ಹಾಲುಬಾಯಿ
From Wikipedia
ಹಾಲುಬಾಯಿ ಒಂದು ಸಿಹಿ ತಿಂಡಿ. ಮಲೆನಾಡು ಮತ್ತುಕರಾವಳಿಯಲ್ಲಿ ಜನಪ್ರಿಯವಾಗಿರುವ ಸಿಹಿ ತಿಂಡಿ. ಇದರಲ್ಲಿ ಜಿಡ್ಡಿನ ಅಂಶ ಹೆಚ್ಚಿರುವುದಿಲ್ಲ. ಸಕ್ಕರೆಯೂ ಇಲ್ಲದ ಆರೋಗ್ಯಕರ ತಿನಿಸು.
[ಬದಲಾಯಿಸಿ] ಬೇಕಾಗುವ ಪದಾರ್ಥಗಳು
- ಅಕ್ಕಿ - ೧ಕಪ್
- ತೆಂಗಿನ ಕಾಯಿ ತುರಿ - ಒಂದು ಕಪ್ (ಅರ್ಧ ಹೋಳು ತೆಂಗಿನಕಾಯಿಯಿಂದ ಬರುವಷ್ಟು)
- ಪುಡಿ ಮಾಡಿದ ಬೆಲ್ಲ - ಒಂದೂವರೆ ಲೋಟ
- ಏಲಕ್ಕಿ ಪುಡಿ - ಅರ್ಧ ಚಮಚ
- ತುಪ್ಪ - ಒಂದು ಟೀ ಚಮಚೆ
[ಬದಲಾಯಿಸಿ] ತಯಾರಿಸುವ ವಿಧಾನ
ಮೊದಲು ಅಕ್ಕಿಯನ್ನು ಅರ್ಧಗಂಟೆ ನೀರಿನಲ್ಲಿ ನೆನೆಸಿ ಇಡಿ. ನೀರು ಬಸಿದು ಅಕ್ಕಿ ಮತ್ತು ತೆಂಗಿನಕಾಯಿ ತುರಿಯನ್ನು ಒಂದು ಕಪ್ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ಈ ಮಿಶ್ರಣಕ್ಕೆ ಬೆಲ್ಲದ ಪುಡಿ ಮತ್ತು ಯಾಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಗೊಟಾಯಿಸುತ್ತಾ ನೀರು ದೋಸೆಯ ಹಿಟ್ಟಿನ ಹದ ಬರುವ ತನಕ ನೀರು ಸೇರಿಸಬೇಕು.
ಈ ಹಿಟ್ಟನ್ನು ಸಣ್ಣ ಉರಿಯ ಮೇಲೆ ಇಟ್ಟು ಮಗುಚುತ್ತಾ ಹೋಗಬೇಕು. ಹಿಟ್ಟು ಮಂದವಾಗುತ್ತ ಬರುತ್ತದೆ. ಹಿಟ್ಟು ಕಣ್ಣ ಅಂದಾಜಿಗೆ ಬೆಂದಂತೆ ಕಂಡಾಗ, ಈ ಬಿಸಿ ಹಿಟ್ಟನ್ನು ತುಪ್ಪ ಸವರಿದ, ಅಗಲವಾದ ತಟ್ಟೆಗೆ ಸುರಿಯಿರಿ. ಈ ತಟ್ಟೆಯನ್ನು ಇಡ್ಲಿ ಪಾತ್ರೆಯ ಒಳಗಿರಿಸಿ ಹತ್ತು ನಿಮಿಷ ಹಬೆಯಲ್ಲಿ ಬೇಯಿಸಿರಿ.
ಈಗ ತಯಾರಾದ ಹಾಲುಬಾಯಿಯನ್ನು, ಇದನ್ನು ಚೌಕ ಅಥವಾ ತ್ರಿಕೋನ ಆಕೃತಿಯಲ್ಲಿ ಚಾಕುವಿನಿಂದ ಕತ್ತರಿಸಬೇಕು.
ವರ್ಗಗಳು: ಖಾದ್ಯ, ತಿನಿಸು | ಕರ್ನಾಟಕ | ಆಹಾರ