ಹೊಯಿಸಳ
From Wikipedia
ಹೊಯಿಸಳ ಆರಗ ಲಕ್ಷ್ಮಣರಾವ್ ಅವರ ಕಾವ್ಯನಾಮ. ಕನ್ನಡಿಗರ ನೆನಪಿನಂಗಳದಿಂದ ಬಹುಪಾಲು ಮಾಸಿಹೋಗಿರುವ ಮಹನೀಯರಲ್ಲಿ ಆರಗ ಲಕ್ಷ್ಮಣರಾವ್ ಅವರೂ ಒಬ್ಬರು. ಖ್ಯಾತಲೇಖಕಿ ಎಂ. ಕೆ. ಇಂದಿರ, ಇವರ ಸೋದರ ಸಂಬಂಧಿ. ಎಳೆಯರಿಗೆ ಪುಸ್ತಕ ಬೊಧಿಸುವ ಹೊಯಿಸಳರ ಕವಿತೆ ಮಕ್ಕಳ ಸಾಹಿತ್ಯಕ್ಕೆ ಹೊಸ ಮೆರಗು ಹೊಸ ತಿರುವು ಕೊಟ್ಟ ಶಕಪುರುಷರು."ಸಣ್ಣ ಚಿಣ್ಣ ಹೊನ್ನ ಹಸುಳೆ ನಮ್ಮ ನಾಡದೇವರು, ಇಂದಿನವರು ಮುಂದೆಬೆಳೆದು ಹಣ್ಣು ಕೊಡುವ ಸಸಿಗಳು....ಹೀಗೆಂದು ಮಕ್ಕಳನ್ನು ದೇವರಿಗೆ ಸಮೀಕರಿಸಿ, ಅವರ ಮಾನಸಿಕ ವಿಕಾಸಕ್ಕೆ ಬದುಕಿನ್ನುದ್ದಕ್ಕೂ ಶ್ರಮಿಸಿದವರು. ಕನ್ನಡದ ಮಕ್ಕಳಿಗಾಗಿ ಅನೇಕ ಕವಿತೆಗಳನ್ನು, ಸಣ್ಣ ಕಥೆಗಳನ್ನು, ಸ್ವಾರಸ್ಯಪೂರ್ಣ ನಾಟಕಗಳನ್ನು ಬರೆದಿದ್ದಾರೆ. "ಸಂತಮ್ಮಣ್ಣ" ನನ್ನು ಮರೆಯಲಾದೀತೆ?. ಗಾಂಧೀಜಿಯನ್ನು ಶಿಶುಭಾಶೆಯಲ್ಲಿ ಕೀರ್ತಿಸುವ "ತಟ್ಟು ಚಪ್ಪಾಳೆ ಪುಟ್ಟ ಮಗು..." ಎಂಬ ಕವಿತೆ ಯಾರಿಗೆ ಗೊತ್ತಿಲ್ಲ? ಅವರ ಕಥೆಗಳಲ್ಲಿ ಬಂದಂತಹ 'ಅಭ್ಯಂಕು', 'ಪುಟ್ಟರಸು', 'ವೀರಕುಮಾರ' .....ಇಂತ ನೂರಾರು ಪಾತ್ರಗಳು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಕನ್ನಡನಾಡಿನ ಮಕ್ಕಳನ್ನು ಸೂರೆಗೊಂಡಿದ್ದವು. ಇವರ ಕೃತಿಗಳನ್ನೆಲ್ಲಾ ಪ್ರಕಟಿಸಿದ ಹೆಗ್ಗಳಿಕೆ ಮೈಸೂರಿನ ಕಾರ್ಯಾಲಯ ಪ್ರಕಾಶನಕ್ಕಿದೆ. ಆರಗ ಲಕ್ಷ್ಮಣರಾವ್ ಅವರು ರವೀಂದ್ರನಾಥ ಟಾಗೋರರ ಪ್ರಭಾವಕ್ಕೆ ಒಳಗಾಗಿದ್ದು 'ಶಾಂತಿನಿಕೇತನ'ದಲ್ಲಿ ಎರಡು ವರ್ಷ ಕಳೆದಿದ್ದರಂತೆ. ಅಲ್ಲಿಂದ ಹೊರಬರುವಾಗಲೇ ತಮ್ಮ ಬದುಕಿನ ಗುರಿಯನ್ನು ನಿರ್ಧರಿಸಿ, ಸಹಜವಾಗಿ ಶಿಕ್ಷಣ ಕ್ಷೇತ್ರವನ್ನು ಆಯ್ಕೆಮಾಡಿದರು. ಪ್ರೌಢಶಾಲಾ ಅಧ್ಯಾಪಕರಾಗಿ ಮಕ್ಕಳ ವಿಕಾಸಕ್ಕೆ ಹಾಡಿ ರಂಜಿಸಿ ತಿದ್ದುವುದು ಅವರ ಹವ್ಯಾಸವಾಗಿತ್ತು. ನಿವೃತ್ತರಾದ ನಂತರವೂ ಅವರು ಕೆಲಕಾಲ ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮದ ನಿರ್ವಾಹಕರಾಗಿ ದುಡಿದರು. ಪ್ರಜಾವಾಣಿಯಲ್ಲಿ ಪ್ರೀತಿಯ 'ಅಣ್ಣಾಜಿ'ಯಾದರು. 'ಕನಕ' ಎಂಬ ಮಾಸಪತ್ರಿಕೆಯನ್ನು ಹೊರತಂದರು.
