ಎಂ.ಎಸ್.ಪುಟ್ಟಣ್ಣ
From Wikipedia
ಮೈಸೂರು ಸೂರ್ಯನಾರಾಯಣಭಟ್ಟ ಪುಟ್ಟಣ್ಣನವರು ೧೮೫೪ ನವೆಂಬರ್ ೨೧ರಂದು ಮೈಸೂರಿನಲ್ಲಿ ಜನಿಸಿದರು. ಹುಟ್ಟಿದ ಹತ್ತೇ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡರು. ಬೇಸರಗೊಂಡ ತಂದೆ ಕಾಶಿಗೆ ಹೋಗಿ ಸನ್ಯಾಸಿಯಾದರು. ಪುಟ್ಟಣ್ಣ ಸೋದರಮಾವನ ಆಶ್ರಯದಲ್ಲಿ ಬೆಳೆದರು.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ
ಖಾಸಗಿ ಮಠದಲ್ಲಿ ಮೊದಲ ಹಂತದ ಶಿಕ್ಷಣ ಮುಗಿಸಿದ ಪುಟ್ಟಣ್ಣ ರಾಜಾ ಕಾಲೇಜಿನಿಂದ (ಈಗಿನ ಮಹಾರಾಜಾ ಕಾಲೆಜು) ಎಫ್.ಎ. ತೇರ್ಗಡೆಯಾದರು. ೧೮೮೫ರಲ್ಲಿ ಮದ್ರಾಸ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದರು.
[ಬದಲಾಯಿಸಿ] ಉದ್ಯೋಗ
ಮೊದಲಿಗೆ ಕೋಲಾರದಲ್ಲಿ ಶಿಕ್ಷಕರಾಗಿದ್ದ ಪುಟ್ಟಣ್ಣ ೧೮೮೩ರಲ್ಲಿ “ಹಿತಬೋಧಿನಿ” ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಆರು ತಿಂಗಳುಗಳ ನಂತರ ಬೇರೆಯವರಿಗೆ ಪತ್ರಿಕೆ ವಹಿಸಿಕೊಟ್ಟು, ಬಿ.ಎ. ಅಭ್ಯಾಸ ಮಾಡಲು ಮದ್ರಾಸಿಗೆ (ಈಗಿನ ಚೆನ್ನೈ) ಹೋದರು. ೧೮೮೬ರಲ್ಲಿ ಮೈಸೂರಿನ ಚೀಫ್ ಕೋರ್ಟಿನಲ್ಲಿ ಭಾಷಾಂತರಕಾರರಾಗಿ ನೇಮಕಗೊಂಡರು ; ೧೮೯೭ರಲ್ಲಿ ಬಡ್ತಿಯ ಮೇಲೆ ಅಮಲ್ದಾರರಾದರು. ೧೯೦೮ರಲ್ಲಿ ನೌಕರಿಗೆ ರಾಜೀನಾಮೆ ಕೊಟ್ಟು ಸ್ವಲ್ಪ ಸಮಯ ವಕೀಲಿ ಮಾಡಿದರು. ಆ ಬಳಿಕ ಬರವಣಿಗೆಯ ಕಾರ್ಯದಲ್ಲಿಯೆ ಪೂರ್ಣವಾಗಿ ತೊಡಗಿಕೊಂಡರು.
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಥೆ/ಕಾದಂಬರಿ
- ಜಯಸಿಂಹರಾಜ ಚರಿತ್ರೆ (ಸಿಂಬಲೈನ್ ಕಥನರೂಪ) (೧೮೮೧)
- ನೀತಿ ಚಿಂತಾಮಣಿ (೧೮೮೪)
- ಸುಮತಿ ಮದನಕುಮಾರ ಚರಿತ್ರೆ (೧೮೮೭)
- ಮಾಡಿದ್ದುಣ್ಣೊ ಮಹಾರಾಯ (೧೯೧೫)
- ಪೇಟೆ ಮಾತೇನಜ್ಜಿ (೧೯೨೭)
- ಮುಸುಕು ತೆಗೆಯೆ ಮಾಯಾಂಗನೆ (೧೯೨೮)
- ಅವರಿಲ್ಲದೂಟ (೧೯೫೯)
[ಬದಲಾಯಿಸಿ] ಜೀವನ ಪರಿಚಯ
- ಕಾಂಪೂಷನ ಚರಿತ್ರೆ (೧೮೯೨)
- ಕುಣಿಗಲ್ ರಾಮಶಾಸ್ತ್ರಿಗಳ ಚರಿತ್ರೆ (೧೯೧೦)
- ಸರ್ ಸಾಲಾರ್ ಜಂಗನ ಚರಿತ್ರೆ
- ಮಹಮೂದ್ ಗವಾನನ ಚರಿತ್ರೆ (೧೯೨೮)
[ಬದಲಾಯಿಸಿ] ಇತರ
- ಹಿಂದೂ ಚರಿತ್ರೆ ದರ್ಪಣ ಭಾಗ-೧ (೧೮೮೨)
- ಕನ್ನಡ ಒಂದನೆಯ ಪುಸ್ತಕವು (೧೮೯೫)
- ಕನ್ನಡ ಲೇಖನ ಲಕ್ಷಣ (೧೯೧೫)
- ಪಾಳೆಯಗಾರರು (೧೯೨೩)
- ಚಿತ್ರದುರ್ಗದ ಪಾಳೆಯಗಾರರು (೧೯೨೪)
- ಇಕ್ಕೆರಿ ಸಂಸ್ಥಾನದ ಚರಿತ್ರೆ (೧೯೩೧)
[ಬದಲಾಯಿಸಿ] ಅನುವಾದ
- ಹೇಮಚಂದ್ರರಾಜ ವಿಲಾಸ (ಮೂಲ: ಶೇಕ್ಸ್ಪಿಯರನ ‘ಕಿಂಗ್ ಲಿಯರ್) (೧೮೯೯)
- ಹೇಮಲತ (ಮೂಲ: ಶೇಕ್ಸ್ಪಿಯರನ ‘ಹ್ಯಾಮ್ಲೆಟ್’)