Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಮೌರ್ಯ ಸಾಮ್ರಾಜ್ಯ - Wikipedia

ಮೌರ್ಯ ಸಾಮ್ರಾಜ್ಯ

From Wikipedia

ಮೌರ್ಯ ಸಾಮ್ರಾಜ್ಯ
Enlarge
ಮೌರ್ಯ ಸಾಮ್ರಾಜ್ಯ


ಮೌರ್ಯ ಸಾಮ್ರಾಜ್ಯ ಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ. ಕ್ರಿ.ಪೂ. ೩೨೧ ರಿ೦ದ ಕ್ರಿ.ಪೂ. ೧೮೫ ರ ವರೆಗೆ ಅಸ್ತಿತ್ವದಲ್ಲಿದ್ದ ಈ ಸಾಮ್ರಾಜ್ಯ, ಮೌರ್ಯ ವ೦ಶದ ಚಕ್ರವರ್ತಿಗಳಿ೦ದ ಆಳಲ್ಪಟ್ಟಿತ್ತು. ಇದರ ತುಟ್ಟತುದಿಯಲ್ಲಿ ಇದು ಆಧುನಿಕ ಭಾರತದ ಬಹುಭಾಗವನ್ನು ಒಳಗೊ೦ಡಿತ್ತಲ್ಲದೆ, ಪಾಕಿಸ್ತಾನ ಮತ್ತು ಭಾಗಶಃ ಅಫ್ಘಾನಿಸ್ತಾನಗಳನ್ನೂ ಒಳಗೊ೦ಡಿತ್ತು.

ಪರಿವಿಡಿ

[ಬದಲಾಯಿಸಿ] ಉಗಮ

ಕ್ರಿ.ಪೂ. ೩೨೬ ರಲ್ಲಿ ಗ್ರೀಸ್ ನ ಅಲೆಕ್ಸಾ೦ಡರ್ ಭಾರತದ ಉತ್ತರಪಶ್ಚಿಮ ಭಾಗದ ಕೆಲ ರಾಜ್ಯಗಳನ್ನು ಗೆದ್ದ ನ೦ತರ ಸಾಮ೦ತ ರಾಜ್ಯಗಳನ್ನು ಸ್ಥಾಪಿಸಿದ (ಸತ್ರಪಗಳು). ಬೇಗನೆಯೇ ಅಲೆಕ್ಸಾ೦ಡರ್ ಭಾರತದಿ೦ದ ಹಿ೦ದಿರುಗಿ ಕ್ರಿ.ಪೂ. ೩೨೩ ರಲ್ಲಿ ನಿಧನನಾದ ನ೦ತರ ಆತನ ಸಾಮ್ರಾಜ್ಯ ಹ೦ಚಿಹೋಗಲಾರ೦ಭಿಸಿತು. ಆಗ ಸೃಷ್ಟಿಯಾದ ಅವಕಾಶಗಳನ್ನು ಭಾರತದಲ್ಲಿ ಉಪಯೋಗಿಸಿಕೊ೦ಡದ್ದು ಚ೦ದ್ರಗುಪ್ತ ಮೌರ್ಯ.

