ಭಾರತ ರತ್ನ
From Wikipedia
ಭಾರತ ಪದಕಗಳು ಮತ್ತು ಪುರಸ್ಕಾರಗಳು |
ಶೌರ್ಯ ಪರಮ ವೀರ ಚಕ್ರ |
ಅಸಾಧಾರಣ ಸೇವೆ ಸರ್ವೋತ್ತಮ ಯುದ್ಧ ಸೇವಾ ಪದಕ |
ನಾಗರಿಕ ರಾಷ್ಟ್ರೀಯ ಸೇವೆ |
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ.
ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರದಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೫೫ ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದು ವರೆಗೆ ಒಟ್ಟು ಏಳು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೮ ರಲ್ಲಿ).
ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.
[ಬದಲಾಯಿಸಿ] ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ
ಹೆಸರು | ಪ್ರಶಸ್ತಿ ಪಡೆದ ವರ್ಷ |
ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ (೧೮೮೮-೧೯೭೫) | ೧೯೫೪ |
ಚಕ್ರವರ್ತಿ ರಾಜಗೋಪಾಲಾಚಾರಿ (೧೮೭೮-೧೯೭೨) | ೧೯೫೪ |
ಚಂದ್ರಶೇಖರ ವೆಂಕಟ ರಾಮನ್ (೧೮೮೮-೧೯೭೦) | ೧೯೫೪ |
ಡಾ. ಭಗವಾನ್ ದಾಸ್ (೧೮೬೯-೧೯೫೮) | ೧೯೫೫ |
ಮೋಕ್ಷಗುಂಡಂ ವಿಶ್ವೇಶ್ವರಾಯ (೧೮೬೧-೧೯೬೨) | ೧೯೫೫ |
ಜವಾಹರ್‌ಲಾಲ್ ನೆಹರು (೧೮೮೯-೧೯೬೪) | ೧೯೫೫ |
ಗೋವಿಂದ ವಲ್ಲಭ ಪಂತ್ (೧೮೮೭-೧೯೬೧) | ೧೯೫೭ |
ಡಾ. ಧೊಂಡೊ ಕೇಶವ ಕರ್ವೆ (೧೮೫೮-೧೯೬೨) | ೧೯೫೮ |
ಡಾ. ಬಿಧನ್ ಚಂದ್ರ ರಾಯ್ (೧೮೮೨-೧೯೬೨) | ೧೯೬೧ |
ಪುರುಷೋತ್ತಮ್ ದಾಸ್ ತಂಡನ್ (೧೮೮೨-೧೯೬೨) | ೧೯೬೧ |
ಡಾ. ರಾಜೇಂದ್ರ ಪ್ರಸಾದ್ (೧೮೮೪-೧೯೬೩) | ೧೯೬೨ |
ಡಾ. ಜಾಕಿರ್ ಹುಸೇನ್ (೧೮೯೭-೧೯೬೯) | ೧೯೬೩ |
