ಹಾಡವಳ್ಳಿ
From Wikipedia
ಸಂಗೀತಪುರ, ಉತ್ತರಕನ್ನಡ ಜಿಲ್ಲೆಯ ಭಟ್ಕಳದಿಂದ ೨೦ ಕಿಲೋ ಮೀಟರ್ ದೂರದಲ್ಲಿದೆ .ಇಂದು ಇದನ್ನು ಹಾಡುವಳ್ಳಿ ಎಂದು ಕರೆಯುತ್ತಾರೆ. ಈ ಊರಿಗೆ ಹಾಡುವಳಲ್ ಎಂಬ ಹೆಸರೂ ಇತ್ತು.
ಪರಿವಿಡಿ |
[ಬದಲಾಯಿಸಿ] ಪರಿಸರ
ಸಮುದ್ರಮಟ್ಟದಲ್ಲಿರುವ ಭಟ್ಕಳದಿಂದ ಒಳಬಾಗದಲ್ಲಿರುವ ಸಂಗಿತಪುರದ ಸುತ್ತ ದಟ್ಟವಾದ ಹಸಿರುಕಾಡುಗಳಿದೆ. ಈ ಕಾಡುಗಳಲ್ಲಿ ಭಾರಿ ಮರಗಳು, ಮರದಿಂದ ಮರಕ್ಕೆ ತೂಗುಬಿದ್ದ ಬಳ್ಳಿಗಳು ಹಾಗು ಬೆಳೆದಿರುವ ಮರಗಿಡ ಪೊದೆಗಳು. ಬೇಸಿಗೆಯ ಸುಡುಬಿಸಿಲು ಕೂಡ ಇಲ್ಲಿ ತಂಪಾಗಿರುತ್ತದೆ. ಅಂತೆಯೇ ಕಾಡುಕೊಣದಂತಹಾ ಕಾಡು ಜೀವಿಗಳು ಈ ಕಾಡಿನಲ್ಲಿ ನಿರಾತಂಕವಾಗಿ ಒಡಾಡಿಕೊಂಡಿರುತ್ತವೆ. ಸುತ್ತಲೂ ಸಣ್ಣ ಪುಟ್ಟ ಬೆಟ್ಟ ಗುಡ್ಡ ಗುಡ್ಡಗಳಿವೆ.
[ಬದಲಾಯಿಸಿ] ಇತಿಹಾಸ
ಹಿಂದೆ ಹಾಡುವಳ್ಳಿ ರಾಜ್ಯವೆಂದೋ, ಸಂಗೀತ ಪುರ ರಾಜ್ಯವೆಂದೋ ಕರೆಯಲಾಗುತ್ತಿದ್ದ ರಾಜ್ಯದ ರಾಜಧಾನಿ ಸಂಗಿತಪುರ. ಹಿಂದಿನ ರಾಜಧಾನಿ ಇಂದು ಒಂದು ಕುಗ್ರಾಮ. ಒಂದೆರಡು ಹಂಚಿನಮನೆಗಳು. ರೈತಾಪಿ ಜನರ ಗುಡಿಸಿಲುಗಳು.ಹೊಲಗದ್ದೆ ಬಾಳೆ ಅಡಕೆ ತೋಟಗಳು. ಹೆದ್ದಾರಿಯಿಂದ ಸಾಕಷ್ಟು ದೂರ ಹೋದರೇನೆ ಊರು. ಆದರೆ ಸಂಗಿತಪುರದ ವೈಭವವನ್ನು ಸಾರಿ ಹೆಳಲು ಹಲವಾರು ಬಸದಿಗಳು ಉಳಿದುಕೊಂಡಿವೆ. ಜಿನಬಿಂಬಗಳು, ಬಿಡಿವಿಗ್ರಹಗಳು ಗುಡಿದೆವಾಲಯಗಳ ಕಂಬಗಳು , ಕಲ್ಲುಗಳು ಅಲ್ಲಲ್ಲಿ ಎದುರಾಗುತ್ತವೆ. ಮುಖ್ಯವಾಗಿ ಊರ ನಡುವಿನ ಎರಡು ಗುಡ್ಡಗಳ ಮೇಲಿನ ಬಸದಿಗಳು ಸಂಗೀತಪುರದ ಕತೆಯನ್ನು ಹೆಳುತ್ತವೆ.
[ಬದಲಾಯಿಸಿ] ಉಲ್ಲೇಖನಗಳು
೧.ಕರ್ನಾಟಕ ಗೆಜೆಟಿಯರ್ -ಉತ್ತರ ಕನ್ನಡ ಜಿಲ್ಲೆ-೧೯೮೫ , ಪುಟ ಸಂಖ್ಯೆ:೧೮೩-೧೮೫. ೨.ಸಂಗೀತಪುರ ಪುಸ್ತಕ- ಲೇಖಕ ನಾ.ಡಿಸೋಜಾ