ನೆಹರು ವರದಿ
From Wikipedia
೧೯೨೮ರ "ನೆಹರು ವರದಿ" ಭಾರತದ ಸಂವಿಧಾನದ ಸ್ಥಾಪನೆಯ ಜ್ಞಾಪನಾ ಪತ್ರವಾಗಿತ್ತು. ಇದನ್ನು ಸರ್ವ ಪಕ್ಷ ಸಮಿತಿಯು ನಿವೇದಿಸಿತ್ತು. ಈ ಸಮಿತಿಯ ಅಧ್ಯಕ್ಷತೆಯನ್ನು ಮೋತಿಲಾಲ್ ನೆಹರು ವಹಿಸಿದ್ದರು, ಹಾಗೂ ಅವರ ಪುತ್ರ ಜವಾಹರಲಾಲ್ ನೆಹರು ಕಾರ್ಯದರ್ಶಿಯಾಗಿದ್ದರು. ಈ ಸಮಿತಿಯಲ್ಲಿ ಒಂಬತ್ತು ಸದಸ್ಯರಿದ್ದು, ಅವರಲ್ಲಿ ಇಬ್ಬರು ಮುಸ್ಲಿಮರಾಗಿದ್ದರು.
ಪರಿವಿಡಿ |
[ಬದಲಾಯಿಸಿ] ಸ್ವಂತ ಸಂವಿಧಾನ ರಚನೆಯ ಹಕ್ಕು
ಬ್ರಿಟಿಷರ ಪ್ರಕಾರ, ಭಾರತದ ಸಂವಿಧಾನವನ್ನು ರಚಿಸುವ ಹಕ್ಕು ಬ್ರಿಟಿಷರದ್ದೇ ಆಗಿತ್ತು. ಇದಕ್ಕೆ ಭಾರತೀಯರ ಅಸಮಾಧಾನ ಇದ್ದೇ ಇತ್ತು.
[ಬದಲಾಯಿಸಿ] ನೆಹರು ವರದಿ
ನೆಹರು ವರದಿಯ ಪ್ರಕಾರ ಭಾರತವು ಬ್ರಿಟಿಷ್ ಕಾಮನ್‌ವೆಲ್ತ್‌ನಲ್ಲಿ ಒಂದು ಅಧೀನ ರಾಷ್ಟ್ರವಾಗಿರಬೇಕೆಂದು. ಈ ವರದಿಯ ಕೆಲವು ಮುಖ್ಯ ಅಂಶಗಳು ಹೀಗಿವೆ: (details)
- ಸರಕಾರದ ಎಲ್ಲ ಅಧಿಕಾರಗಳು - ಶಾಸಕಾಂಗ, ಕಾರ್ಯಾಂಗ, ಮತ್ತು ನ್ಯಾಯಾಂಗ - ಜನರಿಂದ ದೊರೆಯಲ್ಪಟ್ಟಿವೆ ಹಾಗೂ ಈ ಸಂವಿಧಾನ ಕೊಡುವ ಅಧಿಕಾರದಿಂದ ಸ್ಥಾಪಿಸಲಾಗುತ್ತವೆ.
- ಯಾವುದೇ ಅಧಿಕೃತ ಧರ್ಮವಿರುವುದಿಲ್ಲ, ಪುರುಷರು ಮತ್ತು ಮಹಿಳೆಯರಿಗೆ ನಾಗರಿಕರಾಗಿ ಸಮಾನ ಹಕ್ಕುಗಳಿರುತ್ತವೆ.
- ಸಂಯುಕ್ತ ಸರಕಾರವಿದ್ದು ಕೆಲವು ಅಧಿಕಾರಗಳು ಮಾತ್ರ ಕೇಂದ್ರ ಸರಕಾರಕ್ಕಿರುತ್ತವೆ.
