ಏಕಲವ್ಯ
From Wikipedia
ಮಹಾಭಾರತ ಮಹಾಕಾವ್ಯದಲ್ಲಿ ಏಕಲವ್ಯ ನಿಷಾದ ಪಂಗಡದ ರಾಜಕುಮಾರ. ಇವನು ದ್ರೋಣಾಚಾರ್ಯರ ನಿರಾಕರಣೆಯ ಹೊರತಾಗಿಯೂ ಅರ್ಜುನನಷ್ಟೇ ಕೌಶಲ್ಯ ಹೊಂದಿದ್ದನು.
ಪರಿವಿಡಿ |
[ಬದಲಾಯಿಸಿ] ದ್ರೋಣಾಚಾರ್ಯರ ನಿರಾಕರಣೆ ಮತ್ತು ಸ್ವಂತ ಕಲಿಕೆ
ಏಕಲವ್ಯನು ಬಿಲ್ವಿದ್ಯೆಯನ್ನು ಸಾಧಿಸಿಕೊಳ್ಳುವ ಹಂಬಲದಿಂದ ದ್ರೋಣಾಚರ್ಯರ ಬಳಿಗೆ ಬರುತ್ತಾನೆ. ಆದರೆ ತಮ್ಮ ಮೆಚ್ಚಿನ ಶಿಷ್ಯ ಅರ್ಜುನನನ್ನು ಜಗತ್ತಿನ ಶ್ರೇಷ್ಠ ಬಿಲ್ಲುಗಾರನನ್ನಾಗಿ ಮಾಡುವ ಪಣ ತೊಟ್ಟಿದ್ದ ದ್ರೋಣರು ಏಕಲವ್ಯನನ್ನು ಶಿಷ್ಯನಾಗಿ ಸ್ವೀಕರಿಸಲು ನಿರಾಕರಿಸುತ್ತಾರೆ. ನಿರಾಶನಾಗದೆ ಏಕಲವ್ಯನು ಕಾಡಿಗೆ ಮರಳಿ ದ್ರೋಣರ ಮಣ್ಣಿನ ಮೂರ್ತಿಯನ್ನು ಮಾಡಿ ಅವರನ್ನೇ ಗುರುವೆಂದು ನಂಬಿ ಬಿಲ್ವಿದ್ಯೆಯನ್ನು ಸ್ವತಃ ಸಾಧಿಸಿಕೊಳ್ಳುತ್ತಾನೆ. ತನ್ನ ಇಚ್ಛಾಶಕ್ತಿಯ ಬಲದಿಂದಲೇ ಏಕಲವ್ಯನು ಯುವ ಅರ್ಜುನನ ಸಮಾನಾರ್ಥಕವಾಗಿ ಕೌಶಲ್ಯವನ್ನು ಹೊಂದುತ್ತಾನೆ.
ಒಂದು ದಿನ ಅಭ್ಯಾಸದಲ್ಲಿ ನಿರತನಾದಾಗ ನಾಯಿಯೊಂದು ಬೊಗಳುತ್ತಿದ್ದು ತನ್ನ ಏಕಾಗ್ರತೆಗೆ ಭಂಗ ತಂದಾಗ ಅದರ ಕಡೆ ನೋಡದೆ ಬಾಣಗಳನ್ನು ಬಿಟ್ಟು ಅದನ್ನು ಸುಮ್ಮನಾಗಿಸುತ್ತಾನೆ. ಈ ನಾಯಿಯು ಓಡುವುದನ್ನು ನೋಡಿದ ಪಾಂಡವರು ಈ ಸಾಹಸವನ್ನು ಮಾಡಿದವರಾರೆಂದು ಆಶ್ಚರ್ಯ ಚಕಿತರಾಗುತ್ತಾರೆ. ಆಗ ಏಕಲವ್ಯನು ಆ ಸ್ಥಳಕ್ಕೆ ಹಾಜರಾಗಿ ತನ್ನನ್ನು ದ್ರೋಣಚಾರ್ಯರ ಶಿಷ್ಯ ಎಂದು ಪರಿಚಯಿಸಿಕೊಳ್ಳುತ್ತಾನೆ.
