ಹುಕ್ಕೇರಿ ಬಾಳಪ್ಪ
From Wikipedia
ಹುಕ್ಕೇರಿ ಬಾಳಪ್ಪ ಇವರು ಸವದತ್ತಿ ತಾಲೂಕಿನ ಮುರಗೋಡ ಗ್ರಾಮದವರು. ಇವರ ಜನನ ೧೯೦೯ರಲ್ಲಿ. ಬಾಲ್ಯದಲ್ಲಿ ಶಾಸ್ತ್ರೀಯ ಸಂಗೀತ ಕಲಿಯಲು ಆರಂಭಿಸಿ ಸ್ವಲ್ಪ ಮಟ್ಟಿಗೆ ಕಲಿತಿದ್ದರು. ಆದರೆ ಜಾನಪದ ಗಾಯನದ ಸೆಳೆತದಿಂದಾಗಿ ಆ ದಿಕ್ಕಿನಲ್ಲಿ ನಡೆದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ , ತಮ್ಮ ಹಾಡುಗಳೊಂದಿಗೆ ಜನರನ್ನು ಹುರುಪಿಗೆಬ್ಬಿಸಿದ್ದಾರೆ. ಆರು ತಿಂಗಳುಗಳ ಜೇಲುವಾಸವನ್ನೂ ಸಹ ಅನುಭವಿಸಿದ್ದಾರೆ.
ಬಾಳಪ್ಪನವರು ರಂಗಗೀತೆಗಳನ್ನೂ ಹಾಡಿದ್ದಾರೆ ; ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ ಹಾಗು ಕುವೆಂಪು ಇವರ ಹಾಡುಗಳನ್ನೂ ಸಹ ಹಾಡಿದ್ದಾರೆ. ಅವರು ಹಾಡುವಾಗಿನ ಹಾವಭಾವ ಅವರಿಗೇ ವಿಶಿಷ್ಟವಾದದ್ದು
ಚುಟುಕಾಗಿರಿಸಿದ ಬರಹಗಳು... ಈ ಬರಹಗಳನ್ನು ಮುಂದುವರೆಸಲು ನಿಮ್ಮ ಸಹಾಯ ಅತ್ಯಗತ್ಯ.