ಮಂಕುತಿಮ್ಮನ ಕಗ್ಗ
From Wikipedia
ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.ಯವರ ಪದ್ಯ ಪುಸ್ತಕ. ಇದು ಮಿನಿ-ಭಗವದ್ಗೀತೆ ಎಂದೂ ಕೆಲವರಲ್ಲಿ ಜನಪ್ರಿಯವಾಗಿದೆ. ಇದರಲ್ಲಿ ಡಿ.ವಿ.ಜಿ.ಯವರು ಜೀವನದ ವಿಶಿಷ್ಟ ಆಯಾಮಗಳನ್ನು,ಜೀವನದ ರೀತಿ ನೀತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಇದರಲ್ಲಿ ಮಹಾಭಾರತ, ರಾಮಾಯಣಗಳಲ್ಲದೆ ಪ್ರಸಕ್ತ ಕಾಲದ ಘಟನೆಗಳನ್ನು ಉಲ್ಲೆಖಿಸಿ ಜೀವನದ ಮೌಲ್ಯಗಳನ್ನು ವಿವರಿಸಲಾಗಿದೆ. ಇದನ್ನು ಕನ್ನಡಿಗರ ಭಗವದ್ಗೀತೆ ಸಹ ಎನ್ನಬಹುದು, ಆದರೆ ಡಿ.ವಿ.ಜಿ.ಯವರಿಗಾಗಲಿ, ಈ ಪುಸ್ತಕಕ್ಕಾಗಲಿ ತಕ್ಕ ಪ್ರಚಾರ ಹಾಗು ಗೌರವ ಸಿಕ್ಕಿಲ್ಲ ಎನ್ನುವುದು ವಿಪರ್ಯಾಸದ ಸಂಗತಿಯೆಂದು ಸಾಹಿತ್ಯಾಸಕ್ತರು ಪ್ರತಿಪಾದಿಸುತ್ತಾರೆ. ಈ ಪುಸ್ತಕದ ಉಲ್ಲೇಖಗಳನ್ನು ಕನ್ನಡಿಗರ ಉಪನ್ಯಾಸಾಳಲ್ಲಿ ಹಾಗೂ ಪುರಾಣದ ಚರ್ಚೆಗಳಲ್ಲಿ ಧೀಮಂತ ಜನರು ಉಪಯೋಗಿಸುತ್ತಾರೆ.ಈ ಪುಸ್ತಕವು ಇಂಗ್ಲಿಷ್, ಫ್ರೆಂಚ್ ಹಾಗೂ ಹಲವಾರು ಭಾಷೆಗಳಲ್ಲಿ ಅನುವಾದಗೊಂಡಿದೆ.
[ಬದಲಾಯಿಸಿ] ಪದ್ಯ ಶೈಲಿ
ನಾಲ್ಕು ಸಾಲುಗಳುಳ್ಳ ವಿಶಿಷ್ಟ ಶೈಲಿಯಲ್ಲಿ ಪದ್ಯಗಳನ್ನು ಬರೆಯಲಾಗಿದೆ, ಅಂಕಿತನಾಮ ಶೈಲಿಯಲ್ಲಿ ಮಂಕುತಿಮ್ಮ ಎಂದು ಸಂಭೋದಿಸಲಾಗಿದೆ. ಮಂಕುತಿಮ್ಮ ಎಂದು ಕವಿಯು ಸಂಭೋದಿಸಿದ್ದು ಜೀವನದ ತಿರುಳನರಿಯಬಯಸಿದ ಓದುಗರನ್ನು.