ಮೊಹಮ್ಮದ ಯೂನುಸ್
From Wikipedia
ಮೊಹಮ್ಮದ ಯೂನುಸ್ ಬಾಂಗ್ಲಾದೇಶದ ಪ್ರಥಮ ನೋಬೆಲ್ ಪ್ರಶಸ್ತಿ ಪುರಸ್ಕೃತ ವ್ಯಕ್ತಿ.ಬಡವರ ಬ್ಯಾಂಕರ್(Banker to the poor) ಎಂದೇ ಪ್ರಖ್ಯಾತ.
ಪರಿವಿಡಿ |
[ಬದಲಾಯಿಸಿ] ಜನನ,ಬಾಲ್ಯ
ಇವರು ಜೂನ್ ೨೮ ೧೯೪೦ರಲ್ಲಿಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಜನಿಸಿದರು.ತಂದೆ ಒಬ್ಬ ಸಫಲ ಒಡವೆ ವ್ಯಾಪಾರಿ.ಇವರ ಮೇಲೆ ಹೆಚ್ಚು ಪ್ರಭಾವ ಬೀರಿದ್ದು ಯಾವಾಗಲೂ ಬಡವರ ಸಹಾಯಕ್ಕೆ ಧಾವಿಸುತ್ತಿದ್ದ ತಾಯಿ ಸೋಫಿಯ ಖಾತುಮ್.
[ಬದಲಾಯಿಸಿ] ಓದು,ಉದ್ಯೋಗ
ಬಾಲ್ಯದಿಂದಲೇ ಅಸಾಧಾರಣ ಪ್ರತಿಭಾವಂತ.೧೯೬೫ರಲ್ಲಿ ಅಮೆರಿಕದ ಟೆನ್ನೆಸ್ಸಿಯ ವಂಡರ್‍ಬಿಲ್ಟ್(Vanderbilt) ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್‌ಡಿ ಮಾಡಲು ಫುಲ್‌ಬ್ರೈಟ್ ಫೆಲ್ಲೋಶಿಪ್(Fullbright Fellowship)ಪಡೆದ ವಿದ್ಯಾರ್ಥಿ.
ಇವರು ಖ್ಯಾತ ಅರ್ಥಶಾಸ್ತ್ರಜ್ಞರು.ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.ಆದರೆ ೧೯೭೪ರ ಬಾಂಗ್ಲಾ ಬರಗಾಲ ಇವರ ಜೀವನದ ದಿಕ್ಕನ್ನೇ ಬದಲಾಯಿಸಿತು.
[ಬದಲಾಯಿಸಿ] ಗ್ರಾಮೀಣ ಬ್ಯಾಂಕ್‌ನ ಸ್ಥಾಪಕ
ಇವರು ಗ್ರಾಮೀಣ್ ಬ್ಯಾಂಕ್ ನ ಸ್ಥಾಪಕರು.ಗ್ರಾಮೀಣ ಬ್ಯಾಂಕ್‌ನ ಸ್ಥಾಪನೆಗೆ ೧೯೭೪ರ ಬರಗಾಲ ಪ್ರೇರೇಪಣೆ ನೀಡಿತು.ಒಂದು ಹಳ್ಳಿಯ ಗ್ರಾಮಸ್ಥರನ್ನು ಲೇವಾದೇವಿಗಾರರ ಕಪಿಮುಷ್ಟಿಯಿಂದ ರಕ್ಷಿಸಲು $೨೭ರ ಬಂಡವಾಳದೊಂದಿಗೆ ಗ್ರಾಮೀಣ ಬ್ಯಾಂಕ್ ಪ್ರಾರಂಭ ಮಾಡಿದರು.ಯೂನುಸ್‌ರ ಬಡತನದ ವಿರುದ್ಧದ ಹೋರಾಟವೂ ಅಂದಿನಿಂದಲೇ ಶುರುವಾಯಿತು.ಇವತ್ತು ಗ್ರಾಮೀಣ ಬ್ಯಾಂಕ್‌ನ ಶಾಖೆಗಳು ಬಾಂಗ್ಲಾದೇಶದಲ್ಲಿ ಮಾತ್ರವಲ್ಲದೆ ೧೦೦ಕ್ಕೂ ಹೆಚ್ಚಿನ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.ಅಮೆರಿಕದಿಂದ ಹಿಡಿದು,ಉಗಾಂಡದವರೆಗೂ ಈ ಬ್ಯಾಂಕ್‌ನ ಶಾಖೆಗಳು ಹರಡಿವೆ.ಈ ಸಮಾಜಸೇವಾಕಾರ್ಯಕ್ಕೆ ತೊಡಿಸಿದ ಕಿರೀಟವೇ ಇವರಿಗೆ ಸಂದ ೨೦೦೬ನೇ ಸಾಲಿನ ನೋಬೆಲ್ ಶಾಂತಿ ಪುರಸ್ಕಾರ. [೧].
[ಬದಲಾಯಿಸಿ] ಗ್ರಾಮೀಣ ಬ್ಯಾಂಕ್
ಯೂನುಸ್ ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್, ಬಡಜನರಿಗೆ ಯಾವುದೇ ಹಣಕಾಸಿನ ಜಾಮೀನು ಕೇಳದೆ ಸಾಲ ನೀಡುತ್ತದೆ.ಮೈಕ್ರೋ ಕ್ರೆಡಿಟ್(Micro-Credit)ಎಂಬ ಕಲ್ಪನೆಯನ್ನು ಸಾಕಾರಗೊಳಿಸಿದವರಲ್ಲಿ ಯೂನುಸ್ ಒಬ್ಬರು.ಈ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳ ಉಪಟಳವಿಲ್ಲದೆ,ಬ್ಯಾಂಕ್ ಸಾಲ ಪಡೆಯಲಾಗದ ಬಡ ಉದ್ಯಮಿಗಳು,ಸಾಲ ಪಡೆದು ಸ್ವಯಂ ಉದ್ಯೋಗಿಗಳಾಗುವ ಅವಕಾಶ ಸಿಗುತ್ತದೆ.ಯೂನುಸ್‌ರವರು "ಮೈಕ್ರೋ ಕ್ರೆಡಿಟ್"ನ್ನು ಬಡತನದ ವಿರುದ್ಧದ ಹೋರಾಟಕ್ಕೆ ಅಸ್ತ್ರವನ್ನಾಗಿ ರೂಪಿಸಿದರು.
ಈಗ ಗ್ರಾಮೀಣ ಬ್ಯಾಂಕ್‌ನಲ್ಲಿ ೬.೫ ದಶಲಕ್ಷ ಸಾಲಗಾರರಿದ್ದಾರೆ.ಅದರಲ್ಲಿ ಶೇಕಡಾ ೯೬ ಮಹಿಳೆಯರು.ಈ ಬ್ಯಾಂಕ್‌ನ ೨೨೨೬ ಶಾಖೆಗಳು ೭೧೩೭೧ ಹಳ್ಳಿಗಳಲ್ಲಿ ಕಾರ್ಯ ನಿರತವಾಗಿವೆ.
[ಬದಲಾಯಿಸಿ] ಕುಟುಂಬ
ಈಗ ಯೂನುಸ್‌ರವರು ಧಾಕಾದ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಭೌತವಿಜ್ಞಾನಿ ಪತ್ನಿ ಅಫ್ರೋಝಿ ಹಾಗೂ ಮಗಳು ದೀನಾಳೊಂದಿಗೆ ವಾಸಿಸುತ್ತಾರೆ.