ಏ.ಕೆ.ರಾಮಾನುಜನ್
From Wikipedia
ಏ.ಕೆ.ರಾಮಾನುಜನ್ ೧೯೨೯ರಲ್ಲಿಮೈಸೂರಿನಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಬಿ.ಏ. ಮತ್ತು ಎಮ್.ಏ. ಪದವಿ ಗಳಿಸಿ ಅಧ್ಯಾಪಕರಾದರು. ಅಮೆರಿಕದ ಇಂಡಿಯಾನಾ ಯುನಿವರ್ಸಿಟಿಯಲ್ಲಿ ಭಾಷಾವಿಜ್ಞಾನದಲ್ಲಿ ಪಿ.ಎಚ್.ಡಿ. ಪದವಿ ಗಳಿಸಿದರು. ಬಳಿಕ ವಿಸ್ಕಾನ್‍ಸಿನ್, ಬರ್ಕಲಿ, ಮಿಶಿಗನ್ ಯುನಿವರ್ಸಿಟಿಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಚಿಕಾಗೊ ಯುನಿವರ್ಸಿಟಿಯಲ್ಲಿ ಭಾಷಾವಿಜ್ಞಾನ ಹಾಗು ದ್ರಾವಿಡ ಅಧ್ಯಯನದ ಪ್ರಾಧ್ಯಾಪಕರಾಗಿದ್ದರು. ರಾಮಾನುಜನ್ ಪದ್ಮಶ್ರೀಪ್ರಶಸ್ತಿ ಸಮ್ಮಾನಿತರು.
ರಾಮಾನುಜನ್ ಸಾಹಿತ್ಯ:
ಕನ್ನಡ ಕವನ ಸಂಕಲನಗಳು: ‘ ಹೊಕ್ಕಳಲ್ಲಿ ಹೂವಿಲ್ಲ’, ‘ ಮತ್ತು ಇತರ ಪದ್ಯಗಳು’, 'ಕುಂಟೋ ಬಿಲ್ಲೆ'
ಕನ್ನಡ ಗದ್ಯ: ಮತ್ತೊಬ್ಬನ ಆತ್ಮಚರಿತ್ರೆ
ಕನ್ನಡಕ್ಕೆ ಅನುವಾದ: ಶೌರಿಯವರ ‘ ಹಳದಿ ಮೀನು ‘ ಇಂಗ್ಲಿಷ್ ಕವನ ಸಂಕಲನಗಳು: ದಿ ಸ್ಪೈಡರ್ಸ್, ರಿಲೇಶನ್ಸ್
ಇಂಗ್ಲಿಷ್ ಗದ್ಯ: South and South East Asia- Dictionary of oriental literatures ದಲ್ಲಿ ಎರಡು ಲೇಖನಗಳು
ಕನ್ನಡದಿಂದ ಇಂಗ್ಲಿಷ್ ಗೆ ಅನುವಾದ: ಸ್ಪೀಕಿಂಗ ಆಫ್ ಶಿವ( ವಚನಗಳ ಅನುವಾದ)
ಪ್ರಾಚೀನ ತಮಿಳು ಸಾಹಿತ್ಯದಿಂದ ಇಂಗ್ಲಿಷ್ ಗೆ ಅನುವಾದ: ದಿ ಇಂಟೀರಿಯರ್ ಲ್ಯಾಂಡಸ್ಕೇಪ್