Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಕಾಫಿ - Wikipedia

ಕಾಫಿ

From Wikipedia

ಒಂದು ಕಪ್ ಕಾಫಿ
Enlarge
ಒಂದು ಕಪ್ ಕಾಫಿ

ಕಾಫಿ ಅದೇ ಹೆಸರಿನ ಗಿಡದ ಬೀಜಗಳನ್ನು ಹುರಿದು ತಯಾರಿಸುವ ಒಂದು ಪೇಯ. ಇದನ್ನು ಸಾಮಾನ್ಯವಾಗಿ ಬಿಸಿಯಾಗಿ - ಅಪರೂಪವಾಗಿ ತಣ್ಣಗೆ ಸಹ - ಕುಡಿಯಲಾಗುತ್ತದೆ. ನೀರು ಮತ್ತು ಚಹಾ ದೊಂದಿಗೆ, ಇದು ಪ್ರಪಂಚದ ಅತ್ಯಂತ ಜನಪ್ರಿಯ ಪೇಯಗಳಲ್ಲೊಂದಾಗಿದೆ. 2003 ರಲ್ಲಿ, ಕಾಫಿ ಪ್ರಪಂಚದಲ್ಲಿ ಆರನೆ ಅತಿ ಹೆಚ್ಚು ರಫ್ತು ಮಾಡಲಾಗುವ ವಸ್ತುವಾಗಿತ್ತು (ಮೊದಲ ಐದು ಗೋಧಿ, ರಾಗಿ, ಸೋಯಾ, ತಾಳೆ ಎಣ್ಣೆ ಮತ್ತು ಸಕ್ಕರೆ).

ಪರಿವಿಡಿ

[ಬದಲಾಯಿಸಿ] ಚರಿತ್ರೆ

ಕಾಫಿಯ ಚರಿತ್ರೆ 9 ನೇ ಶತಮಾನದಲ್ಲಿ ಆರಂಭವಾಗುತ್ತದೆ. ಇತಿಯೋಪಿಯದಲ್ಲಿ ಮೊದಲು ಬಳಕೆಗೆ ಬಂದ ಕಾಫಿ, ಈಜಿಪ್ಟ್ ಮತ್ತು ಯುರೋಪ್ ಗಳ ಮುಖಾಂತರ ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ಹಬ್ಬಿತು. "ಕಾಫಿ" ಎಂಬ ಪದ ಇತಿಯೋಪಿಯದ "ಕಾಫ" ಎಂಬ ಪ್ರದೇಶದ ಹೆಸರಿನಿಂದ ಉತ್ಪನ್ನವಾದದ್ದು ಎಂದು ನಂಬಲಾಗಿದೆ. ಕಾಫಿ 15 ನೇ ಶತಮಾನದಲ್ಲಿ ಪರ್ಷಿಯಾ, ಈಜಿಪ್ಟ್, ಉತ್ತರ ಆಫ್ರಿಕ ಮತ್ತು ತಾರ್ಕಿ ಗಳನ್ನು ತಲುಪಿತು. 1475 ರಲ್ಲಿ ಈಸ್ತಾನ್ ಬುಲ್ ನಗರದಲ್ಲಿ ಮೊದಲ "ಕಾಫಿ ಹೋಟಲು" ಆರಂಭವಾಯಿತು.

ಕಾಫೀಯ ಉತ್ತೇಜನಕಾರಿ ಗುಣವನ್ನು ಗಮನಿಸಿ 1511 ರಲ್ಲಿ ಮೆಕ್ಕಾ ದಲ್ಲಿ ಇದರ ಉಪಯೋಗವನ್ನು ನಿಷೇಧಿಸಲಾಯಿತು. 1532 ರಲ್ಲಿ ಕೈರೋ ನಗರದಿಂದಲೂ ಕಾಫಿ ನಿಷೇಧಿತವಾಯಿತು. ಆದರೆ ಕಾಫಿಯ ಜನಪ್ರಿಯತೆಯ ಕಾರಣದಿಂದಾಗಿ ಕೆಲ ವರ್ಷಗಳ ನಂತರ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು.

17 ನೇ ಶತಮಾದ ವೇಳೆಗೆ ಯೂರೋಪಿನಲ್ಲಿ ಜನಪ್ರಿಯವಾದ ಕಾಫಿಯನ್ನು ಮೊದಲ ಬಾರಿಗೆ ಡಚ್ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾರಂಭಿಸಿದರು. ಇಂಗ್ಲೆಂಡಿನ ಕಾಫಿ ಮನೆಗಳು ಜನಪ್ರಿಯ ವ್ಯಾಪಾರ ಕೇಂದ್ರಗಳೂ ಆದವು.