ಹೊಯಿಸಳ ಮಕ್ಕಳ ಕವಿತೆಗಳ ಭಾಷೆ ತುಂಬಾ ಸರಳ. ಮಕ್ಕಳನ್ನು ಆಕರ್ಷಿಸುವ ಲಯವೈವಿಧ್ಯ, ವಸ್ತುವೈವಿಧ್ಯಗಳಿವೆ. ಅನೇಕ ಕವಿತೆಗಳಲ್ಲಿ ನವಿರಾದ ಹಾಸ್ಯಲೇಪವಿದೆ. ಆದ್ದರಿಂದ ಹೊಯಿಸಳರ ಪದ್ಯಗಳು ಈಗಲೂ ಮುದ್ದು ಪುಟಾಣಿಗಳಿಗೆ ಖುಶಿಕೊಡುವಂತಿದೆ.
[ಬದಲಾಯಿಸಿ] ಹೊಯಿಸಳರ ಕವಿತೆ
[ಬದಲಾಯಿಸಿ] ಪುಸ್ತಕ'
- ಪುಸ್ತಕ ಮಾತನು ಹೇಳುತಿದೆ
ಚಿತ್ತವ ಹತ್ತಿಸಿ ಕೇಳು ಒಳ್ಳೆಯ ಕಡೆಯಲಿ ಇಡು ನನ್ನ ಬೀರೂ ಪೆಟ್ಟಿಗೆ ಬಲು ಚೆನ್ನ ಬೀಳದೆ ಧೂಳು ಇಹಪರಿ ಮೇಲೆ ಬೇರೊಂದಟ್ಟೆಯ ಹೊಂದಿಸು, ಮಗು
- ಜನಗಳ ಕಾಲಡಿ ಹಾಕದಿರು
ಕಿವಿಗಳ ನಿತ್ಯ ಮಡಿಸದಿರು ಹಾಳೆಯ ಮಡಿಸಿ ಬೋರಲು ಇರಿಸಿ ಕಷ್ಟಕೆ ಸಿಕ್ಕಿಸಬೇಡ, ಮಗು
- ನನ್ನಯ ತಿರುಳು ಕಾಡಿನದು
ನನ್ನಯ ಅರಿವು ನಾಡಿನದು ಬೆಂಕಿಲಿ ಬೆಂದು ನೀರಲಿ ನೆಂದು ಯಂತ್ರವ ಹೊಕ್ಕು ಬಂದೆ, ಮಗು
- ಏನೊಂದಾದರು ಕೇಳು, ಮಗು
ಯಾವಾಗೆಂದರೆ ಹೇಳುವೆನು ಬೇಸರವಿಲ್ಲದೆ ಸೇವಿಪೆನಲ್ಲವೆ ನನ್ನೇಕಿನ್ನೂ ನೋಯಿಸುವೆ?
- ತೂಕಡಿಸುತ್ತಾ ಮುಟ್ಟದಿರು
ಅರೆಗಣ್ಣಾಗಿರೆ ತೆರೆಯದಿರು ಕಡ್ಡಿಯ ಸಿಕ್ಕಿ ತಲೆಯಡಿ ಅಡಕಿ ಗೊರಕೆಯ ಹೊಡೆಯದೆ ಇರು ಮಗುವೆ
- ಮೇಜಿನ ಮೇಲೆ ಚೌಕವಿದೆ
ಮೊಗಮೇಲಾಗಿಡು, ಹೂವು ಇಡು ಕೈಗಳ ತೊಳೆದು ಚೌಕದಿ ತೊಡೆದು ಆಮೇಲೆನ್ನನು ಓದು ಮಗು -ಚಂದಮಾಮ ಸಂಕಲನದಿಂದ
ಟೆಂಪ್ಲೇಟ್ ದೊಡ್ಡದಾಗಿರುವುದರಿಂದ ಇನ್ನು ಮುಂದೆ ಸಾಹಿತಿಗಳು ಟೆಂಪ್ಲೇಟನ್ನು ಬಳಸಲಾಗುವುದಿಲ್ಲ. ಈ ಟೆಂಪ್ಲೇಟ್ ಲೇಖನವೊಂದರಲ್ಲಿ ನಿಮಗೆ ಕಂಡುಬಂದಲ್ಲಿ ಲೇಖನ ಪುಟದಿಂದ {{ಸಾಹಿತಿಗಳು}}ಎಂಬ ಸೇರ್ಪಡೆಯನ್ನು ತೆಗೆದುಹಾಕಿ.