ಜೋಳದ ರೊಟ್ಟಿ
From Wikipedia
ಜೋಳದ ರೊಟ್ಟಿ ಅಥವಾ ಭಾಕ್ರಿ ಉತ್ತರ ಕರ್ನಾಟಕದ ಊಟದ ಮುಖ್ಯ ಸಾಮಗ್ರಿ ಹಾಗೂ ಅಲ್ಲಿಯ ಸಂಪ್ರದಾಯದ ಒಂದು ಅವಿಭಾಜ್ಯ ಅಂಗ. ಇದನ್ನು ಅಲ್ಲಿಯ ಮುಖ್ಯವಾದ ಬೆಳೆಯಾದ ಜೋಳದಿಂದ ತಯಾರಿಸಲಾಗುತ್ತದೆ ಹಾಗೂ ಬಿಳಿ ಬಣ್ಣದ್ದಗಿರುತ್ತದೆ. ಸೆಜ್ಜೆಯಿಂದ ತಯಾರಾಗುವ ರೊಟ್ಟಿಯ ಬಣ್ಣ ಸ್ವಲ್ಪ ಹಳದಿ.
[ಬದಲಾಯಿಸಿ] ಮಹತ್ವ
ಇದನ್ನು ತಯಾರಿಸಲು ಯಾವುದೇ ತೈಲ ಪದಾರ್ಥವನ್ನು ಉಪಯೋಗಿಸುವುದಿಲ್ಲ. ಇದು ಬರೀ ಶರ್ಕರದ ಕಂತೆ. ಇದು ಎಲ್ಲ ವಯಸ್ಸಿನವರಿಗೂ ಕೊಡಬಹುದಾದ ಖಾದ್ಯ. ಇದನ್ನು ತಯಾರಿಸುವುದು ಒಂದು ಕಲೆ. ಇದನ್ನು ರೊಟ್ಟಿ ಬಡೆಯುವುದು ಎನ್ನುತ್ತಾರೆ. ಇದನ್ನು ಮಾಡುವುದು ಸುಲಭವಲ್ಲ. ಸಾಮಾನ್ಯವಾಗಿ ಬೆಳಿಗ್ಗೆ ರೊಟ್ಟಿ ಬಡೆಯುವುದರ ಟಪ್-ಟಪ್ ಶಬ್ದವನ್ನು ದೂರದಿಂದಲೆ ಕೇಳಿಯೇ ಉತ್ತರ ಕನ್ನಡಿಗರ ಮನೆಯನ್ನು ಗುರ್ತಿಸಬಹುದು.
[ಬದಲಾಯಿಸಿ] ವೈವಿಧ್ಯತೆಗಳು
ಇದನ್ನು ೨ ರೀತಿಯಾಗಿ ಉಣ್ಣಬಹುದು.
- ಬಿಸಿ ರೊಟ್ಟಿ
- ಖಟಿ/ಖಡಕ್ ರೊಟ್ಟಿ
ಸಾಮಾನ್ಯವಾಗಿ ಬಿಸಿ ರೊಟ್ಟಿ (ಬುಟ್ಟಿಯಿಂದ ಗಂಗಾಳದ ಬದಲು ತೆವೆಯಿಂದ ಗಂಗಾಳಕ್ಕೆ) ಅಡಿಗೆ ಮನೆಯಲ್ಲೇ ಒಲೆ ಮುಂದೆ ಕೂತು ತಿನ್ನುತ್ತಾರೆ. ಇದು ತುಂಬಾ ಮೃದು ಇದ್ದು ಜೀರ್ಣಿಸಲು ಅತಿ ಸುಲಭ.
ಖಟಿ ರೊಟ್ಟಿಯನ್ನು ಸುಡುವಾಗ ತೆವೆಯ ಮೇಲೆ ಸ್ವಲ್ಪ ಜಾಸ್ತಿ ಹೊತ್ತು ಸುಡುತ್ತಾರೆ. ಹಾಗಾಗಿ ಅದು ಹಪ್ಪಳದ ಹಾಗೆ ಖಡಕ್ ಇರುತ್ತದೆ. ಇದನ್ನು ತುಂಬಾ ದಿನಗಳವರೆಗೆ ಕೆಡದಂತೆ ಇಡಲು ಕೆಲವು ಕಡೆ ಬಿಸಿಲಲ್ಲೂ ಇದುತ್ತಾರೆ. ಇದನ್ನು 1 ತಿಂಗಳವರೆಗೆ ಸಂಗ್ರಹಿಸಿ ಇಡಬಹುದು.
೨೦೦೫ನೇ ಇಸ್ವಿಯ ಅಗಸ್ಟ್ ಜಲ ಪ್ರಳಯದ ಕಾಲದಲ್ಲಿ ನೆರೆ ಪ್ರಭಾವಿತ ಹಳ್ಳಿಗಳಲ್ಲಿ ಖಟಿ ರೊಟ್ಟಿಗಳನ್ನು ಹಂಚಲಾಗಿತ್ತು.