು. ಇದರೊಂದಿಗೆ ಪ್ರಗತಿಗೊಂಡ ನಾಗರೀಕತೆ ಸಿಂಧೂತಟದ ನಾಗರೀಕತೆ ಅಥವ ಸಿಂಧೂಕಣಿವೆ ನಾಗರೀಕತೆ (Indus Valley Civilization) ಎಂದು ಕರೆಯಲ್ಪಟ್ಟಿದೆ. ಈ ನಾಗರೀಕತೆ ಸುಮಾರು ಕ್ರಿ.ಪೂ. ೨೫೦೦ರಿಂದ ಕ್ರಿ.ಪೂ. ೧೯೦೦ರ ವರೆಗೆ ಪ್ರಗತಿಗೊಂಡಿತು. ಈ ನಾಗರೀಕತೆಯ ಮುಖ್ಯ ನಗರಿಗಳಾದ ಹರಪ್ಪ ಮತ್ತು ಮೋಹೆನ್ಜದಾರೊ ಭಾರತದ ಮೊದಲ ನಗರಿಗಳೆಂದು ಪರಿಗಣಿಸಲ್ಪಟ್ಟಿವೆ.