ಅಂಬರೀಶ್
From Wikipedia
ಅಂಬರೀಶ್ -(ನವೆಂಬರ್ ೩೦ ,೧೯೫೧) [1]- ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟರೊಲ್ಲಬ್ಬರು. ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಇವರು, ಕನ್ನಡ ಚಲನಚಿತ್ರ ರಂಗಕ್ಕೆ ೧೯೭೩ರಲ್ಲಿ, ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಚಿತ್ರದ (ಜಲೀಲನ ಪಾತ್ರ) ಮೂಲಕ ಪಾದಾರ್ಪಣೆ ಮಾಡಿದರು.
ಜೋಸೈಮನ್ ನಿರ್ದೇಶನದಲ್ಲಿ, ೧೯೮೯ರಲ್ಲಿ ಬಿಡುಗಡೆಯಾದ ಹಾಂಕಾಂಗ್‍ನಲ್ಲಿ ಏಜೆಂಟ್ ಅಮರ್ ಇವರ ನೂರನೇ ಚಿತ್ರ. ಇವರು ಇಲ್ಲಿಯವರೆಗೆ ಸುಮಾರು ನೂರೈವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.
ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಇವರನ್ನು ಜನ "ದಾನಶೂರ ಕರ್ಣ" ಎಂದು ಕರೆಯುತ್ತಾರೆ. ಕರ್ನಾಟಕದ ಪ್ರಖ್ಯಾತ ಪಿಟೀಲುವಾದಕರಾದ ಟಿ. ಚೌಡಯ್ಯನವರ ಮೊಮ್ಮಗನಾದ ಅಂಬರೀಶ್, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಪ್ರಸಕ್ತ ಸಂಸತ್ ಸದಸ್ಯರಾಗಿದ್ದಾರೆ. ಅಂಬರೀಶ್ ಅವರ ಪತ್ನಿ ಕನ್ನಡ ಚಿತ್ರನಟಿ ಸುಮಲತಾ. ಪುತ್ರನ ಹೆಸರು ಅಭಿಷೇಕ್ ಗೌಡ.
[ಬದಲಾಯಿಸಿ] ಕನ್ನಡ ಚಲನಚಿತ್ರ ನಾಯಕರು
ಸುಬ್ಬಯ್ಯ ನಾಯ್ಡು | ಉದಯಕುಮಾರ್ | ಕಲ್ಯಾಣಕುಮಾರ್ | ಡಾ. ರಾಜ್‌ಕುಮಾರ್ | ಗಂಗಾಧರ್ | ಡಾ. ವಿಷ್ಣುವರ್ಧನ್ | ರಾಜೇಶ್ | ಅಶೋಕ್ | ಅಂಬರೀಶ್ | ಶ್ರೀನಾಥ್ | ಪ್ರಭಾಕರ್ | ಅನಂತ ನಾಗ್ | ಶಂಕರ್ ನಾಗ್ | ಲೋಕೇಶ್ | ಮಾನು | ಕಾಶೀನಾಥ್ | ಮುರಳಿ(ಪ್ರೇಮಪರ್ವ) | ಚರಣ್ ರಾಜ್ | ವಿನೋದ್ ರಾಜ್ | ಶ್ರೀಧರ್ | ರಾಮಕೃಷ್ಣ | ಅರ್ಜುನ್ ಸರ್ಜಾ |ದೇವರಾಜ್ | ಸಾಯಿಕುಮಾರ್ | ರಾಮ್‍ಕುಮಾರ್ | ಥ್ರಿಲ್ಲರ್ ಮಂಜು | ಎಸ್.ನಾರಾಯಣ್ | ಜಗ್ಗೇಶ್ | ಉಪೇಂದ್ರ | ರವಿಚಂದ್ರನ್ | ಸುನಿಲ್ |ರಮೇಶ್ | ಸುದೀಪ್ | ಶಿವರಾಜ್‍ಕುಮಾರ್ | ಪುನೀತ್ ರಾಜ್‍ಕುಮಾರ್ | ರಾಘವೇಂದ್ರ ರಾಜ್ ಕುಮಾರ್ | ಮುರಳಿ | ವಿಜಯ ರಾಘವೇಂದ್ರ | ದರ್ಶನ್ ತೂಗುದೀಪ್ | ಸುನಿಲ್ ರಾವ್ | ಧ್ಯಾನ್| ಪ್ರೇಂ |ರಜನೀಕಾಂತ್