ಹಂಪೆ
From Wikipedia
ಹಂಪೆ ವಿಜಯನಗರ ಸಾಮ್ರಾಜ್ಯದ ರಾಜಧಾನಿ.ಹೊಸಪೇಟೆಯ ಬಳಿ ಇರುವ ಈ ಊರು, ಅಂದಿನ ಕಾಲದ ಸಂಸ್ಕೃತಿಯ ಮತ್ತು ಗತವೈಭವದ ನೆನಪಾಗಿದೆ. ಹುಕ್ಕಬುಕ್ಕರು, ವಿದ್ಯಾರಣ್ಯರ ಆದೇಶದಂತೆ ವಿಜಯನಗರ ಸಮ್ರಾಜ್ಯದ ಸ್ಥಾಪನೆಗೆ ಮುಂದಾದದರು.
ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ,ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.
ಕನ್ನಡ ವಿಶ್ವವಿದ್ಯಾಲಯ ಇರುವುದು ಹಂಪಿಯಲ್ಲಿ.
ಪರಿವಿಡಿ |
[ಬದಲಾಯಿಸಿ] ಭೂವಿವರಣೆ
ಹಂಪೆಯು ತುಂಗಭದ್ರಾ ನದಿಯ ತೀರದಲ್ಲಿದೆ. ಇದು ಬೆಂಗಳೂರಿನಿಂದ ೩೪೩ ಕಿ.ಮೀ., ಬಿಜಾಪುರದಿಂದ ೨೫೪ ಕಿ.ಮೀ., ಮತ್ತು ಬಳ್ಳಾರಿಯಿಂದ ೭೪ ಕಿ.ಮೀ ದೂರದಲ್ಲಿದೆ. ೧೩ ಕಿ.ಮೀ. ದೂರದಲ್ಲಿರುವ ಹೊಸಪೇಟೆ ಇಲ್ಲಿಗೆ ಅತಿ ಹತ್ತಿರದ ತಾಲ್ಲೂಕು ಕೇಂದ್ರ. ವ್ಯವಸಾಯ, ವಿರೂಪಾಕ್ಷ ಹಾಗೂ ಕೆಲವು ಇತರ ದೇವಸ್ಥಾನಗಳ ನಿರ್ವಹಣೆ ಮತ್ತು ಪ್ರವಾಸೋದ್ಯಮ, ಇವುಗಳು ಇಲ್ಲಿನ ಮುಖ್ಯ ಕೈಗಾರಿಕೆಗಳು. ಕರ್ನಾಟಕ ಸರ್ಕಾರವು ಆಯೋಜಿಸುವ ವಿಜಯನಗರ ವಾರ್ಷಿಕೋತ್ಸವವು ನವೆಂಬರ್ ತಿಂಗಳಲ್ಲಿ ನಡೆಯುತ್ತದೆ.
ಹಂಪೆಯನ್ನು ಯುನೆಸ್ಕೋ ಹೆರಿಟೇಜ್ ಸ್ಮಾರಕವೆಂದು ಘೋಷಿಸಲಾಗಿದೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
- ಹಂಪಿಯಲ್ಲಿರುವ ಸ್ಮಾರಕಗಳು - ಯುನೆಸ್ಕೊ ಪುಟ
- ಕರ್ನಾಟಕ ಡಾಟ್ ಕಾಮ್ - ಹಂಪಿ ಪುಟ
- ಪ್ರವಾಸಿಗರೊಬ್ಬರ ಬರಹ
- ಪಳೆಯುಳಿಕೆಗಳು - ಬರಹ, ಚಿತ್ರಗಳು
- ಇನ್ನಷ್ಟು ಚಿತ್ರಗಳು ಮತ್ತು ಮಾಹಿತಿ