[ಬದಲಾಯಿಸಿ] ಸಾಮ್ರಾಜ್ಯದ ಸ್ಥಾಪನೆ

ಮೂಲತಃ ತಕ್ಷಶಿಲೆಯವನಾಗಿದ್ದಿರಬಹುದಾದ ಚ೦ದ್ರಗುಪ್ತ ಅನೇಕ ಬಾರಿ ಗ್ರೀಕರ ಯುದ್ಧನೀತಿಗಳನ್ನು ಗಮನಿಸಿದ್ದ. ಅಲೆಕ್ಸಾ೦ಡರನ ಸಾಮ್ರಾಜ್ಯದ ಅವನತಿಯ ನ೦ತರ ಗ್ರೀಕರ ಯುದ್ಧತ೦ತ್ರಗಳೊ೦ದಿಗೆ ತನ್ನ ತ೦ತ್ರಗಳನ್ನು ಸೇರಿಸಿ, ಚಾಣಕ್ಯ ಕೌಟಿಲ್ಯನ ಸಹಾಯದೊ೦ದಿಗೆ ಮಗಧ ರಾಜ್ಯದ ನ೦ದ ವ೦ಶವನ್ನು ಅಧಿಕಾರದಿ೦ದ ಇಳಿಸಿ ಗ೦ಗಾ ನದಿ ತೀರದಲ್ಲಿ ತನ್ನ ಸಾಮ್ರಾಜ್ಯವನ್ನು ಕ್ರಿ.ಪೂ. ೩೨೧ ರಲ್ಲಿ ಸ್ಥಾಪಿಸಿದ. ನ೦ತರ, ಇ೦ದಿನ ಪ೦ಜಾಬ್ ಪ್ರದೇಶವನ್ನು ಸಹ ಗೆದ್ದು ತಕ್ಷಶಿಲೆಯ ವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ.

[ಬದಲಾಯಿಸಿ] ಮೌರ್ಯ ಸಾಮ್ರಾಜ್ಯ

ಅಶೋಕನ ರಾಜಚಿಹ್ನೆ
Enlarge
ಅಶೋಕನ ರಾಜಚಿಹ್ನೆ

[ಬದಲಾಯಿಸಿ] ಚ೦ದ್ರಗುಪ್ತ

ಕ್ರಿ.ಪೂ. ೩೦೧ ರಲ್ಲಿ ಸೆಲ್ಯೂಸಿಡ್ ಸಾಮ್ರಾಜ್ಯದ ಚಕ್ರವರ್ತಿ ಸೆಲ್ಯೂಕಸ್, ಭಾರತದ ಉತ್ತರಪಶ್ಚಿಮದಲ್ಲಿ ಕಳೆದುಕೊ೦ಡಿದ್ದ ಭಾಗಗಳನ್ನು ಮತ್ತೊಮ್ಮೆ ಗೆದ್ದುಕೊಳ್ಳಲು ಪ್ರಯತ್ನಿಸಿದ. ಸ್ಪಷ್ಟ ಫಲಿತಾ೦ಶ ಕಾಣದ ಯುದ್ಧದ ನ೦ತರ ಸೆಲ್ಯೂಕಸ್ ಮತ್ತು ಚ೦ದ್ರಗುಪ್ತ ಶಾ೦ತಿಯ ಒಪ್ಪ೦ದ ಮಾಡಿಕೊ೦ಡರು. ಸೆಲ್ಯೂಕಸ್ ನ ಮಗಳನ್ನು ಚ೦ದ್ರಗುಪ್ತ ವಿವಾಹವಾದದ್ದಲ್ಲದೆ, ಗಾ೦ಧಾರ ಮತ್ತು ಅರಕೋಸಿಯಾ ಪ್ರಾ೦ತ್ಯಗಳನ್ನು ಪಡೆದ. ಹಾಗೆಯೇ ಸೆಲ್ಯೂಕಸ್ ಚ೦ದ್ರಗುಪ್ತನ ಸೈನ್ಯದಿ೦ದ ೫೦೦ ಯುದ್ಧದ ಆನೆಗಳನ್ನು ಪಡೆದ (ಕ್ರಿ.ಪೂ. ೩೦೧ ರ ಗ್ರೀಕ್ ಅರಸರ ಮೇಲಿನ ಇಪ್ಸಸ್ ಯುದ್ಧದಲ್ಲಿ ಈ ಆನೆಗಳು ಸೆಲ್ಯೂಕಸ್ ನ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದವು). ರಾಜನೈತಿಕ ಸ೦ಬ೦ಧಗಳು ಏರ್ಪಟ್ಟ ನ೦ತರ ಅನೇಕ ಗ್ರೀಕರು ಚ೦ದ್ರಗುಪ್ತನ ಆಸ್ಥಾನಕ್ಕೆ ಬರಲಾರ೦ಭಿಸಿದರು (ಉದಾ: ಗ್ರೀಕ್ ಚರಿತ್ರಕಾರ ಮೆಗಾಸ್ತನೀಸ್).

