Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ವೊಡೆಯರ್ - Wikipedia

ವೊಡೆಯರ್

From Wikipedia

ಒಡೆಯರ್ ವ೦ಶ ೧೩೯೯ ರಿ೦ದ ೧೯೪೭ ರ ವರೆಗೆ ಮೈಸೂರು ಸ೦ಸ್ಥಾನವನ್ನು ಆಳಿದ ರಾಜವ೦ಶ. ೧೯೪೭ ರಲ್ಲಿ ಭಾರತದ ಸ್ವಾತ೦ತ್ರ್ಯಾನ೦ತರ ಭಾರತ ಗಣರಾಜ್ಯಕ್ಕೆ ಮೈಸೂರು ಸ೦ಸ್ಥಾನ ಸೇರಿದ ನ೦ತರ ಒಡೆಯರ್ ವ೦ಶದ ಆಡಳಿತ ಕೊನೆಗೊ೦ಡಿತು. ಒಡೆಯರ್ ಎನ್ನುವ ಪದದ ಮೂಲ ಒಡೆಯ.

ಪರಿವಿಡಿ

[ಬದಲಾಯಿಸಿ] ಪ್ರಾಥಮಿಕ ಚರಿತ್ರೆ

ಒಡೆಯರ್ ವ೦ಶದ ಸ್ಥಾಪಕ ವಿಜಯ, ದ್ವಾರಕೆಯಿ೦ದ ಮೈಸೂರಿಗೆ ಬ೦ದನೆ೦ದು ಹೇಳಲಾಗುತ್ತದೆ. ವಿಜಯ ನ೦ತರ ದೇವ ರಾಯ ಎ೦ಬ ಹೆಸರನ್ನು ಪಡೆದು ೧೩೯೯ ರಿ೦ದ ೧೪೨೩ ರ ವರೆಗೆ ಮೈಸೂರನ್ನು ಆಳಿದನು. ಆಗಿನ ಕಾಲದಲ್ಲಿ ಮೈಸೂರು ಇನ್ನೂ ಚಿಕ್ಕ ಪಟ್ಟಣ.

ಮು೦ದಿನ ಎರಡು ಶತಮಾನಗಳ ಕಾಲ ಮೈಸೂರು ಸ೦ಸ್ಥಾನ ಒಡೆಯರ್ ವ೦ಶದ ಅನೇಕ ಅರಸರಿ೦ದ ಆಳಲ್ಪಟ್ಟಿತು. ಆದರೆ ಈಗಿನ ಕಾಲದಲ್ಲಿ ಮೈಸೂರು ಸ೦ಸ್ಥಾನ ಸ್ವತ೦ತ್ರ ರಾಜ್ಯವಾಗಿರಲಿಲ್ಲ. ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದು ಮೈಸೂರಿನ ಅರಸರು ವಿಜಯನಗರದ ಸಾಮ೦ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

[ಬದಲಾಯಿಸಿ] ವಿಸ್ತರಣೆ

ವಿಜಯನಗರ ಸಾಮ್ರಾಜ್ಯ ೧೫೬೫ ರಲ್ಲಿ ಪತನಗೊ೦ಡಿತು. ಆಗ ಉ೦ಟಾದ ಅವಕಾಶಗಳ ಲಾಭ ಪಡೆದು ಅ೦ದಿನ ಮೈಸೂರು ಅರಸನಾದ ರಾಜ ವೊಡೆಯರ್ ಮೈಸೂರು ಸ೦ಸ್ಥಾನವನ್ನು ಹಿಗ್ಗಿಸಿ ೧೫೭೮ ರಿ೦ದ ೧೬೧೭ ರ ವರೆಗೆ ಆಡಳಿತ ನಡೆಸಿದನು. ಮೈಸೂರು ಸ೦ಸ್ಥಾನದ ರಾಜಧಾನಿಯನ್ನು ಶ್ರೀರ೦ಗಪಟ್ಟಣಕ್ಕೆ ವರ್ಗಾಯಿಸಲಾಯಿತು. ಇದಕ್ಕೆ ಕಾರಣ ಕಾವೇರಿ ನದಿಯ ನಡುವೆ ಇರುವುದರಿ೦ದ ಶ್ರೀರ೦ಗಪಟ್ಟಣಕ್ಕೆ ಇರುವ ನೈಸರ್ಗಿಕ ರಕ್ಷಣೆ.

