Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಮಹಾಭಾರತ - Wikipedia

ಮಹಾಭಾರತ

From Wikipedia

ಮಹಾಭಾರತ ಯುದ್ಧದಲ್ಲಿ ಅರ್ಜುನ ಮತ್ತು ಕೃಷ್ಣ
Enlarge
ಮಹಾಭಾರತ ಯುದ್ಧದಲ್ಲಿ ಅರ್ಜುನ ಮತ್ತು ಕೃಷ್ಣ

ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು. ಇದು ಹಿಂದೂ ಧರ್ಮದ ಒಂದು ಮುಖ್ಯ ಪಠ್ಯವೂ ಹೌದು. ವಿಶ್ವ ಸಾಹಿತ್ಯದ ಸಾಧನೆಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಮಹಾಭಾರತ ಭಾರತೀಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ.

ಸಂಪೂರ್ಣ ಮಹಾಭಾರತ ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕಗಳನ್ನು ಒಳಗೊಂಡಿದ್ದು ಗ್ರೀಕ್ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡಿಸ್ಸಿ - ಎರಡನ್ನೂ ಸೇರಿಸಿದರೂ ಮಹಾಭಾರತದ ಏಳನೇ ಒಂದು ಭಾಗದಷ್ಟು ಮಾತ್ರ ಆಗುತ್ತದೆ.


ಪರಿವಿಡಿ

[ಬದಲಾಯಿಸಿ] ಇತಿಹಾಸ ಹಾಗೂ ಹಿನ್ನೆಲೆ

ಮಹಾಭಾರತ 'ಜಯ' ಎಂಬ ಗ್ರಂಥದಿಂದ ನಿಷ್ಪನ್ನವಾಗಿದ್ದೆಂದು ಕೆಲವರ ಪ್ರತೀತಿ. ಇದರಲ್ಲಿ ಉಲ್ಲೇಖಿಸಿರುವ ಘಟನೆಗಳ ನಿಜವಾದ ಕಾಲ ಸರಿಯಾಗಿ ತಿಳಿದಿಲ್ಲ. ಮಹಾಭಾರತದಲ್ಲಿ ಕಂಡುಬರುವ ಘಟನೆಗಳು ನಿಜವಾದ ಘಟನೆಗಳನ್ನು ಆಧರಿಸಿ ಬರೆದದ್ದೋ ಅಲ್ಲವೋ ಎಂಬುದು ಕೆಲವರಲ್ಲಿ ಚರ್ಚಾಸ್ಪದ ವಿಷಯ. ಕೆಲವು ಚರಿತ್ರಜ್ಞರ ಪ್ರಕಾರ ಈ ಘಟನೆಗಳು ನಡೆದ ಸಂದರ್ಭ ಸುಮಾರು ಕ್ರಿ.ಪೂ. ೧೪೦೦. ಇನ್ನು ಮಹಾಭಾರತದ ಘಟನೆಗಳನ್ನು ಅವಲೋಕಿಸಿದ ಹಲವು ವಿದುಷರ ಪ್ರಕಾರ ಅದರಲ್ಲಿ ಉಲ್ಲೇಖ ಮಾಡಲಾಗಿರುವ ಅಂತರಿಕ್ಷ ಚಟುವಟಿಕೆಗಳು (ಗ್ರಹಣ ಇತ್ಯಾದಿ) ಸುಮಾರು ಕ್ರಿ.ಪೂ. ೩೧೦೦ಕ್ಕೆ ಹೋಲುತ್ತದೆಂದು ಹೇಳಲಾಗುತ್ತದೆ. ಆದ್ದರಿಂದ ಇವು ಘಟಿತ ಘಟನೆಗಳೋ ಅಲ್ಲವೋ, ಹೌದಾಗಿದ್ದರೆ ಯಾವ ಕಾಲದಲ್ಲಿ ನಡೆದದ್ದು ಎಂಬ ಎಲ್ಲಾ ವಿಷಯಗಳ ಬಗೆಗೆ ಹಲವು ಭಿನ್ನಾಭಿಪ್ರಾಯಗಳಿವೆ.

[ಬದಲಾಯಿಸಿ] ಕಥಾವಸ್ತು

ಗೀತೋಪದೇಶ
Enlarge
ಗೀತೋಪದೇಶ

ಮಹಾಭಾರತದ ಮುಖ್ಯ ಕಥೆ ಹಸ್ತಿನಾಪುರದ ಆಡಳಿತದ ಬಗ್ಗೆ ಕುರು ವಂಶದ ಸದಸ್ಯರ ನಡುವೆ ನಡೆಯುವ ಹೋರಾಟವನ್ನು ಕುರಿತದ್ದು. ಪಾಂಡವರು ಮತ್ತು ಕೌರವರ ನಡುವೆ ನಡೆಯುವ ಈ ಹೋರಾಟ ಕುರುಕ್ಷೇತ್ರದಲ್ಲಿ ನಡೆಯುವ ಮಹಾಭಾರತ ಯುದ್ಧದಲ್ಲಿ ನಿರ್ಧಾರವಾಗುತ್ತದೆ. ಮಹಾಭಾರತದ ಮುಖ್ಯ ಕಥೆ ಕೃಷ್ಣನ ಅವಸಾನ, ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ. ಮಹಾಭಾರತದ ಉದ್ದಕ್ಕೂ ಬರುವ ಪಾತ್ರಗಳು ಭಾರತೀಯ ಸಂಸ್ಕೃತಿಯಲ್ಲಿ ಅಚ್ಚೊತ್ತಿರುವ ಪಾತ್ರಗಳು.

