ಸಿ.ಎನ್. ಮುಕ್ತಾ
From Wikipedia
ಸಿ.ಎನ್.ಮುಕ್ತಾ ಕನ್ನಡದ ಹೆಸರಾಂತ ಲೇಖಕಿ. ಮೈಸೂರಿನ ಬಿರಿಹುಂಡಿ ಸರ್ಕಾರಿ ಪ್ರೌಡಶಾಲೆಯಲ್ಲಿ ಮುಖ್ಯೋಪಾದ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು ೬೦ ಕ್ಕೂ ಹೆಚ್ಚು ಕಾದಂಬರಿಗಳನ್ನ ರಚಿಸಿದ್ದಾರೆ. ಕರ್ನಾಟಕದ ಹೆಸರಾಂತ ಪತ್ರಿಕೆಗಳಾದ ಸುಧಾ, ವನಿತಾ,ತರಂಗ, ಮಂಗಳ, ಸಂಯುಕ್ತ ಕರ್ನಾಟಕ ಇತ್ಯಾದಿಗಳಲ್ಲಿ ಇವರ ಕಾದಂಬರಿಗಳು ಬೆಳಕು ಕಂಡಿವೆ. ಇನ್ನೂರಕ್ಕೂ ಹೆಚ್ಚು ಕಥೆಗಳು ಈ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಟಿವಿ ಯಲ್ಲಿ ಜನಪ್ರಿಯತೆ ಗಳಿಸಿದ ಇವರ ಕಾದಂಬರಿಗಳು:
- ಗೆಲುವಿನ ಹೆಜ್ಜೆ
- ಕ್ಷಮಯಾಧರಿತ್ರಿ
- ಸುಖದಸೋಪಾನಗಳು
- ದಡ ಸೇರಿದ ನೌಕೆ
- ಜೀವನ ಚಕ್ರ
- ಅಮೃತಮಯಿ
ಚಲನಚಿತ್ರವಾದಂತಹ ಕಾದಂಬರಿ :
- ಮೇಘಮಂದಾರ
ಇತರ ಕಾದಂಬರಿ :
- ಚಿತ್ತಾರದರ್ಪಣ
ಸಿ.ಎನ್.ಮುಕ್ತ ರವರ "ಮುಖವಾಡ" ಎಂಬ ಕೃತಿ ಟಿ.ಎನ್.ಸೀತಾರಾಂ ಅವರ ನಿರ್ದೇಶನದಲ್ಲಿ "ಕಥೆಗಾರ" ಸರಣಿಯಲ್ಲಿ ಚಿತ್ರಿತವಾಗಿದೆ. "ಪಾಲು" ಎಂಬ ಕಥೆಯೂ ಸೀತಾರಾಂ ಅವರ ನಿರ್ದೇಶನದಲ್ಲಿ ಹೊರಹೊಮ್ಮಿದೆ. ಇವರ "ಕ್ಷಮಯಾಧರಿತ್ರಿ" ಕಾದಂಬರಿಗೆ ೧೯೯೫ ರಲ್ಲಿ 'ಆರ್ಯಭಟ' ಪ್ರಶಸ್ತಿ ಹಾಗೂ ೨೦೦೦ ರಲ್ಲಿ ಅತ್ತಿಮಬ್ಬೆ ಪ್ರತಿಷ್ಟಾನದಿಂದ 'ವರ್ಷದ ಲೇಖಕಿ' ಪ್ರಶಸ್ತಿದ ದೊರೆತಿದೆ.
ಟೆಂಪ್ಲೇಟ್ ದೊಡ್ಡದಾಗಿರುವುದರಿಂದ ಇನ್ನು ಮುಂದೆ ಸಾಹಿತಿಗಳು ಟೆಂಪ್ಲೇಟನ್ನು ಬಳಸಲಾಗುವುದಿಲ್ಲ. ಈ ಟೆಂಪ್ಲೇಟ್ ಲೇಖನವೊಂದರಲ್ಲಿ ನಿಮಗೆ ಕಂಡುಬಂದಲ್ಲಿ ಲೇಖನ ಪುಟದಿಂದ {{ಸಾಹಿತಿಗಳು}}ಎಂಬ ಸೇರ್ಪಡೆಯನ್ನು ತೆಗೆದುಹಾಕಿ.