ಬಸವರಾಜ ಪುರಾಣಿಕ
From Wikipedia
ಇಂದಿನ ಕೊಪ್ಪಳ ಜಿಲ್ಲೆಯಲ್ಲಿರುವ ದ್ಯಾಂಪುರವೆಂಬ ಕುಗ್ರಾಮದಲ್ಲಿ ಇವರು ಜನಸಿದರು. ಇವರ ತಂದೆ ಕಲ್ಲಿನಾಥ ಶಾಸ್ತ್ರೀ ಪುರಾಣಿಕ, ತಾಯಿ ದಾನಮ್ಮ ಮತ್ತು ಅಣ್ಣಂದಿರು, ಸಿದ್ದಯ್ಯ ಪುರಾಣಿಕ, ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ
ಹುಬ್ಬಳ್ಳಿ, ಹೈದರಾಬಾದಿನಲ್ಲಿ ಶಾಲಾ ಶಿಕ್ಷಣ ಪಡೆದು ನಂತರ ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕೆನೆಡಾದಲ್ಲಿ ಉನ್ನತ ವ್ಯಾಸಂಗ ಮಾಡಿದ ನಂತರ ಅಲ್ಲಿ ದೊರೆತ ಉದ್ಯೋಗವಕಾಶಗಳನ್ನು ತಿರಸ್ಕರಿಸಿ ಬಂದ ಅವರು, ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಾಪಕರಾದರು. ಇದೇ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ, ಬೆಂಗಳೂರಿಗೆ ಬಂದು ನೆಲೆಸಿದರು.
ತಂದೆ, ಅಣ್ಣಂದಿರಿಂದ ಪ್ರಭಾವಿತರಾಗಿ ಸಾಹಿತ್ಯದಲ್ಲಿ ಅಭಿರುಚಿ ಹೊಂದಿರುವ ಇವರು, ಉತ್ತಮ ವಾಗ್ಮಿಗಳೆಂದು ಹೆಸರು ಮಾಡಿದ್ದಾರೆ. ಬಸವ ಸಮಿತಿ, ಬೆಂಗಳೂರು ಇವರ ಬಸವ ಜರ್ನಲ್ ಮಾಸ ಪತ್ರಿಕೆಯ ಸಂಪಾದಕರಾಗಿ ಈಗ ಕೆಲಸ ಮಾಡುತ್ತಿದ್ದಾರೆ ಮತ್ತು ಬಸವ ಸಮಿತಿಯು ರಾಜ್ಯದೆಲ್ಲೆಡೆ ಆಯೋಗಿಸಿರುವ "ಮನೆಯಿಂದ ಮನೆಗೆ" ಮತ್ತು "ಕಾಲೇಜಿನಿಂದ ಕಾಲೇಜಿಗೆ" ಶರಣ ತತ್ವ ಪ್ರಚಾರ ಕಾರ್ಯಕ್ರಮದಲ್ಲಿ ಸಕ್ರೀಯ ಪಾತ್ರ ವಹಿಸಿದ್ದಾರೆ.
ಪುಸ್ತಕಗಳು:
- ಕರ್ನಾಟಕ ವಿಶ್ವಾವಿದ್ಯಲಯವು ಪ್ರಕಟಿಸಿರುವ - ನಿಮಗೊಂದು ಮನೆ ಬೇಕೆ ಎಂಬ ಹೆಸರಿನ ಜನಸಾಮಾನ್ಯರಿಗಾಗಿ ವಾಸ್ತು ಶಿಲ್ಪ ಮತ್ತು ಗೃಹ ನಿರ್ಮಾಣ ಕುರಿತ ಪುಸ್ತಕ
- ಅಲ್ಲಮ ಪ್ರಭು - ಬಸವ ಸಮಿತಿ, ಬೆಂಗಳೂರು ಇವರ ಪ್ರಕಟಣೆ
- ಅಂಗ ಕರಂಡ, ಆತ್ಮ ಸುಗಂಧ - ಧುದನಿ ಸ್ವಾಮಿಗಳ ಕುರಿತ ಪುಸ್ತಕ, ಪ್ರಕಟಣೆ ಧುದನಿ ಮಠ, ಮಹಾರಾಷ್ಟ್ರ
ವಿಜ್ಞಾನ, ಧರ್ಮ ಮತ್ತು ಶಿವಶರಣರನ್ನು ಹಲವಾರು ಲೇಖನಗಳನ್ನು ಕನ್ನಡ ದಿನಪತ್ರಿಕೆಗಳಲ್ಲಿ ಮತ್ತು ಬಸವ ಪಥ ಮಾಸ ಪತ್ರಿಕೆಯಲ್ಲಿ ಬರೆದಿದ್ದಾರೆ. ಬರೆದಿದ್ದಾರೆ. ಅಲ್ಲಮ ಪ್ರಭು ಕುರಿತು ಮೌಲಿಕ ಪುಸ್ತಕವನ್ನು ಬರೆದಿದ್ದಾರೆ. ಬೆಂಗಳೂರಿನಲ್ಲಿರುವ ಅಖಿಲ ಭಾರತ ಬಸವ ಸಮಿತಿಯಲ್ಲಿ ಶರಣ ತತ್ವ ಪ್ರಸಾರಕ್ಕಾಗಿ ಮೀಸಲಾಗಿರುವ ಬಸವ ಪಥ ಪ್ರಕಟಣೆಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.
ಕುಟುಂಬ: ಮಡದಿ ಡಾ.ವಿಮಲಾ ಪುರಾಣಿಕ, ಸರ್ಕಾರಿ ವೈದ್ಯರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಮಗಳು ಅಪರ್ಣಾ ಮತ್ತು ಮಗ ದೀಪಕ್ ಪುರಾಣಿಕ.