ಶ್ರೀರಂಗಪಟ್ಟಣ
From Wikipedia
ಶ್ರೀರಂಗಪಟ್ಟಣ, ಕರ್ನಾಟಕದ ಮೈಸೂರು ಜಿಲ್ಲೆಯ ಒಂದು ಪ್ರಮುಖ ಐತಿಹಾಸಿಕ, ಸಾಂಸ್ಕೃತಿಕ ಹಾಗು ಧಾರ್ಮಿಕ ಮಹತ್ವ ಹೊಂದಿರುವ ಪಟ್ಟಣವಾಗಿದೆ.
ಪರಿವಿಡಿ |
[ಬದಲಾಯಿಸಿ] ಸ್ಥಳ
ಮೈಸೂರು ನಗರದಿಂದ ೧೩ ಕಿ.ಮೀ. ದೂರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಗಡಿಯಲ್ಲಿದೆ. ಪಟ್ಟಣವು ಸುತ್ತಲೂ ಕಾವೇರಿ ನದಿಯಿಂದ ಆವೃತವಾಗಿದೆ. ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಯು ಪೂರ್ವವಾಹಿನಿ ಹಾಗು ಪಶ್ಚಿಮವಾಹಿನಿಗಳಾಗಿ ಕವಲೊಡೆದು ಹರಿಯುತ್ತದೆ. ಇದರಿಂದಾಗಿ ಶ್ರೀರಂಗಪಟ್ಟನವು ಒಂದು ದ್ವೀಪದಂದಿತೆ.
[ಬದಲಾಯಿಸಿ] ಧಾರ್ಮಿಕ ಮಹತ್ವ
ಶ್ರೀರಂಗನಾಥ ಸ್ವಾಮಿ ದೇವಾಲಯವು ಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈ ದೇವಾಲಯವು ಗಂಗ ಅರಸರು ಕಾಲದ್ದೆಂದು ಪ್ರತೀತಿಯಿದೆ. ಇದನ್ನು ೧೨ ನೇ ಶತಮಾನದಲ್ಲಿ ಜೀರ್ಣೋದ್ಧಾರ ಮಾಡಲಾಯಿತು.
ಕಾವೇರಿ ನದಿ ಕವಲೊಡೆಯುವ ಸ್ಥಳಗಳಲ್ಲೆಲ್ಲ ಶ್ರೀರಂಗನಾಥ ಸ್ವಾಮಿಯ ದೇವಾಲಯಗಳಿರುವುದು ಒಂದು ವಿಶೇಷ. ಇವುಗಳೆಂದರೆ:
- ಆದಿ ರಂಗ - ಶ್ರೀರಂಗಪಟ್ಟಣ
- ಮಧ್ಯ ರಂಗ - ಶಿವನಸಮುದ್ರ
- ಅಂತ್ಯ ರಂಗ - ತಮಿಳುನಾಡಿನ ಶ್ರೀರಂಗಂ
ಪಶ್ಚಿಮ ವಾಹಿನಿಯು ಹಿಂದುಗಳಿಗೆ ಅಂತಿಮ ಕರ್ಮಗಳನ್ನು ಮಾಡಲು ಒಂದು ಪುಣ್ಯ ಕ್ಷೇತ್ರ. ಇಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮೃತರ ಅಸ್ಥಿಗಳನ್ನು ವಿಸರ್ಜಿಸಿದರೆ ಮೋಕ್ಷ ಲಭಿಸುವುದೆಂದು ನಂಬಿಕೆಯಿದೆ.
[ಬದಲಾಯಿಸಿ] ಐತಿಹಾಸಿಕ ಮಹತ್ವ
ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಶ್ರೀರಂಗಪಟ್ಟಣ ಐತಿಹಾಸಿಕ ಮಹತ್ವವುಳ್ಳ ಊರಾಗಿದೆ. ಟಿಪ್ಪು ಸುಲ್ತಾನ ಹಾಗು ಹೈದರಾಲಿ ಯವರ ಕಾಲದಲ್ಲಿ ಶ್ರೀರಂಗಪಟ್ಟಣ ಮೈಸೂರು ಸಾಮ್ರಾಜ್ಯದ ರಾಜಧಾನಿಯಾಗಿತ್ತು.
[ಬದಲಾಯಿಸಿ] ಶ್ರೀರಂಗಪಟ್ಟಣದಲ್ಲಿ ನೋಡುವ ಸ್ಥಳಗಳು
- ಶ್ರೀರಂಗನಾಥ ಸ್ವಾಮಿ ದೇವಾಲಯ
- ಜುಮ್ಮ ಮಸೀದಿ
- ದರಿಯಾ ದೌಲತ್
- ರಂಗನತಿಟ್ಟು ಪಕ್ಷಿಧಾಮ
- ಶ್ರೀ ನಿಮಿಷಾಂಬ ದೇವಾಲಯ
- ಕರಿಘಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