ನಕ್ಷತ್ರ
From Wikipedia
ಶುಭ್ರವಾದ ರಾತ್ರಿಯಲ್ಲಿ ಆಕಾಶದ ಕಡೆ ಕಣ್ಣು ಹಾಯಿಸಿದರೆ ಅಸಂಖ್ಯಾತ ಸಣ್ಣ ಸಣ್ಣ್ಣ ಪುಟ್ಟ ಪುಟ್ಟ ಮಿನುಗುವ ಸಾವಿರಾರು ತಾರೆಗಳು ಅಂದರೆ ನಕ್ಷತ್ರಗಳು ಕಣ್ಣಿಗೆ ಬೀಳುತ್ತವೆ. ವೈಜ್ಞಾನಿಕ ಭಾಷೆಯಲ್ಲಿ ಹೇಳುವುದಾದರೆ ನಕ್ಷತ್ರವೆಂದರೆ ಅಂತರಿಕ್ಷದಲ್ಲಿ ನೆಲೆಸುವ ಸೂರ್ಯನಂತಹ ಅನಿಲದಿಂದ ಕೂಡಿದ ಸದೃಡ ಕಾಯಕ. ನಮಗೆ ದಿನ ನಿತ್ಯ ಬೆಳಕು,ಶಾಖ ನೀಡುವ ಸೂರ್ಯ ಕೂಡಾ ಒಂದು ಮಧ್ಯಮ ಗಾತ್ರದ ನಕ್ಷತ್ರ. ಭೂಮಿಯಷ್ಟು ಗಾತ್ರದ ಸಣ್ಣ ನಕ್ಷತ್ರದಿಂದ ಹಿಡಿದು,ಭೂಮಿ ಸೂರ್ಯರ ನಡುವಿನ ದೂರದ ೨೫ ಪಟ್ಟು ವ್ಯಾಸವುಳ್ಳ ದೈತ್ಯ ನಕ್ಷತ್ರಗಳಿವೆ. ನಕ್ಷತ್ರಗಳು ಭೂಮಿಯಿಂದ ಬಹಳ ದೂರದಲ್ಲಿವೆ.
ಖಗೋಳ ವಿಜ್ಞಾನಿಗಳು ನಕ್ಷತ್ರಗಳನ್ನು ಕೆಲವು ಗುಂಪುಗಳಾಗಿ ವಿಂಗಡಿಸಿ,ಇವುಗಳನ್ನು ನಕ್ಷತ್ರ ಪುಂಜ ಗಳೆಂದು ಕರೆದಿದ್ದಾರೆ. ಅವರ ಅಂದಾಜಿನ ಪ್ರಕಾರ ಸುಮಾರು ೮೮ ನಕ್ಷತ್ರ ಪುಂಜಗಳಿವೆ.ನಕ್ಷತ್ರಗಳ ಇನ್ನೂ ದೊಡ್ಡ ಗುಂಪುಗಳನ್ನು ಆಕಾಶಗಂಗೆ (Galaxy)ಎಂದು ಕರೆಯುತ್ತಾರೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ ನಕ್ಷತ್ರಗಳನ್ನು ಅಶ್ವಿನಿ,ಭರಣಿ ಮೊದಲ್ಗೊಂಡು ರೇವತಿವರೆಗೆ ೨೭ ನಕ್ಷತ್ರಗಳಾಗಿ ಪಟ್ಟಿ ಮಾಡಿದ್ದಾರೆ. ಈ ೨೭ ನಕ್ಷತ್ರ್ಗಗಳನ್ನು ೧೨ ರಾಶಿಗಳಲ್ಲಿ ಮೇಷದಿಂದ ಮೀನದವರೆಗೆ ವಿಂಗಡಿಸಿದ್ದಾರೆ.