ಛತ್ರಪತಿ ಶಿವಾಜಿ ಟೆರ್ಮಿನಸ್
From Wikipedia
ಛತ್ರಪತಿ ಶಿವಾಜಿ ಟೆರ್ಮಿನಸ್ (ವಿಕ್ಟೊರಿಯಾ ಟೆರ್ಮಿನಸ್ ಅಥವಾ ಸಿ.ಎಸ್.ಟಿ)ಯು ೧೮೮೮ರಲ್ಲಿ ನಿರ್ಮಿಸಲ್ಪಟ್ಟ ಗೋಥಿಕ್ ಮತ್ತು ವಿಕ್ಟೋರಿಯನ್ ಇಟಾಲಿಯನೇಟ್ ರಿವೈವಲ್ ಮತ್ತು ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿತವಾದ ಸುಂದರ ಕಟ್ಟಡ. ಇದು ಈಗ ಮುಂಬೈಯ ಐತಿಹಾಸಿಕ ನಗರ ಸಂಚಾರಿ ರೈಲು ನಿಲ್ದಾಣ ಮತ್ತು ಮಧ್ಯ ರೈಲ್ವೆಯ ಮುಖ್ಯ ಕಚೇರಿಯಾಗಿಯೂ ಉಪಯೋಗಿಸಲ್ಪಡುತ್ತಿದೆ. ಅಲ್ಲದೇ ಭಾರತದಲ್ಲೇ ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲೊಂದಾಗಿದೆ. ಜುಲ್ಯ್ ೦೨ ೨೦೦೪ರಲ್ಲಿ ಈ ಸ್ಥಳವನ್ನು ಯುನೆಸ್ಕೋ ಸಂಸ್ಥೆಯು ಪ್ರಪಂಚದ ಸಾಂಸ್ಕೃತಿಕ ಪ್ರದೇಶವಾಗಿ ಗುರುತಿಸಿದೆ.
ಫ್ರೆಡೆರಿಕ್ ವಿಲಿಯಂ ಸ್ಟೀವನ್ಸ್ ಎಂಬ ವಾಸ್ತುಶಿಲ್ಪಿಯು ೧೮೮೭-೧೮೮೮ ರಲ್ಲಿ ೧೬.೧೪ ಲಕ್ಷ ರೂಪಾಯೆಗಳ (ಆ ಕಾಲದಲ್ಲಿ ದುಬಾರಿಯೆನಿಸಿದ)ವೆಚ್ಚದಲ್ಲಿ ಇದನ್ನು ನಿರ್ಮಿಸಿದರು. ನಿರ್ಮಾಣದ ಮೊದಲುಅಲೆಕ್ಸ್ ಹೆರ್ಮನ್ ಎಂಬ ಕಲಾವಿದರು ಇದರ ಕರಡು ನಕ್ಷೆಯನ್ನು ಪ್ರಥಮವಾಗಿ 'ಜಲವರ್ಣ'ದಲ್ಲಿ ರಚಿಸಿದ ನಂತರ, ಫ್ರೆಡೆರಿಕ್ ವಿಲಿಯಂ ಸ್ಟೀವನ್ಸ್ ರವರು ಈ ಕರಡು ನಕ್ಷೆಯ ಜೊತೆಯಲ್ಲಿ ೧೦ ತಿಂಗಳ್ ಯುರೋಪ್ ಪ್ರವಾಸ ಕೈಗೊಂಡು, ಅಲ್ಲಿನ ಎಲ್ಲಾ ಪ್ರಮುಖ ನಿಲ್ದಾಣಗಳನ್ನು ಅಭ್ಯಸಿಸಿದರು. ಲಂಡನ್ನಿನ ಸೇಂಟ್ ಪಾಂಕ್ರಾಸ್ ರೈಲ್ವೆ ನಿಲ್ದಾಣವು 'ವಿಕ್ಟೋರಿಯಾ ಟೆರ್ಮಿನಸ್'ಗೆ ಅತ್ಯಂತ ಸಮೀಪವಾಗಿರುವ ವಿನ್ಯಾಸಹೊಂದಿದೆ.
ಇದನ್ನು ಸಂಪೂರ್ಣವಾಗಿ ನಿರ್ಮಿಸಲು ೧೦ ವರ್ಷಗಳೇ ಹಿಡಿದವು. ೧೯೯೬ರಲ್ಲಿ ಈ ನಿಲ್ದಾಣದ ಹೆಸರನ್ನು 'ವಿಕ್ಟೊರಿಯಾ ಟೆರ್ಮಿನಸ್' ನಿಂದ 'ಛತ್ರಪತಿ ಶಿವಾಜಿ ಟೆರ್ಮಿನಸ್' ಎಂದು ಬದಲಾಯಿಸಲಾಯಿತು.