ಡಾ. ಪಾಂಡುರಂಗ ವಾಮನ ಕಾಣೆ (೧೮೮೦-೧೯೭೨) | ೧೯೬೩ |
ಲಾಲ್ ಬಹಾದುರ್ ಶಾಸ್ತ್ರಿ (ಮರಣಾನಂತರ) (೧೯೦೪-೧೯೬೬) | ೧೯೬೬ |
ಇಂದಿರಾ ಗಾಂಧಿ (೧೯೧೭-೧೯೮೪) | ೧೯೭೧ |
ವಿ ವಿ ಗಿರಿ (೧೮೯೪-೧೯೮೦) | ೧೯೭೫ |
ಕುಮಾರಸ್ವಾಮಿ ಕಾಮರಾಜ್ (ಮರಣಾನಂತರ) (೧೯೦೩-೧೯೭೫) | ೧೯೭೬ |
ಮದರ್ ತೆರೇಸಾ (೧೯೧೦-೧೯೯೭) | ೧೯೮೦ |
ವಿನೋಬಾ ಭಾವೆ (ಮರಣಾನಂತರ) (೧೮೯೫-೧೯೮೨) | ೧೯೮೩ |
ಖಾನ್ ಅಬ್ದುಲ್ ಗಫಾರ್ ಖಾನ್ (೧೮೯೦-೧೯೮೮) | ೧೯೮೭ |
ಎಮ್ ಜಿ ರಾಮಚಂದ್ರನ್ (ಮರಣಾನಂತರ) (೧೯೧೭-೧೯೮೭) | ೧೯೮೮ |
ಡಾ. ಬಿ.ಆರ್.ಅಂಬೇಡ್ಕರ್ (ಮರಣಾನಂತರ) (೧೮೯೧-೧೯೫೬) | ೧೯೯೦ |
ಡಾ. ನೆಲ್ಸನ್ ಮಂಡೇಲಾ (ಜನನ: ೧೯೧೮) | ೧೯೯೦ |
ರಾಜೀವ್ ಗಾಂಧಿ (ಮರಣಾನಂತರ) (೧೯೪೪-೧೯೯೧) | ೧೯೯೧ |
ಸರ್ದಾರ್ ವಲ್ಲಭಭಾಯ್ ಪಟೇಲ್ (ಮರಣಾನಂತರ) (೧೮೭೫-೧೯೫೦) | ೧೯೯೧ |
ಮೊರಾರ್ಜಿ ದೇಸಾಯಿ (೧೮೯೬-೧೯೯೫) | ೧೯೯೧ |
ಮೌಲಾನಾ ಅಬ್ದುಲ್ ಕಲಮ್ ಆಜಾದ್ (೧೮೮೮-೧೯೫೮) | ೧೯೯೨ |
ಜೆ.ಆರ್.ಡಿ.ಟಾಟಾ (೧೯೦೪-೧೯೯೩) | ೧೯೯೨ |
ಸತ್ಯಜಿತ್ ರೇ (೧೯೨೨-೧೯೯೨) | ೧೯೯೨ |
ಎಪಿಜೆ ಅಬ್ದುಲ್ ಕಲಮ್ (ಜನನ: ೧೯೩೧) | ೧೯೯೭ |
ಗುಲ್ಜಾರಿಲಾಲ್ ನಂದಾ (೧೮೯೮-೧೯೯೮) | ೧೯೯೭ |
ಅರುಣಾ ಅಸಫ್ ಅಲಿ (ಮರಣಾನಂತರ) (೧೯೦೬-೧೯೯೫) | ೧೯೯೭ |
ಎಮ್ ಎಸ್ ಸುಬ್ಬುಲಕ್ಷ್ಮಿ (೧೯೧೬-೨೦೦೪) | ೧೯೯೮ |
ಚಂದ್ರಶೇಖರ್ ಸುಬ್ರಹ್ಮಣ್ಯಮ್ (೧೯೧೦-೨೦೦೦) | ೧೯೯೮ |
ಜಯಪ್ರಕಾಶ್ ನಾರಾಯಣ್ (೧೯೦೨-೧೯೭೯) | ೧೯೯೮ |
ರವಿ ಶಂಕರ್ (ಜನನ: ೧೯೨೦) | ೧೯೯೯ |
ಅಮರ್ತ್ಯ ಸೇನ್ (ಜನನ: ೧೯೩೩) | ೧೯೯೯ |
ಗೋಪಿನಾಥ್ ಬೋರ್ಡೊಲೋಯಿ (ಜನನ: ೧೯೨೭) | ೧೯೯೯ |
ಲತಾ ಮಂಗೇಶ್ಕರ್ (ಜನನ: ೧೯೨೯) | ೨೦೦೧ |
ಬಿಸ್ಮಿಲ್ಲಾ ಖಾನ್ (ಜನನ: ೧೯೧೬) | ೨೦೦೧ |