[ಬದಲಾಯಿಸಿ] ಏಕಲವ್ಯನ ದಕ್ಷಿಣೆ
ಅರ್ಜುನನಿಗೆ ಶ್ರೇಷ್ಠ ಬಿಲ್ಲುಗಾರನಾಗಿ ತನ್ನ ಸ್ಥಾನ ಚ್ಯುತಿಯಾಗುವ ಚಿಂತೆಯಾಗುತ್ತದೆ. ಇದನ್ನು ಗಮಿನಿಸಿದ ದ್ರೋಣರು ರಾಜಕುಮಾರರ ಜೊತೆ ಕಾಡಿಗೆ ತೆರಳಿ ಏಕಲವ್ಯನನ್ನು ಸಂಧಿಸುತ್ತಾನೆ. ತನ್ನ ಗುರುವನ್ನು ಕಂಡ ಕೂಡಲೇ ಏಕಲವ್ಯನು ಆನಂದಿತನಾಗಿ ಗುರುಸೇವೆಗೆ ತೊಡಗುತ್ತಾನೆ. ತಮ್ಮ ನಿರಾಕರಣೆಯ ಹೊರತಾಗಿಯೂ ಶಿಷ್ಯತ್ವವನ್ನು ಹೇಳಿಕೊಂಡಿದ್ದರಿಂದ ಕುಪಿತರಾದ ದ್ರೋಣಾಚಾರ್ಯರು ಏಕಲವ್ಯನ ಧಾರ್ಷ್ಟ್ಯವನ್ನು ತೆಗಳುತ್ತಾರೆ. ಆಗ ಏಕಲವ್ಯನಿಂದ ಒಂದು ದಕ್ಷಿಣೆಯನ್ನು ಕೇಳುತ್ತಾರೆ. ಇದಕ್ಕೆ ಒಪ್ಪಿದ ಏಕಲವ್ಯನ ಬಲ ಹೆಬ್ಬೆರಳನ್ನು ಕೇಳುತ್ತಾರೆ. ತನ್ನ ಬಿಲ್ವಿದ್ಯೆಯ ಕೌಶಲ್ಯಕ್ಕೆ ಇದರಿಂದ ಹಾನಿಯಾಗುವುದೆಂದು ತಿಳಿದ ಹೊರತಾಗಿಯೂ ಸ್ವಲ್ಪವೂ ಯೋಚಿಸದೆ ಏಕಲವ್ಯನು ಇದನ್ನು ಪೂರೈಸುತ್ತಾನೆ. ಇದು ಗುರು ಭಕ್ತಿಯ ಅತಿ ಶ್ರೇಷ್ಠ ನಿದರ್ಶನವಾಗಿದೆ. ದ್ರೋಣಾಚಾರ್ಯರ ಸ್ವಾರ್ಥ ಮತ್ತು ಅಹಂಕಾರಗಳೂ ಇದರಲ್ಲಿ ಕಾಣಸಿಗುತ್ತವೆ.
[ಬದಲಾಯಿಸಿ] ಏಕಲವ್ಯನ ನಿಧನ
ಏಕಲವ್ಯನ ಜರಾಸಂಧನ ಪರವಾಗಿ ಕೃಷ್ಣ ಮತ್ತು ಬಲರಾಮರ ವಿರುದ್ಧವಾಗಿ ಹೋರಾಡಿ ಯಾದವ ಸೈನ್ಯದ ಮೂಲಕ ಹತನಾಗುತ್ತಾನೆ.
[ಬದಲಾಯಿಸಿ] ಆಧುನಿಕ ದೃಷ್ಟಿಕೋನ
ಏಕಲವ್ಯನ ಕಥೆಯನ್ನು ಆಧುನಿಕ ವಿಮರ್ಶಕರು ಜಾತೀಯತೆಯ ನಿದರ್ಶನವೆಂದು ಟೀಕಿಸುತ್ತಾರೆ. ಆದರೆ ಇದನ್ನು ದ್ರೋಣಾಚಾರ್ಯರ ಸ್ವಾರ್ಥವೆಂದು ಪರಿಗಣಿಸಬಹುದು.
ವೇದವ್ಯಾಸ ವಿರಚಿತ ಮಹಾಭಾರತ | |
---|---|
ಪಾತ್ರಗಳು | |
ಕುರುವಂಶ | ಇತರರು |
ಶಂತನು | ಗಂಗೆ | ಭೀಷ್ಮ | ಸತ್ಯವತಿ | ಚಿತ್ರಾಂಗದ | ವಿಚಿತ್ರವೀರ್ಯ | ಅಂಬಿಕಾ| ಅಂಬಲಿಕಾ | ವಿದುರ | ಧೃತರಾಷ್ಟ್ರ | ಗಾಂಧಾರಿ | ಶಕುನಿ | ಸುಭದ್ರ | ಪಾಂಡು | ಕುಂತಿ | ಮಾದ್ರಿ | ಯುಧಿಷ್ಠಿರ | ಭೀಮಸೇನ | ಅರ್ಜುನ | ನಕುಲ | ಸಹದೇವ | ದುರ್ಯೋಧನ | ದುಶ್ಯಾಸನ | ಯುಯುತ್ಸು | ದುಶ್ಯಲಾ | ದ್ರೌಪದಿ | ಹಿಡಿಂಬಿ | ಘಟೋತ್ಕಚ | ಅಹಿಲಾವತಿ | ಬಬ್ರುವಾಹನ | ಅಭಿಮನ್ಯು | ಉತ್ತರೆ | ಉಲೂಚಿ | ಅಂಬೆ | ಬಾರ್ಬರಿಕಾ |ಇರಾವನ | ಪರೀಕ್ಷಿತ | ವಿರಾಟ | ಕೃಪಾಚಾರ್ಯ | ದ್ರೋಣಾಚಾರ್ಯ | ಅಶ್ವತ್ಥಾಮ | ಏಕಲವ್ಯ | ಕೃತವರ್ಮ | ಜರಾಸಂಧ | ಸತ್ಯಕಿ | ಮಯಾಸುರ | ದೂರ್ವಾಸ | ಸಂಜಯ | ಜನಮೇಜಯ | ವೇದವ್ಯಾಸ | ಕರ್ಣ | ಜಯದ್ರಥ | ಕೃಷ್ಣ | ಬಲರಾಮ | ದ್ರುಪದ | ಹಿಡಿಂಬ | ದೃಷ್ಟದ್ಯುಮ್ನ | ಶಲ್ಯ | ಅತಿರಥ | ಶಿಖಂಡಿ |
ಇತರೆ | |
ಪಾಂಡವರು | ಕೌರವರು | ಹಸ್ತಿನಾಪುರ | ಇಂದ್ರಪ್ರಸ್ಥ | ಕುರುಕ್ಷೇತ್ರ ಯುದ್ಧ | ಭಗವದ್ಗೀತೆ |