ದೊಡ್ಡರಂಗೇಗೌಡ
From Wikipedia
ದೊಡ್ಡರಂಗೇಗೌಡ - ಕನ್ನಡದ ಕವಿಗಳಲ್ಲೊಬ್ಬರು ಮತ್ತು ಚಿತ್ರಸಾಹಿತಿಗಳಲ್ಲೊಬ್ಬರು.
ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ೧೯೪೫ರಲ್ಲಿ ಜನಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಇವರು, ನಂತರ ಕನ್ನಡದಲ್ಲಿ ನವೋದಯ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸಿದರು. ಇವರ ಈ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್‍ಡಿ(ಡಾಕ್ಟರೇಟ್) ಪದವಿ ದೊರಕಿತು.
೧೯೭೨ರಿಂದ ೨೦೦೪ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಇರುವ ಎಸ್.ಎಲ್.ಎನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಸಾಹಿತ್ಯ ಕೃತಿಗಳು
- ಕನ್ನಡದಲ್ಲಿ ನವೋದಯ ಸಾಹಿತ್ಯ (ಸಂಶೋಧನಾ ಗ್ರಂಥ)
- ರಾಗ ರಂಗು (ಪುಸ್ತಕ)
[ಬದಲಾಯಿಸಿ] ಕಾರ್ಯ ನಿರ್ವಹಿಸಿದ ಹುದ್ದೆಗಳು
- ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ
- ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ
[ಬದಲಾಯಿಸಿ] ದೊಡ್ಡರಂಗೇಗೌಡ ಗೀತಸಾಹಿತ್ಯ ಒದಗಿಸಿರುವ ಕೆಲವು ಚಲನಚಿತ್ರಗಳು
- ರಂಗನಾಯಕಿ
- ಪರಸಂಗದ ಗೆಂಡೆತಿಮ್ಮ
- ಆಲೆಮನೆ
- ಅನುಪಮ
- ಅರುಣರಾಗ
- ಮುದುಡಿದ ತಾವರೆ ಅರಳಿತು
- ಏಳು ಸುತ್ತಿನ ಕೋಟೆ
- ಅಶ್ವಮೇಧ
- ಹೃದಯ ಗೀತೆ
- ಭೂಲೋಕದಲ್ಲಿ ಯಮರಾಜ
- ಜನುಮದ ಜೋಡಿ
- ಕುರುಬನ ರಾಣಿ
- ರಮ್ಯ ಚೈತ್ರಕಾಲ
- ತಂದೆಗೆ ತಕ್ಕ ಮಗ
[ಬದಲಾಯಿಸಿ] ದೊಡ್ಡರಂಗೇಗೌಡ ಗೀತಸಾಹಿತ್ಯ ಒದಗಿಸಿರುವ ಕೆಲವು ಭಾವಗೀತೆ ಆಲ್ಬಂಗಳು
- ಮಾವು-ಬೇವು
- ಭೂಮಿ-ಬಾನು
- ಪ್ರಾಯ ಮೂಡಿತು