Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಅಫ್ಘಾನಿಸ್ತಾನ - Wikipedia

ಅಫ್ಘಾನಿಸ್ತಾನ

From Wikipedia

د افغانستان اسلامي جمهوریت
ದಾ ಅಫ್ಘಾನಿಸ್ತಾನ್ ಇಸ್ಲಾಮೀ ಜೊಮೊರಿಯತ್
جمهوری اسلامی افغانستان

ಜಮೋರಿಯೇ ಇಸ್ಲಾಮೀ-ಯೇ ಅಫ್ಘಾನಿಸ್ತಾನ್
ಅಫ್ಘಾನಿಸ್ತಾನ ಇಸ್ಲಾಮೀಯ ಗಣರಾಜ್ಯ
ಅಫ್ಘಾನಿಸ್ತಾನ ದೇಶದ ಧ್ವಜ ಅಫ್ಘಾನಿಸ್ತಾನ ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: ಸುರೋದಿ ಮಿಲ್ಲಿ

Location of ಅಫ್ಘಾನಿಸ್ತಾನ

ರಾಜಧಾನಿ ಕಾಬುಲ್
34°31′N 69°08′E
ಅತ್ಯಂತ ದೊಡ್ಡ ನಗರ ಕಾಬುಲ್
ಅಧಿಕೃತ ಭಾಷೆ(ಗಳು) ಪಷ್ಟೊ ಮತ್ತು ಪರ್ಷಿಯನ್ (ದರೀ)
ಸರಕಾರ ಇಸ್ಲಾಮೀಯ ಗಣರಾಜ್ಯ
 - ರಾಷ್ಟ್ರಪತಿ ಹಮೀದ್ ಕರ್ಜಾಯ್
 - ಉಪರಾಷ್ಟ್ರಪತಿ ಅಹ್ಮದ್ ಜಿಯಾ ಮಸೂದ್
 - ಉಪ್ರಾಷ್ಟ್ರಪತಿ ಕರೀಂ ಖಲೀಲಿ
Independence ಬ್ರಿಟನ್ನಿನಿಂದ 
 - ಘೋಷಿತ ಆಗಸ್ಟ್ ೮, ೧೯೧೯ 
 - ಪರಿಗಣಿತ ಆಗಸ್ಟ್ ೧೯, ೧೯೧೯ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ ೬,೫೨,೦೯೦ ಚದುರ ಕಿಮಿ ;  (೪೧ನೇ)
  ೨,೫೧,೭೭೨ ಚದುರ ಮೈಲಿ 
 - ನೀರು (%) N/A
ಜನಸಂಖ್ಯೆ  
 - ೨೦೦೫ರ ಅಂದಾಜು ೨,೯೮,೬೩,೦೦೦ (೩೮ನೇ)
 - ೧೯೭೯ರ ಜನಗಣತಿ ೧,೩೦,೫೧,೩೫೮
 - ಸಾಂದ್ರತೆ ೪೬ /ಚದುರ ಕಿಮಿ ;  (೧೫೦ನೇ)
೧೧೯ /ಚದುರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು $31.9 billion (91st)
 - ತಲಾ $1,310 (162nd)
ಮಾನವ ಅಭಿವೃದ್ಧಿ ಸೂಚಿಕ (2003) NA (unranked) – NA
ಕರೆನ್ಸಿ ಅಫ್ಘನಿ (Af) (AFN)
ಕಾಲಮಾನ (UTC+4:30)
 - Summer (DST) (UTC+4:30)
Internet TLD .af
ದೂರವಾಣಿ ಕೋಡ್ +93

ಅಫ್ಘಾನಿಸ್ತಾನ ಏಷ್ಯಾ ಮತ್ತು ಮಧ್ಯ ಪ್ರಾಚ್ಯದ ನಡುವೆಯಿದ್ದು ಮಧ್ಯ ಏಷ್ಯಾದ ಭಾಗವಾಗಿ ಪರಿಗಣಿಸಲಾಗುತ್ತದೆ. ಇದರ ಗಡಿಗಳಲ್ಲಿ ಮುಖ್ಯವಾಗಿ ದಕ್ಷಿಣ ಮತ್ತು ಪೂರ್ವದಲ್ಲಿ ಪಾಕಿಸ್ತಾನವಿದೆ. ವಿವಾದಿತ ಕಾಶ್ಮೀರಕ್ಕೂ ಹಬ್ಬಿರುವ ಗಡಿ ಪಶ್ಚಿಮದಲ್ಲಿ ಇರಾನ್, ಉತ್ತರದಲ್ಲಿ ತುರ್ಕ್‌ಮೆನಿಸ್ತಾನ, ಉಜ್ಬೇಕಿಸ್ತಾನ, ಮತ್ತು ತಾಜಿಕಿಸ್ತಾನ, ಹಾಗೂ ಪೂರ್ವದಲ್ಲಿ ಚೀನಿ ಜನರ ಗಣರಾಜ್ಯಗಳಿವೆ.