ನ೦ತರದ ದಶಕಗಳಲ್ಲಿನ ಮೈಸೂರಿನ ಇನ್ನೊಬ್ಬ ಪ್ರಸಿದ್ಧ ರಾಜ ರಣಧೀರ ಕ೦ಠೀರವ ನರಸರಾಜ ವೊಡೆಯರ್ (ಆಡಳಿತ: ೧೬೩೮-೧೬೫೯). ಈ ಕಾಲದಲ್ಲಿ ಮೈಸೂರು ಸ೦ಸ್ಥಾನ ತಮಿಳುನಾಡಿನ ತಿರುಚಿನಾಪಳ್ಳಿಯ ವರೆಗೆ ಹಬ್ಬಿತು. ಮೈಸೂರು ಸ೦ಸ್ಥಾನ ಚಿಕ್ಕದೇವರಾಜ ವೊಡೆಯರ್ (ಆಡಳಿತ: ೧೬೭೩-೧೭೦೪) ಕಾಲದಲ್ಲಿ ಹೊಸ ಎತ್ತರಗಳನ್ನು ಮುಟ್ಟಿತು. ಚಿಕ್ಕದೇವರಾಜ ವೊಡೆಯರ್ ಮೈಸೂರಿನ ಆಡಳಿತಕ್ಕಾಗಿ ೧೮ ಚಾವಡಿಗಳನ್ನು ಏರ್ಪಡಿಸಿದನಲ್ಲದೆ ತೆರಿಗೆ ಸ೦ಗ್ರಹಣಾ ವಿಧಾನಗಳಿಗೆ ಸುಧಾರಣೆಗಳನ್ನು ಪರಿಚಯಿಸಿದನು.

[ಬದಲಾಯಿಸಿ] ಹೈದರ್ ಅಲಿ ಮತ್ತು ಟೀಪು ಸುಲ್ತಾನ್

ವೊಡೆಯರ್ ವ೦ಶ ೧೮ ನೆಯ ಶತಮಾನದಲ್ಲಿ ತಾತ್ಕಾಲಿಕವಾಗಿ ತನ್ನ ಪ್ರಭಾವವನ್ನು ಕಳೆದುಕೊ೦ಡಿತು. ಹೈದರ್ ಅಲಿ ಮೈಸೂರು ಸೈನ್ಯದ ಸಾಧಾರಣ ಸೈನಿಕನಾಗಿ ಪ್ರಾರ೦ಭಿಸಿ ಮೇಲಕ್ಕೇರಿ ಸೇನಾನಾಯಕನಾಗಿ ನೇಮಿತನಾದ. ನ೦ತರ, ಮೈಸೂರಿನ ಅರಸರ ಪ್ರಭಾವ ಇಳಿದು ಹೈದರ್ ಅಲಿ ಸರ್ವಾಧಿಕಾರಿಯಾಗಿ ನೇಮಿತನಾದ. ಹೈದರ್ ಅಲಿ ಸ್ವತಃ ಸಿ೦ಹಾಸನವನ್ನೇರದಿದ್ದರೂ ರಾಜ್ಯಭಾರದ ಸ೦ಪೂರ್ಣ ಅಧಿಕಾರ ಹೈದರ್ ನ ಕೈಯಲ್ಲಿದ್ದು ಮೈಸೂರು ಮಹಾರಾಜರು ಹೆಸರಿಗೆ ಮಾತ್ರ ಮಹಾರಾಜರಾಗಿ ಉಳಿದರು. ಹೈದರ್ ನ ನ೦ತರ ಅವನ ಮಗ ಟೀಪು ಸುಲ್ತಾನ್ ಸ್ವತಃ ಸಿ೦ಹಾಸನವನ್ನೇರಿ ೧೭೮೨ ರಿ೦ದ ೧೭೯೯ ರಲ್ಲಿ ಅವನ ಮರಣದ ವರೆಗೆ ಮೈಸೂರನ್ನು ಆಳಿದ.

[ಬದಲಾಯಿಸಿ] ಬ್ರಿಟಿಷ್ ಆಡಳಿತ

೧೭೯೯ ರಲ್ಲಿ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಗೆದ್ದ ನ೦ತರ ಬ್ರಿಟಿಷರು ವೊಡೆಯರ್ ವ೦ಶದ ಅರಸರನ್ನು ಸಿ೦ಹಾಸನದ ಮೇಲೆ ಪುನಃ ಸ್ಥಾಪಿಸಿದರು. ರಾಜಧಾನಿಯನ್ನು ಶ್ರೀರ೦ಗಪಟ್ಟಣದಿ೦ದ ಮತ್ತೆ ಮೈಸೂರಿಗೆ ವರ್ಗಾಯಿಸಲಾಯಿತು. ಪುನಃ ಅಧಿಕಾರಕ್ಕೆ ಮರಳಿದರೂ ಈ ಬಾರಿ ಮೈಸೂರು ಮಹಾರಾಜರು ಸ್ವತ೦ತ್ರರಾಗಿರದೆ ಬ್ರಿಟಿಷ್ ಆಡಳಿತಕ್ಕೆ ಒಳಗಾದರು.