- ಸರ್ವೋಚ್ಛ ನ್ಯಾಯಾಲಯ ಮತ್ತು ಭಾಷಾವಾರು ಪ್ರಾಂತ್ಯಗಳ ಸ್ಥಾಪನೆ
- ನಿರ್ದಿಷ್ಟ ಕೋಮಿಗೆ ವಿಶಿಷ್ಟ ಚುನಾವಣೆ ಪದ್ಧತಿ ಹಾಗೂ ಅಲ್ಪಸಂಖ್ಯಾತರಿಗೆ ವಿಶೇಷ ಅಧಿಕಾರಗಳು - ಇದ್ಯಾವುದೂ ಈ ವರದಿಯಲ್ಲಿರಲಿಲ್ಲ. ಆದರೆ ೧೯೩೫ರ ಭಾರತ ಸರಕಾರ ಕಾಯ್ದೆಯು ಇವುಗಳನ್ನು ವಿಪುಲವಾಗಿ ಕೊಟ್ಟಿತು.
- ಭಾರತದ ಅಧಿಕೃತ ಭಾಷೆ ಹಿಂದುಸ್ತಾನಿ, ಇದನ್ನು ದೇವನಾಗರಿ ಅಥವಾ ಉರ್ದು ಲಿಪಿಗಳಲ್ಲಿ ಬಳಸಬಹುದಾಗಿತ್ತು. ಆಂಗ್ಲ ಭಾಷೆಯ ಉಪಯೋಗವನ್ನು ಮಾಡಬಹುದಾಗಿತ್ತು. (details)
ನೆಹರು ವರದಿ ಮತ್ತು ಸೈಮನ್ ಆಯೋಗದ ವರದಿಗಳನ್ನು ಭಾರತದ ದುಂಡು ಮೇಜಿನ ಸಮ್ಮೇಳನಕ್ಕೆ ಒಪ್ಪಿಸಲಾಯಿತು. ಆದರೆ ೧೯೩೫ರ ಭಾರತ ಸರಕಾರ ಕಾಯ್ದೆಯು ಸೈಮನ್ ಆಯೋಗದ ವರದಿಯ ಮೇಲೆ ಆಧರಿತವಾಗಿದ್ದು, ಇದರಲ್ಲಿ ನೆಹರು ವರದಿಯ ಪಾತ್ರವೇನೂ ಇರಲಿಲ್ಲ.
[ಬದಲಾಯಿಸಿ] ನೆಹರು ವರದಿಗೆ ಮುಸ್ಲಿಂ ಲೀಗ್‌ನ ಪ್ರತಿಕ್ರಿಯೆ
ಮುಸ್ಲಿಂ ನಾಯಕರು ನೆಹರು ವರದಿಯನ್ನು ವಿರೋಧಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮಹಮ್ಮದ್ ಅಲಿ ಜಿನ್ನಾ ೧೯೨೯ರಲ್ಲಿ ಹದಿನಾಲ್ಕು ಅಂಶಗಳನ್ನು ಮುಂದಿಟ್ಟರು. ಈ ಅಂಶಗಳು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲಿಸಿದ ಪ್ರತಿಫಲವಾಗಿ ಮುಂದೆ ಮುಸ್ಲಿಂ ಸಮುದಾಯದ ಮುಖ್ಯ ಬೇಡಿಕೆಗಳಾದವು. ಮುಖ್ಯ ವಿರೋಧಗಳೆಂದರೆ:
- ಮುಸ್ಲಿಮರಿಗೆ ಪ್ರತ್ಯೇಕ ಚುನಾವಣೆ ಸಮುದಾಯ The Lucknow Pact
- ಈಶಾನ್ಯ ಮತ್ತು ವಾಯವ್ಯ ಭಾರತಗಳಲ್ಲಿ ತಮ್ಮ ಪ್ರಾಬಲ್ಯವಿರುವುದನ್ನು ತಿಳಿದರೂ ಕೇಂದ್ರ ಸರಕಾರದಲ್ಲಿ ತಮ್ಮ ಬಹುಮತವಿರುವುದಿಲ್ಲ ಎಂದು ಮನಗಂಡ ಮುಸ್ಲಿಮರು ಪ್ರಾಂತೀಯ ಸರಕಾರಗಳಿಗೆ ಹೆಚ್ಚು ಅಧಿಕಾರವನ್ನು ಕೇಳಿದರು.