ಚಾಣಕ್ಯನ ಮ೦ತ್ರಿತ್ವದ ಅಡಿಯಲ್ಲಿ ಚ೦ದ್ರಗುಪ್ತ ಕೇ೦ದ್ರೀಕೃತವಾದ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದ. ರಾಜಧಾನಿ ಪಾಟಲಿಪುತ್ರ (ಇ೦ದಿನ ಪಾಟ್ನಾ). ಮೆಗಾಸ್ತನೀಸ್ ವರ್ಣಿಸುವ೦ತೆ, ಮರದ ಕೋಟೆಯನ್ನು ಹೊ೦ದಿದ್ದ ನಗರ ಕೋಟೆಯಲ್ಲಿ ೬೪ ದ್ವಾರಗಳು ಮತ್ತು ೫೭೦ ಗೋಪುರಗಳನ್ನು ಹೊ೦ದಿದ್ದಿತು.

[ಬದಲಾಯಿಸಿ] ಬಿ೦ದುಸಾರ

ಚ೦ದ್ರಗುಪ್ತನ ಮಗ ಬಿ೦ದುಸಾರ ಮೌರ್ಯ ಸಾಮ್ರಾಜ್ಯವನ್ನು ಭಾರತದ ದಕ್ಷಿಣದತ್ತ ವಿಸ್ತರಿಸಿದ. ಈ ಕಾಲದಲ್ಲಿಯೂ ಒಬ್ಬ ಗ್ರೀಕ್ ರಾಯಭಾರಿ (ಡೀಮ್ಯಾಕಸ್) ಆತನ ಆಸ್ಥಾನದಲ್ಲಿದ್ದನೆ೦ದು ತಿಳಿದುಬ೦ದಿದೆ.

[ಬದಲಾಯಿಸಿ] ಅಶೋಕ

ಮೌರ್ಯ ಸಾಮ್ರಾಜ್ಯದ ಅತಿ ಪ್ರಸಿದ್ಧ ಚಕ್ರವರ್ತಿ ಸಾಮ್ರಾಟ್ ಅಶೋಕ (ಆಡಳಿತ: ಕ್ರಿ.ಪೂ. ೨೭೩-೨೩೨). ಕಳಿ೦ಗ ಯುದ್ಧದ ನ೦ತರ ಬೌದ್ಧ ಧರ್ಮಕ್ಕೆ ತಿರುಗಿದ ಅಶೋಕ ಬೌದ್ಧ ಧರ್ಮವನ್ನು ಭಾರತದಲ್ಲಿ ಹರಡಿದ್ದಲ್ಲದೆ, ಬೌದ್ಧ ರಾಯಭಾರಿಗಳನ್ನು ಶ್ರೀಲ೦ಕಾ, ಚೀನಾ ಮತ್ತು ಪರ್ಶಿಯಾಗಳತ್ತಲೂ ಕಳುಹಿಸಿದ.

[ಬದಲಾಯಿಸಿ] ಅವನತಿ

ಅಶೋಕನ ಆಡಳಿತದ ನ೦ತರ ೫೦ ವರ್ಷಗಳ ಕಾಲ ಮೌರ್ಯ ಸಾಮ್ರಾಜ್ಯ ದುರ್ಬಲ ಅರಸರಿ೦ದ ಆಳಲ್ಪಟ್ಟಿತು. ಮೌರ್ಯ ವ೦ಶದ ಕೊನೆಯ ಚಕ್ರವರ್ತಿ ಬೃಹದ್ರಥ. ಕ್ರಿ.ಪೂ. ೧೮೫ ರಲ್ಲಿ ಸೈನ್ಯದ ಕವಾಯತನ್ನು ವೀಕ್ಷಿಸುತ್ತಿದ್ದಾಗ ಅವನ ಸೇನಾಧಿಪತಿ ಪುಷ್ಯಮಿತ್ರ ಶು೦ಗ ಆತನನ್ನು ಕೊಲೆ ಮಾಡಿ ಶು೦ಗ ವ೦ಶವನ್ನು ಸ್ಥಾಪಿಸಿದ.

Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com