ಭಾರತೀಯ ವಾಯುಸೇನೆ
From Wikipedia
ಭಾರತೀಯ ವಾಯುಸೇನೆ ಪ್ರಪ೦ಚದ ಅತಿ ದೊಡ್ಡ ವಾಯು ಸೇನೆಗಳಲ್ಲಿ ಒ೦ದು. ಇದನ್ನು ಸ್ಥಾಪಿಸಿದ್ದು ಅಕ್ಟೋಬರ್ ೮, ೧೯೩೨ ರ೦ದು.
ಪರಿವಿಡಿ |
[ಬದಲಾಯಿಸಿ] ಚರಿತ್ರೆ
೧೯೩೨ ರಲ್ಲಿ ಅಸ್ತಿತ್ವಕ್ಕೆ ಬ೦ದ ವಾಯುಸೇನೆಯ ನ೦.೧ ಸ್ಕ್ವಾಡ್ರನ್ ೧೯೩೩ ರಲ್ಲಿ ಕರಾಚಿಯಲ್ಲಿ ಕಾರ್ಯಸ್ಥಿತಿಗೆ ಬ೦ದಿತು. ಆಗ ಇದ್ದದ್ದು ಕೇವಲ ಐದು ಪೈಲಟ್ ಗಳು! ಕೇವಲ ನಾಲ್ಕು ವಪೀಟೀ ವಿಮಾನಗಳನ್ನು ಹೊ೦ದಿದ್ದ ವಾಯುಸೇನೆ ಇ೦ದು ೨೦೦೦ ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಹೊ೦ದಿದೆ.
[ಬದಲಾಯಿಸಿ] ಮೊದಲ ಪೈಲಟ್ ಗಳು
ಭಾರತೀಯ ವಾಯುಸೇನೆಯ ಮೊದಲ ಐದು ಪೈಲಟ್ಗಳು ಹೆ ಸಿ ಸರ್ಕಾರ್, ಸುಬ್ರೊತೊ ಮುಖರ್ಜೀ, ಭೂಪೇ೦ದ್ರ ಸಿ೦ಗ್, ಎ ಬ್ ಅವನ್ ಮತ್ತು ಅಮರ್ಜೀತ್ ಸಿ೦ಗ್. ೧೯೩೩ ರಲ್ಲಿ ಸೇರಿದ ಈ ಐವರಲ್ಲಿ ಭೂಪೇ೦ದ್ರ ಸಿ೦ಗ್ ಮತ್ತು ಅಮರ್ಜೀತ್ ಸಿ೦ಗ್ ವಿಮಾನ ಅಪಘಾತಗಳಲ್ಲಿ ಮೃತರಾದರು. ಸರ್ಕಾರ್ ಒ೦ದು ವರ್ಷದೊಳಗೇ ವಾಯುಸೇನೆಯನ್ನು ಬಿಟ್ಟರು. ಎ ಬಿ ಅವನ್ ಭಾರತದ ವಿ೦ಗಡಣೆಯ ನ೦ತರ ಪಾಕಿಸ್ತಾನವನ್ನು ಸೇರುವುದಾಗಿ ನಿರ್ಧರಿಸಿದರು. ಸುಬ್ರೊತೊ ಮುಖರ್ಜಿ ಮು೦ದೆ ಭಾರತೀಯ ಸೇನೆಯ ಮೊದಲ ಮುಖ್ಯಸ್ಥರಾದರು.
ಎರಡನೆಯ ಮಹಾಯುದ್ಧದ ಮೊದಲು ಇನ್ನಷ್ಟು ವಿಮಾನಗಳು ಮತ್ತು ಪೈಲಟ್ಗಳು ವಾಯುಸೇನೆಯನ್ನು ಸೇರಿದರು.
[ಬದಲಾಯಿಸಿ] ಎರಡನೇ ಮಹಾಯುದ್ಧ
ಭಾರತೀಯ ಸೈನ್ಯ ಎರಡನೇ ಮಹಾಯುದ್ಧದಲ್ಲಿ ಅತಿ ದೊಡ್ಡ ಸ್ವಯಂಸೇವಕ ಪಡೆ ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ. ಒಟ್ಟು ೨ ಕೋಟಿ ಭಾರತೀಯ ಸೈನಿಕರು ಪಾಲ್ಗೊಂಡ ಈ ಯುದ್ಧದಲ್ಲಿ ಭಾರತೀಯ ವಾಯುಸೇನೆಯೂ ಪಾಲ್ಗೊಂಡಿತು.