[ಬದಲಾಯಿಸಿ] ಇವುಗಳನ್ನೂ ನೋಡಿ
[ಬದಲಾಯಿಸಿ] ಉಲ್ಲೇಖನಗಳು
ಭಾರತದ ಸ್ವಾತಂತ್ರ್ಯ | |
---|---|
ಚರಿತ್ರೆ: | ವಸಾಹತುಶಾಹಿ - ಈಸ್ಟ್ ಇಂಡಿಯಾ ಕಂಪನಿ - ಪ್ಲಾಸೀ ಕದನ - ಬಕ್ಸರ್ ಕದನ |
ತತ್ವಗಳು: | ರಾಷ್ಟ್ರೀಯತೆ - ಸ್ವರಾಜ್ - ಗಾಂಧಿವಾದ - ಸತ್ಯಾಗ್ರಹ - ಹಿಂದೂ ರಾಷ್ಟ್ರೀಯತೆ - ಸ್ವದೇಶಿ - ಸಮಾಜವಾದ |
ಘಟನೆ-ಚಳುವಳಿಗಳು: | ೧೮೫೭ರ ದಂಗೆ - ಬಂಗಾಳದ ವಿಭಜನೆ - ಕ್ರಾಂತಿಕಾರಿಗಳು - ಚಂಪಾರಣ ಮತ್ತು ಖೇಡಾ - ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ - ಅಸಹಕಾರ - ಸೈಮನ್ ಆಯೋಗ - ನೆಹರು ವರದಿ - ಉಪ್ಪಿನ ಸತ್ಯಾಗ್ರಹ - ೧೯೩೫ರ ಭಾರತ ಸರ್ಕಾರ ಕಾಯ್ದೆ - ಕ್ರಿಪ್ ಆಯೋಗ - ಭಾರತ ಬಿಟ್ಟು ತೊಲಗಿ - ಮುಂಬೈ ದಂಗೆ |
ಸಂಘಟನೆಗಳು: | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - ಗದರ್ - ಹೋಂ ರೂಲ್ ಚಳುವಳಿ - ಭಾರತೀಯ ರಾಷ್ಟ್ರೀಯ ಸೇನೆ - ಆಜಾದ್ ಹಿಂದ್ - ಅನುಶೀಲನ ಸಮಿತಿ |
ನಾಯಕರು: | ಮಂಗಲ ಪಾಂಡೆ - ಝಾನ್ಸಿ ರಾಣಿ - ಬಾಲ ಗಂಗಾಧರ ತಿಲಕ್ - ಗೋಪಾಲ ಕೃಷ್ಣ ಗೋಖಲೆ - ಮಹಾತ್ಮಾ ಗಾಂಧಿ - ಸರ್ದಾರ್ ಪಟೇಲ್ - ಸುಭಾಷ್ ಚಂದ್ರ ಬೋಸ್ - ಜವಾಹರಲಾಲ್ ನೆಹರು - ಮೌಲಾನಾ ಆಜಾದ್ - ಚಂದ್ರಶೇಖರ್ ಆಜಾದ್ - ರಾಜಾಜಿ - ಭಗತ್ ಸಿಂಗ್ |
ಬ್ರಿಟಿಷ್ ಆಡಳಿತ: | ರಾಬರ್ಟ್ ಕ್ಲೈವ್ - ಲೂಯಿ ಮೌಂಟ್‌ಬ್ಯಾಟನ್ |
ಸ್ವಾತಂತ್ರ್ಯ: | ಕ್ಯಾಬಿನೆಟ್ ಆಯೋಗ - ಭಾರತದ ಸ್ವಾತಂತ್ರ್ಯ ಕಾಯ್ದೆ - ಭಾರತದ ವಿಭಜನೆ - ಭಾರತದ ರಾಜಕೀಯ ಒಗ್ಗೂಡುವಿಕೆ - ಭಾರತದ ಸಂವಿಧಾನ |