ಅಫ್ಘಾನಿಸ್ತಾನ ವಿವಿಧ ಜನಾಂಗಗಳ ಹಾಗೂ ಸಂಸ್ಕೃತಿಗಳ ಮೇಳ. ಪ್ರಾಚೀನಕಾಲದಿಂದ ವ್ಯಾಪಾರ ಕೇಂದ್ರವಾಗಿ ಹಾಗೂ ಬಹಳಷ್ಟು ಆಕ್ರಮಣಗಳನ್ನು ಕಂಡಿದೆ. ಇವುಗಳಲ್ಲಿ ಇಂಡೊ-ಇರಾನಿಯನ್ನರು, ಗ್ರೀಕರು, ಅರಬರು, ತುರ್ಕರು, ಹಾಗೂ ಮಂಗೋಲರು ಸೇರಿದ್ದಾರೆ. ಅಫ್ಘಾನಿಸ್ತಾನವನ್ನು ೧೭೪೭ರಲ್ಲಿ ಒಂದು ದೊಡ್ಡ ಸಾಮ್ರಾಜ್ಯವಾಗಿ ಸ್ಥಾಪಿಸಲಾಯಿತು. ವಿಶ್ವ ಸಮುದಾಯವು ೧೯೧೯ರಲ್ಲಿ ಆಂಗ್ಲ-ಅಫ್ಘನ್ ಯುದ್ಧಗಳ ನಂತರ ಇದನ್ನು ಸ್ವತಂತ್ರ ರಾಷ್ಟ್ರವಾಗಿ ಪರಿಗಣಿಸಿತು. ೧೯೭೯ರ ಸೋವಿಯತ್ ಆಕ್ರಮಣದಿಂದ ಪ್ರಾರಂಭವಾಗಿ ೨೦೦೧ರ ಅಮೆರಿಕ ನೇತೃತ್ವ ಸೇನೆಯಿಂದ ತಾಲಿಬಾನ್ ನ ಪತನದ ತನಕ ಈ ದೇಶವು ಕಲಹಗಳನ್ನು ಕಾಣುತ್ತಲೇ ಇದ್ದು, ಇಂದೂ ಮುಂದುವರೆದಿದೆ.

[ಬದಲಾಯಿಸಿ] ಹೆಸರು

ಅಫ್ಘಾನಿಸ್ತಾನದ ಅರ್ಥ ಅಫ್ಘನ್ನರ ನಾಡು ಎಂದರ್ಥ. ಪಷ್ತೂನರು ಈ ಹೆಸರನಿಂದ ತಮ್ಮನ್ನು ಕರೆದುಕೊಂಡರು. ಅಫ್ಘನ್ ಎಂಬ ಪದ "ಹುದೂದ್ ಅಲ್ ಆಲಂ" ಕೃತಿಯಲ್ಲಿ ಕ್ರಿ.ಶ. ೯೮೨ ರಲ್ಲಿ ಕಾಣಬರುತ್ತದೆ. ಪರ್ಷಿಯನ್ ಭಾಷೆಯಲ್ಲಿ "ಸ್ತಾನ" ಎಂದರೆ "ದೇಶ" ಅಥವಾ "ನಾಡು" ಎಂದರ್ಥ. ಬ್ರಿಟಿಷರ ಪ್ರಕಾರ ಇರಾನ್ ಮತ್ತು ಭಾರತದ ನಡುವೆ ಚಾಚಿದ್ದ ಪ್ರದೇಶ ಅಫ್ಘನ್ನರ ನಾಡು.

[ಬದಲಾಯಿಸಿ] ಇತಿಹಾಸ

ಪ್ರಪಂಚದ ಅತಿ ದೊಡ್ಡ ಬುದ್ಧ ವಿಗ್ರಹಗಳು ಬಾಮಿಯಾನ್ ಪ್ರದೇಶದಲ್ಲಿ
Enlarge
ಪ್ರಪಂಚದ ಅತಿ ದೊಡ್ಡ ಬುದ್ಧ ವಿಗ್ರಹಗಳು ಬಾಮಿಯಾನ್ ಪ್ರದೇಶದಲ್ಲಿ