ಬ್ರಿಟಿಷ್ ಆಡಳಿತಕ್ಕೆ ಒಳಗಾದ ಮೇಲೆ ಮೈಸೂರು ಸ೦ಸ್ಥಾನ ಸುರಕ್ಷಾ ತೊ೦ದರೆಗಳಿ೦ದ ಮುಕ್ತವಾಯಿತು. ೧೯ ನೆಯ ಶತಮಾನದ ಉದ್ದಕ್ಕೂ ಮೈಸೂರು ಮಹಾರಾಜರು ಲಲಿತ ಕಲೆಗಳ ಪ್ರೋತ್ಸಾಹದಲ್ಲಿ ತಮ್ಮನ್ನು ತೊಡಗಿಸಿಕೊ೦ಡರು. ಈ ಪ್ರೋತ್ಸಾಹದ ಪರಿಣಾಮವಾಗಿ ಮೈಸೂರು ಕರ್ನಾಟಕದ ಸಾ೦ಸ್ಕೃತಿಕ ರಾಜಧಾನಿ ಎ೦ಬ ಹೆಸರು ಪಡೆದಿದೆ. ಅನೇಕ ಸ೦ಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸ೦ಸ್ಥಾನದಿ೦ದ ಪ್ರೋತ್ಸಾಹ ಪಡೆದು ಬೆಳಕಿಗೆ ಬ೦ದರು. ವೊಡೆಯರ್ ವ೦ಶದ ಕೊನೆಯ ಮಹಾರಾಜರು ಜಯಚಾಮರಾಜ ವೊಡೆಯರ್, ೧೯೪೦ ರಿ೦ದ ಭಾರತದ ಸ್ವಾತ೦ತ್ರ್ಯದ ವರೆಗೆ ಇವರ ಆಡಳಿತ ನಡೆಯಿತು.

[ಬದಲಾಯಿಸಿ] ವೊಡೆಯರ್ ವ೦ಶದ ಅರಸರು

  • ದೇವ ರಾಯ (1399 - 1423)
  • ಹಿರಿಯ ಬೆಟ್ಟದ ಚಾಮರಾಜ ವೊಡೆಯರ್ (1423 - 1459)
  • ತಿಮ್ಮರಾಜ ವೊಡೆಯರ್ (1459 - 1479)
  • ಹಿರಿಯ ಚಾಮರಾಜ ವೊಡೆಯರ್ (1479 - 1513)
  • ಹಿರಿಯ ಬೆಟ್ಟದ ಚಾಮರಾಜ ವೊಡೆಯರ್ (ಇಮ್ಮಡಿ) (1513 - 1553)
  • ಬೋಳ ಚಾಮರಾಜ ವೊಡೆಯರ್ (1572 - 1576)
  • ಬೆಟ್ಟದ ಚಾಮರಾಜ ವೊಡೆಯರ್ (ಮುಮ್ಮಡಿ) (1576 - 1578)
  • ರಾಜ ವೊಡೆಯರ್ (1578 - 1617)
  • ಚಾಮರಾಜ ವೊಡೆಯರ್ (1617 - 1637).
  • ಇಮ್ಮಡಿ ರಾಜ ವೊಡೆಯರ್ (1637 - 1638)
  • ರಣಧೀರ ಕ೦ಠೀರವ ನರಸರಾಜ ವೊಡೆಯರ್ (1638 - 1659)
  • ದೊಡ್ಡ ದೇವರಾಜ ವೊಡೆಯರ್ (1659 - 1673)
  • ಚಿಕ್ಕ ದೇವರಾಜ ವೊಡೆಯರ್ (1673 - 1704)
  • ಕ೦ಠೀರವ ನರಸರಾಜ ವೊಡೆಯರ್ (1704 - 1714)
  • ದೊಡ್ಡ ಕೃಷ್ನರಾಜ ವೊಡೆಯರ್ (1732 - 1734)
  • ಇಮ್ಮಡಿ ಕೃಷ್ಣರಾಜ ವೊಡೆಯರ್ (1734 - 1766)
  • ಬೆಟ್ಟದ ಚಾಮರಾಜ ವೊಡೆಯರ್ (1770 - 1776)
  • ಖಾಸಾ ಚಾಮರಾಜ ವೊಡೆಯರ್ (1766 - 1796)
  • ಮುಮ್ಮಡಿ ಕೃಷ್ಣರಾಜ ವೊಡೆಯರ್ (1799 - 1868)
  • ಮುಮ್ಮಡಿ ಚಾಮರಾಜ ವೊಡೆಯರ್ (1868 - 1895)
  • ನಾಲ್ಮಡಿ ಚಾಮರಾಜ ವೊಡೆಯರ್ (1895 - 1940)
  • ಜಯಚಾಮರಾಜ ವೊಡೆಯರ್ (1940 - 1947)
    • ಮೈಸೂರು ರಾಜ್ಯದ ರಾಜಪ್ರಮುಖರು (1947 - 1956)
    • ಮೈಸೂರು ರಾಜ್ಯದ ರಾಜ್ಯಪಾಲರು (1956 - 1964)

[ಬದಲಾಯಿಸಿ] ಇವನ್ನೂ ನೋಡಿ

ಮೈಸೂರು

Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com