ಶ್ರೀನಿವಾಸರಾವ್ ಕೊರಟಿ
From Wikipedia
ಶ್ರೀನಿವಾಸರಾವ ಕೊರಟಿಯವರು |ಅಕ್ಟೋಬರ ೧೯೨೫ರಲ್ಲಿ ಹೊಸಕೋಟೆ ತಾಲೂಕಿನ ಕೊರಟಿ ಗ್ರಾಮದಲ್ಲಿ ಜನಿಸಿದರು. ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಇವರು ಪ್ರಾಧ್ಯಾಪಕರಾಗಿದ್ದರು.
ಶ್ರೀನಿವಾಸರಾವ ಕೊರಟಿಯವರು ವಿಜಯನಗರದ ಹಿನ್ನೆಲೆಯ ಸುಮಾರು ೨೦ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಕಾದಂಬರಿಗಳು ತೆಲುಗು ಭಾಷೆಗೂ ಅನುವಾದಗೊಂಡಿವೆ. ಇದಲ್ಲದೆ ಇವರು ಸಾಮಾಜಿಕ ಕಾದಂಬರಿಗಳನ್ನೂ ರಚಿಸಿದ್ದು ಅವುಗಳಲ್ಲಿ “ಮಿಸ್ ಲೀಲಾವತಿ” ಬಹಳ ಜನಪ್ರಿಯವಾದ ಕಾದಂಬರಿ.
ದಾಸಸಾಹಿತ್ಯದ ಬಗೆಗೂ ಸಂಶೋಧನೆ ಮಾಡಿದ ಕೊರಟಿಯವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ.
ಕೊರಟಿಯವರು ಕೆಲವು ವರ್ಷ ಕನ್ನಡ ಸಾಹಿತ್ಯ ಪರಿಷತ್ತಿನ ಮುಖಪತ್ರಿಕೆಯಾದ “ಕನ್ನಡ ನುಡಿ”ಯ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
ಶ್ರೀನಿವಾಸರಾವ ಕೊರಟಿಯವರ ಕೆಲವು ಮುಖ್ಯ ಕೃತಿಗಳು:
[ಬದಲಾಯಿಸಿ] ಕಾದಂಬರಿ
- ಮಿಸ್ ಲೀಲಾವತಿ
- ಗೃಹಿಣಿ
- ಹೆಣ್ಣಿನ ಹುಚ್ಚು
- ನಿರಂಜನಿ
- ಗುಣವಂತಿ
- ಲಕ್ಷ್ಮಿ
- ಜಗನ್ಮೋಹಿನಿ
- ಶಾಂತಿವಾದಿ
- ದೊಂಬರ ಚೆಲುವೆ
- ಸೂಳೆಯ ಕೆರೆ
- ಅಮಾತ್ಯರತ್ನ
- ಪರಮೇಶ್ವರ ಪುಲಿಕೇಶಿ
- ರಾಯ ಪರಾಭವ
- ಉಭಯ ಲೋಕೇಶ್ವರ
- ರಾಮರಾಯನ ತಲೆ
- ರಾಜಕ್ಷಯ
[ಬದಲಾಯಿಸಿ] ಕಥಾಸಂಕಲನ
- ಚಾರಿತ್ರಿಕ ಕಥಾಮಂಜರಿ
[ಬದಲಾಯಿಸಿ] ದಾಸ ಸಾಹಿತ್ಯ
- ಶ್ರೀ ವಾದಿರಾಜರು
- ಶ್ರೀ ಜಯತೀರ್ಥರು
- ಶ್ರೀ ಪುರಂದರದಾಸರು
[ಬದಲಾಯಿಸಿ] ಬಾಲಸಾಹಿತ್ಯ
- ಶಿವಪ್ಪ ನಾಯಕ
- ನೃಪತುಂಗ
- ವಿದ್ಯಾರಣ್ಯರು
- ಮುಂಡರಗಿ ಭೀಮರಾಯರು
- ಕಿತ್ತೂರ ಚೆನ್ನಮ್ಮ
[ಬದಲಾಯಿಸಿ] ಚಿತ್ರೀಕರಣ
ಕೊರಟಿಯವರ ಎರಡು ಕಾದಂಬರಿಗಳು ಕನ್ನಡ ಚಲನಚಿತ್ರಗಳಾಗಿ ಬಹಳ ಯಶಸ್ಸು ಪಡೆದವು:
- ಮಿಸ್ ಲೀಲಾವತಿ
- ಗೃಹಿಣಿ
ಮಿಸ್ ಲೀಲಾವತಿ ಚಲನಚಿತ್ರದಲ್ಲಿ ‘ಅಭಿನಯ ಶಾರದೆ’ ಎಂದು ಬಿರುದು ಪಡೆದಿರುವ ಜಯಂತಿ ಯವರು ಹಾಗು ಕುಮಾರತ್ರಯರಲ್ಲಿ ಒಬ್ಬರಾದ ಉದಯಕುಮಾರರವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕುವೆಂಪುರವರು ರಚಿಸಿದ ‘ದೋಣಿ ಸಾಗಲಿ ಮುಂದೆ ಹೋಗಲಿ..’ ಗೀತೆಯು ಈ ಚಲನಚಿತ್ರದ ಅತ್ಯಂತ ಸುಶ್ರಾವ್ಯ ಗೀತೆಯಾಗಿದೆ.