ಪುರಾತತ್ವ ಸಾಕ್ಷಿಗಳ ಪ್ರಕಾರ ಅಫ್ಘಾನಿಸ್ತಾನ ಪ್ರದೇಶದಲ್ಲಿ ಪೂರ್ವ ಮನುಜರು ೫೦,೦೦೦ ವರ್ಷಗಳಷ್ಟು ಹಿಂದೆ ಜೀವಿಸುತ್ತಿದ್ದರೆಂದು ತಿಳಿದು ಬಂದಿದೆ. ಅಫ್ಘಾನಿಸ್ತಾನ ಏಷ್ಯಾ ಮತ್ತು ಯೂರೋಪ್ ನಾಗರಿಕತೆಗಳ ಸಂಗಮ ಸ್ಥಳವಾಗಿತ್ತು. ಆರ್ಯನ್ನರ ನಾಡಾಗಿದ್ದ ಇದು ಪರ್ಷಿಯನ್ನರು, ಗ್ರೀಕರು, ಮೌರ್ಯರು, ಕುಶಾನರು, ಅರಬರು, ಮಂಗೋಲರು, ತುರ್ಕರು, ಬ್ರಿಟಿಷರು, ರಷ್ಯನ್ನರು, ಹಾಗೂ ಇತ್ತೀಚೆಗೆ ಅಮೆರಿಕನ್ನರ ದಾಳಿಗೆ ಒಳಗಾಗಿದೆ. ಕೆಲವು ಅಫ್ಘನ್ ದೊರೆಗಳು ನೆರೆ ಹೊರೆಯ ರಾಜ್ಯಗಳಿಗೆ ದಂಡೆತ್ತಿ ಹೋಗಿದ್ದಾರೆ.

ಕ್ರಿ.ಪೂ. ೨೦೦೦ದಿಂದ ೧೨೦೦ ತನಕ ಆರ್ಯನ್ನರು ಇಂದಿನ ಅಫ್ಘಾನಿಸ್ತಾನ, ಇರಾನ್, ತುರ್ಕ್‌ಮೇನಿಸ್ತಾನ, ಉಜ್ಬೇಕಿಸ್ತಾನ, ತಾಜಿಕಿಸ್ತಾನ, ಪಾಕಿಸ್ತಾನ ಇತರ ಹಲವೆಡೆಗಳಲ್ಲಿ "ಆರ್ಯಾನ" ಎಂಬ ರಾಜ್ಯವನ್ನು ಕಟ್ಟಿದರು. ಪಾರಸಿ ಮತವು ಅಫ್ಘಾನಿಸ್ತಾನದಲ್ಲಿ ಕ್ರಿ.ಪೂ. ೧೮೦೦ ರಿಂದ ೮೦೦ ರ ನಡುವೆ ಸ್ಥಾಪನೆಯಾಯಿತು ಎಂದು ನಂಬಲಾಗಿದೆ. ಕ್ರಿ.ಪೂ. ೬ನೇ ಶತಮಾನದ ಮಧ್ಯದಲ್ಲಿ ಪರ್ಷಿಯನ್ ದೊರೆಗಳು ಪರ್ಷಿಯಾವನ್ನು ಗ್ರೀಕ್ ಸಾಮ್ರಾಜ್ಯದ ಗಡಿಗೆ ಹೊಂದಿಸಿದರು. ಕ್ರಿ.ಪೂ. ೩೩೦ರಲ್ಲಿ ಅಲೆಕ್ಸಾಂಡರ್ ಅಫ್ಘಾನಿಸ್ತಾನ ಮತ್ತು ಸುತ್ತಲಿನ ಪ್ರದೇಶಗಳನ್ನು ಆಕ್ರಮಿಸಿ ಅವನ ನಂತರ ಮೌರ್ಯರು ಆಕ್ರಮಿಸಿ ಬೌದ್ಧ ಧರ್ಮವನ್ನು ಈ ಪ್ರದೇಶಕ್ಕೆ ಪರಿಚಯಿಸಿದರು. ಇವರ ನಂತರ ಕುಶಾನರು ರಾಜ್ಯ ವಿಸ್ತರಿಸಿ ಬೌದ್ಧ ಸಂಸ್ಕೃತಿಯನ್ನು ತಂದರು. ಕುಶಾನರನ್ನು ಸೋಲಿಸಿದ ಸಸ್ಸಾನಿಯರು ೭ನೇ ಶತಮಾನದ ತನಕ ಆಳಿ ಮುಸ್ಲಿಂ ಅರಬರಿಗೆ ಸೋತರು. ಅರಬರ ಆಳ್ವಿಕೆಯಲ್ಲಿ ಬಹುತೇಕ ಜನರನ್ನು ಇಸ್ಲಾಂ ಮತಕ್ಕೆ ಧರ್ಮಾಂತರಗೊಳಿಸಲಾಯಿತು. ಕ್ರಿ.ಶ. ೧೦-೧೨ನೇ ಶತಮಾನದ ಕಾಲದಲ್ಲಿ ತುರ್ಕ ರಾಜನಾದ ಮಹಮೂದ್ ಘಜ್ನವಿ ಘಜ್ನವಿ ಸಾಮ್ರಾಜ್ಯವನ್ನು ಸ್ಥಾಪಿಸಿದನು. ನಂತರ ೧೧-೧೨ನೇ ಶತಮಾನದಲ್ಲಿ ತಾಜಿಕ್ ದೊರೆಯಾದ ಮೊಹಮ್ಮದ್ ಘೋರಿ, ಘೋರಿ ಸಾಮ್ರಾಜ್ಯವನ್ನು ಸ್ಥಾಪಿಸಿ, ಭಾರತದಲ್ಲಿ ದೆಹಲಿ ಸುಲ್ತಾನಿಕೆಯನ್ನು ಸ್ಥಾಪಿಸಲು ಮುಂದಾದನು.