[ಬದಲಾಯಿಸಿ] ಕಾಫಿಯ ಪ್ರಭೇದಗಳು

ಕಾಫೀಯ ಅರಾಬಿಕ
Enlarge
ಕಾಫೀಯ ಅರಾಬಿಕ

ಕಾಫಿ ಗಿಡಗಳಲ್ಲಿ ಎರಡು ಮುಖ್ಯ ಪ್ರಭೇದಗಳಿವೆ: ಕಾಫೀಯ ಅರಾಬಿಕ ಮತ್ತು ಕಾಫೀಯ ರೋಬಸ್ಟ. ಅರಾಬಿಕ ತಳಿ ಇತಿಯೋಪಿಯದಲ್ಲಿ ಉಗಮಗೊಂಡಿದ್ದಾರೆ, ರೋಬಸ್ಟ ತಳಿ ಇಂದಿನ ಉಗಾಂಡ ದೇಶದಲ್ಲಿ ಉಗಮಗೊಂಡದ್ದು.

ರೋಬಸ್ಟ ತಳಿಯ ಕಾಫಿ ಬೀಜಗಳು ಹೆಚ್ಚು ಕೆಫೀನ್ ಅಂಶವನ್ನು ಹೊಂದಿದ್ದು ಇನ್ನೂ ಹೆಚ್ಚು ಕಹಿಯಾಗಿರುತ್ತವೆ. ಆದರೆ ಇವುಗಳನ್ನು ಹುರಿದಾಗ ಬರುವ ಸ್ವಲ್ಪ ಸುತ್ತ ವಾಸನೆಯಿಂದಾಗಿ ಅರಾಬಿಕ ತಳಿಯ ಕಾಫಿ ಹೆಚ್ಚು ಜನಪ್ರಿಯವಾಗಿದೆ.

[ಬದಲಾಯಿಸಿ] ಸಂಸ್ಕರಣೆ ಮತ್ತು ಸಿದ್ಧತೆ

ಕಾಫಿ ಗಿಡದ ಬೀಜಗಳಿಂದ ಕಾಫಿಯನ್ನು ತಯಾರಿಸುವ ಮೊದಲು ಬೀಜಗಳನ್ನು ಸಾಕಷ್ಟು ಸಂಸ್ಕರಿಸಬೇಕಾಗುತ್ತದೆ. ಕಾಫಿ ಹಣ್ಣುಗಳನ್ನು ಕೀಳುವುದು, ಬೀಜಗಳ ಬೇರ್ಪಡಿಸುವಿಕೆ, ಮತ್ತು ಒಣಗಿಸುವಿಕೆ ಈ ಸಂಸ್ಕರಣದ ಮೊದಲ ಹಂತಗಳು.

ಹುರಿದ ಕಾಫಿ ಬೀಜಗಳು
Enlarge
ಹುರಿದ ಕಾಫಿ ಬೀಜಗಳು

ಇದರ ನಂತರ ಕಾಫಿ ಬೀಜಗಳನ್ನು ಹುರಿಯಲಾಗುತ್ತದೆ. ಕಾಫಿ ಬೀಜಗಳನ್ನು ಹುರಿಯುವುದಕ್ಕೆ ವಿವಿಧ ವಿಧಾನಗಳಿದ್ದು, ಹುರಿಯುವ ವಿಧಾನ ನಂತರ ತಯಾರಿಸಲಾಗುವ ಕಾಫಿಯ ರುಚಿಯ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಹುರಿಯುವಿಕೆಯಿಂದ ಬೀಜದಲ್ಲಿನ ಕೊಬ್ಬಿನ ಅಂಶ ಕರಗಿ, ಸುಗಂಧಿತ ಎಣ್ಣೆಗಳ ಉತ್ಪತ್ತಿ ನಡೆಯುತ್ತದೆ. ಹಾಗೆಯೇ ಕಾಫಿಗೆ ವಿಶಿಷ್ಟವಾದ ಕೆಲವು ಆಮ್ಲಗಳು ಹುಟ್ಟಿ, ಕಾಫೀಯ ವಿಶಿಷ್ಟ ರುಚಿ ಹಾಗೂ ವಾಸನೆ ಜನಿಸುತ್ತದೆ.