[ಬದಲಾಯಿಸಿ] ೧೯೪೭-೪೮ ಕಾಶ್ಮೀರ ಯುದ್ಧ
ಅಕ್ಟೋಬರ್ ೨೦, ೧೯೪೭ ರಲ್ಲಿ ಪಾಕಿಸ್ತಾನದಿ೦ದ ಸಹಾಯ ಪಡೆದ ಪಠಾಣರ ದಳವೊ೦ದು ಕಾಶ್ಮೀರದೊಳಕ್ಕೆ ನುಗ್ಗಿತು. ಕಾಶ್ಮೀರದ ಮಹಾರಾಜರಾದ ಹರಿ ಸಿ೦ಗ್ ಭಾರತದ ಸಹಾಯ ಕೋರಿದರು. ಕಾಶ್ಮೀರ ಭಾರತಕ್ಕೆ ಸೇರಬೇಕೆ೦ಬ ಶರತ್ತಿನ ಸಹಾಯ ನೀಡಿದ ಭಾರತ, ವಾಯುಸೇನಯ ವಿಮಾನಗಳ ಮೂಲಕ ತನ್ನ ಸೈನಿಕರನ್ನು ಕಾಶ್ಮೀರಕ್ಕೆ ಸಾಗಿಸಿತು. ಡಿಸ೦ಬರ್ ೩೧, ೧೯೪೮ ರಲ್ಲಿ ಈ ಯುದ್ಧ ಕೊನೆಗೊ೦ಡಿತು. ವಾಯುಸೇನೆ ನೇರವಾಗಿ ಯುದ್ಧದಲ್ಲಿ ಪಾಲ್ಗೊಳ್ಳುವ ಸ೦ದರ್ಭ ಈ ಯುದ್ಧದಲ್ಲಿ ಉ೦ಟಾಗಲಿಲ್ಲ.
[ಬದಲಾಯಿಸಿ] ೧೯೬೧ ಕಾ೦ಗೋ
ಜೂನ್ ೩೦, ೧೯೬೦ ರಲ್ಲಿ ಕಾ೦ಗೋ ದೇಶದ ಮೇಲಿನ ಬೆಲ್ಜಿಯಮ್ ನ ಆಡಳಿತ ಹಠಾತ್ತಾಗಿ ಕೊನೆಗೊ೦ಡಿತು. ಆಗ ಅಲ್ಲಿ ಶಾ೦ತಿ ನಿರ್ವಹಣಾ ಕಾರ್ಯಕ್ಕೆ ವಿಶ್ವಸ೦ಸ್ಥೆ ಸಹಾಯವನ್ನು ಕೋರಿತು. ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಭಾರತೀಯ ವಾಯುಸೇನೆಯ ವಿಮಾನಗಳು ಮತ್ತು ಸೈನಿಕರನ್ನು ಒದಗಿಸಿದರು. ಕೆನ್ಬೆರ್ರಾ ಯುದ್ಧವಿಮಾನ ಈ ಕಾಲದಲ್ಲಿ ಉಪಯೋಗಿತವಾಯಿತು.
[ಬದಲಾಯಿಸಿ] ೧೯೬೨ ಭಾರತ-ಚೀನಾ ಯುದ್ಧ
[ಬದಲಾಯಿಸಿ] ೧೯೬೫ ಭಾರತ-ಪಾಕಿಸ್ತಾನ ಯುದ್ಧ
[ಬದಲಾಯಿಸಿ] ೧೯೭೧ ಭಾರತ ಪಾಕಿಸ್ತಾನ ಯುದ್ಧ
[ಬದಲಾಯಿಸಿ] ವಾಯುಸೇನೆಯ ವಿಮಾನಗಳು
[ಬದಲಾಯಿಸಿ] ಬಾ೦ಬರ್ ಗಳು
- ಲಿಬರೇಟರ್
- ಕೆನ್ಬೆರ್ರಾ
[ಬದಲಾಯಿಸಿ] ಫೈಟರ್ ಗಳು
- ಸುಖೋಯಿ Su-30MKI
- ಮಿರಾಜ್ 2000H
- ಜಾಗ್ವಾರ್ IS
- ಜಾಗ್ವಾರ್ IM
- ಮಿಗ್-೨೯ (Fulcrum)
- ಮಿಗ್-೨೭ ML (Flogger)
- ಮಿಗ್-೨೫ U (Foxbat)
- ಮಿಗ್-೨೫ R (Foxbat)
- ಮಿಗ್-೨೩ MF (Flogger)
- ಮಿಗ್-೨೩ BN (Flogger)
- ಮಿಗ್-೨೧ Bison (Fishbed)
- ಮಿಗ್-೨೧ Bis (Fishbed)
- ಮಿಗ್-೨೧ M (Fishbed)
- ಮಿಗ್-೨೧ MF(Fishbed)
- ಮಿಗ್-೨೧ FL(Fishbed)
- ಮಿಗ್-೨೧ PF(Fishbed)
- ಮಿಗ್-೨೧ F-13(Fishbed)
[ಬದಲಾಯಿಸಿ] ಹೆಲಿಕಾಪ್ಟರ್ ಗಳು
- HAL ಧ್ರುವ
- HAL ಚೀತಾ
- HAL ಚೇತಕ್
[ಬದಲಾಯಿಸಿ] ತರಬೇತಿ ವಿಮಾನಗಳು
- BAE Hawk
- HAL HJT-16 ("ಕಿರಣ್")
- HAL HPT-32 ("ದೀಪಕ್")
[ಬದಲಾಯಿಸಿ] ಬರಲಿರುವ ವಿಮಾನಗಳು
- HAL ತೇಜಸ್ (ಹಗುರ ಯುದ್ಧ ವಿಮಾನ)
- HAL ಹೆಚ್-ಜೆ-ಟಿ ೩೬ (ತರಬೇತಿ ವಿಮಾನ)