೧೨೧೯ರಲ್ಲಿ ಮಂಗೋಲ ರಾಜನಾದ ಜೆಂಘಿಸ್ ಖಾನ್ ದಂಡೆತ್ತಿ ಬಂದು ಈ ಪ್ರದೇಶವನ್ನು ಧ್ವಂಸಗೊಳಿಸಿದನು. ನಂತರ ಮಂಗೋಲರ ಆಳ್ವಿಕೆಯನ್ನು ತೈಮೂರನು ಕೇಂದ್ರ ಏಷ್ಯಾದಿಂದ ಮುಂದುವರೆಸಿದನು. ೧೫೦೪ರಲ್ಲಿ ಇವರಿಬ್ಬರ ಸಂತತಿಯಾದ ಬಾಬರ್, ಮುಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿ ಕಾಬುಲ್ ನಗರವನ್ನು ರಾಜಧಾನಿಯನ್ನಾಗಿ ಮಾಡಿದನು.

ಅಫ್ಘಾನಿಸ್ತಾನದ ಪ್ರಥಮ ದೊರೆ ಅಹ್ಮದ್ ಷಾ ದುರಾನಿ
Enlarge
ಅಫ್ಘಾನಿಸ್ತಾನದ ಪ್ರಥಮ ದೊರೆ ಅಹ್ಮದ್ ಷಾ ದುರಾನಿ

೧೭೩೮ರಲ್ಲಿ ಪರ್ಷಿಯಾದ ದೊರೆಯಾದ ನಾದಿರ್ ಷಾ ಕಂದಹಾರ್, ಕಾಬುಲ್, ಮತ್ತು ಲಾಹೋರ್ ನಗರಗಳನ್ನು ಆಕ್ರಮಿಸಿದನು. ಜೂನ್ ೧೯, ೧೭೪೭ರಂದು ನಾದಿರ್ ಷಾನನ್ನು ಕೊಲ್ಲಲಾಯಿತು. ಇದರ ನಂತರ ಅವನ ಪಷ್ಟೂನ್ ಸೇನಾಪತಿ ಅಹ್ಮದ್ ಷಾ ದುರಾನಿಯನ್ನು ರಾಜನನ್ನಾಗಿ ಆರಿಸಲಾಯಿತು. ೧೭೫೧ರ ಕಾಲದಲ್ಲಿ ಅಹ್ಮದ್ ಷಾ ಇಂದಿನ ಅಫ್ಘಾನಿಸ್ತಾನ, ಪಾಕಿಸ್ತಾನ, ಇರಾನ್ ದೇಶದ ಖೊರಾಸಾನ್ ಪ್ರದೇಶ, ಮತ್ತು ಭಾರತದಲ್ಲಿ ದೆಹಲಿಯನ್ನು ಆಕ್ರಮಿಸಿದ್ದನು.

೧೯ನೇ ಶತಮಾನದಲ್ಲಿ ಅಫ್ಘಾನಿಸ್ತಾನದ ಹಿಡಿತ ತೆಗೆದುಕೊಂಡ ಬ್ರಿಟಿಷರು ೧೯೧೯ರಲ್ಲಿ ಅಫ್ಘಾನಿಸ್ತಾನಕ್ಕೆ ಸ್ವಾತಂತ್ರ್ಯ ಕೊಡುವಾಗ ಅಫ್ಘಾನಿಸ್ತಾನವನ್ನು ಜನಾಂಗೀಯ ಆಧಾರದ ಮೇಲೆ ವಿಭಜಿಸಿ ಅಫ್ಘಾನಿಸ್ತಾನ ಮತ್ತು ಬ್ರಿಟಿಷ್ ಭಾರತ ಮತ್ತು ನಂತರ ಪಾಕಿಸ್ತಾನಗಳ ನಡುವೆ ವೈರಸ್ಯ ಬೆಳೆಯಲು ಕಾರಣರಾದರು.

Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com