ಹುರಿದ ಕಾಫಿ ಬೀಜಗಳನ್ನು ಪುಡಿ ಮಾಡುವ ಮೂಲಕ "ಕಾಫೀಪುಡಿ"ಯನ್ನು ತಯಾರಿಸಲಾಗುತ್ತದೆ. ಪುಡಿ ಮಾಡುವ ವಿಧಾನ ನಂತರ ಕಾಫಿ ಪೇಯದ ತಯಾರಿಕೆಯ ಮೇಲೆ ಪರಿಣಾಮ ಬೀರುತ್ತದೆ. ಸ್ವಲ್ಪ ಒರಟಾಗಿ ಪುಡಿ ಮಾಡಿದ ಕಾಫಿ ಬೀಜಗಳು ಫಿಲ್ಟರ್ ಕಾಫಿ ಯ ತಯಾರಿಕೆಗೆ ಒಗ್ಗುತ್ತವೆ. "ಕ್ಷಣಸಿದ್ಧ" ಕಾಫಿ ಪುಡಿಗೆ ಇನ್ನೂ ಸೂಕ್ಷ್ಮವಾಗಿ ಪುಡಿ ಮಾಡಲಾಗುತ್ತದೆ.

[ಬದಲಾಯಿಸಿ] ಆರೋಗ್ಯದ ಮೇಲೆ ಪರಿಣಾಮಗಳು

ಕಾಫಿ ಕುಡಿಯುವಿಕೆಯಿಂದ ಮಾನವರ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಆಗುತ್ತವೆ ಎಂಬುದರ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ಮುಖ್ಯವಾಗಿ, ಸಿಹಿಮೂತ್ರ ರೋಗ, ಹೃದಯದ ತೊಂದರೆಗಳು, ಕ್ಯಾನ್ಸರ್ ಮೊದಲಾದವುಗಳಿಗೆ ಕಾಫಿ ಪಾನದ ಜೊತೆಗೆ ಸಂಬಂಧಗಳಿವೆಯೇ ಎಂಬುದರ ಬಗ್ಗೆ ಅಧ್ಯಯನಗಳು ನಡೆದಿವೆ. ಆದರೆ ವಿವಿಧ ಅಧ್ಯಯನಗಳ ಫಲಿತಾಂಶಗಳು ತದ್ವಿರುದ್ಧವಾಗಿ ಬಂದು ಸ್ಪಷ್ಟ ವೈದ್ಯಕೀಯ ತೀರ್ಮಾನಗಳು ಇಲ್ಲಿಯವರೆಗೂ ಹೊರಹೊಮ್ಮಿಲ್ಲ.

[ಬದಲಾಯಿಸಿ] ಸಾಮಾಜಿಕ ಸ್ಥಾನ

ಅನೇಕ ಸಂಸ್ಕೃತಿಗಳಲ್ಲಿ ಕಾಫಿಗೆ ಪ್ರಮುಖವಾದ ಸಾಮಾಜಿಕ ಪ್ರಾಮುಖ್ಯತೆ ಉಂಟು. ದಕ್ಷಿಣ ಭಾರತದಲ್ಲಿ ಮನೆಗೆ ಬಂದವರಿಗೆ ಕಾಫಿ ಕೊಡುವುದು ಸರ್ವೇ ಸಾಮಾನ್ಯ. ಕಾಫಿಯ ಚರಿತ್ರೆಯ ಕೆಲ ಘಟ್ಟಗಳಲ್ಲಿ ಅದನ್ನು ಸಾಮಾಜಿಕವಾಗಿ ನಿಷೇಧಿಸಿದ್ದೂ ಉಂಟು. ೧೬ನೆ ಶತಮಾನದಲ್ಲಿ ಮೆಕ್ಕಾ ಮೊದಲಾದ ಕಡೆಗಳಲ್ಲಿ ಇದನ್ನು "ಉತ್ತೇಜನಕಾರಿ" ವಸ್ತು ಎಂದು ನಿಷೇಧಿಸಿದ್ದರೆ, ೧೭ ನೆ ಶತಮಾನದ ಇಂಗ್ಲೆಂಡಿನಲ್ಲಿ ಇದನ್ನು "ರಾಜಕೀಯವಾಗಿ ವಿದ್ರೋಹಕಾರಿ" ಜನರು ಉಪಯೋಗಿಸುವ ಪೇಯ ಎಂದು ನಿಷೇಧಿಸಲಾಗಿತ್ತು.

Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com