ಮುಖ್ಯ ಕಥೆಯಲ್ಲದೆ, ಮಹಾಭಾರತದಲ್ಲಿ ಅನೇಕ ಉಪಕಥೆಗಳುಂಟು. ಹಾಗೆಯೇ ಭಗವದ್ಗೀತೆಯಂಥ ಸ್ವತಂತ್ರವಾಗಿ ನಿಲ್ಲಬಲ್ಲಂಥ ಗ್ರಂಥಗಳೂ ಮಹಾಭಾರತದ ಭಾಗಗಳಾಗಿ ಕಂಡುಬರುತ್ತವೆ. ವ್ಯವಸ್ಥೆಯ ದೃಷ್ಟಿಯಿಂದ, ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ.

[ಬದಲಾಯಿಸಿ] ಮುಖ್ಯ ಪಾತ್ರಗಳು

  • ಭೀಷ್ಮ: ಭೀಷ್ಮ ಶಂತನು ಮತ್ತು ಗಂಗೆಯ ಮಗ. ಶಂತನು ಮತ್ತು ಸತ್ಯವತಿಯ ವಿವಾಹಕ್ಕೆ ಸಹಾಯವಾಗಲೆಂದು ಎಂದೂ ಮದುವೆಯಾಗದಿರುವ ಮತ್ತು ರಾಜನಾಗದಿರುವ ವ್ರತವನ್ನು ತೆಗೆದುಕೊಳ್ಳುತ್ತಾನೆ. ಭೀಷ್ಮನಿಗೆ "ದೇವವ್ರತ" ಎಂದೂ ಹೆಸರು. ಇಚ್ಛಾಮರಣಿಯಾದ ಭೀಷ್ಮ ಮಹಾಭಾರತ ಯುದ್ಧದ ಮೊದಲ ಹತ್ತು ದಿನಗಳ ಕಾಲ ಕೌರವರ ಸೇನಾನಿ. ಮಹಾಭಾರತದ ಯುದ್ಧದ ನಂತರ ತನ್ನ ಜೀವನವನ್ನು ಅಂತ್ಯಗೊಳಿಸುತ್ತಾನೆ.
  • ಕೃಷ್ಣ: ಸಾಂಪ್ರದಾಯಿಕ ಹಿಂದೂ ನಂಬಿಕೆಯಂತೆ, ಕೃಷ್ಣ ವಿಷ್ಣುವಿನ ಅವತಾರಗಳಲ್ಲಿ ಒಬ್ಬ. ಮಹಾಭಾರತದಲ್ಲಿ ಕೃಷ್ಣನ ಪಾತ್ರವನ್ನು ಸೂತ್ರಧಾರನ ಪಾತ್ರಕ್ಕೆ ಹೋಲಿಸಲಾಗಿದೆ. ಕೃಷ್ಣಾವತಾರದ ಕಥೆ ಮಹಾಭಾರತದ ಉದ್ದಕ್ಕೂ ಕಂಡುಬರುತ್ತದೆ. ಕಂಸ, ಶಿಶುಪಾಲ, ಮೊದಲಾದವರನ್ನು ಕೊಲ್ಲುವ ಕೃಷ್ಣ ಪಾಂಡವರ ಮಿತ್ರ. ಪಗಡೆಯಾಟದ ಸಂದರ್ಭದಲ್ಲಿ ದ್ರೌಪದಿಯ ವಸ್ತ್ರಾಪಹರಣವನ್ನು ತಡೆಯುವ ಕೃಷ್ಣ ಮಹಾಭಾರತ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಪಾಲ್ಗೊಳ್ಳುತ್ತಾನೆ. ಇದೇ ಸಂದರ್ಭದಲ್ಲೇ ಪ್ರಸಿದ್ಧ ಗೀತೋಪದೇಶ ನಡೆಸುತ್ತಾನೆ.
  • ಪಾಂಡವರು: ಪಾಂಡವರು ಪಾಂಡು ಹಾಗೂ ಕುಂತಿಯ ಮಕ್ಕಳು. ಋಷಿಯ ಶಾಪದಿಂದ ಮಕ್ಕಳನ್ನು ಪಾಂಡು ಪಡೆಯಲಾಗದಿದ್ದರೂ, ಕುಂತಿಗೆ ದೊರೆತಿದ್ದ ದೂರ್ವಾಸನ ವರವನ್ನು ಉಪಯೋಗಿಸಿ ಕುಂತಿ ಮತ್ತು ಮಾದ್ರಿ ಪಾಂಡವರನ್ನು ಮಕ್ಕಳಾಗಿ ಪಡೆಯುತ್ತಾರೆ. ಐವರು ಪಾಂಡವರು: ಯುಧಿಷ್ಠಿರ (ಯಮನಿಂದ), ಭೀಮ (ವಾಯುವಿನಿಂದ), ಅರ್ಜುನ (ಇಂದ್ರನಿಂದ), ನಕುಲ ಮತ್ತು ಸಹದೇವ (ಅಶ್ವಿನಿ ದೇವತೆಗಳಿಂದ). ಮಹಾಭಾರತದ ಯುದ್ಧ ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ನಡೆಯುತ್ತದೆ.
  • ದ್ರೌಪದಿ: ಭಾರತೀಯ ಸಾಹಿತ್ಯದ ಪ್ರಸಿದ್ಧ ಸ್ತ್ರೀಪಾತ್ರಗಳಲ್ಲಿ ದ್ರೌಪದಿಯ ಪಾತ್ರವೂ ಒಂದು. ದ್ರೌಪದಿ ಐವರೂ ಪಾಂಡವರ ಪತ್ನಿ. ಪಾಂಚಾಲ ರಾಜ ದ್ರುಪದನ ಮಗಳು. ಮಹಾಭಾರತದ ಅತ್ಯಂತ ಸಂಕೀರ್ಣವಾದ ಪಾತ್ರಗಳಲ್ಲಿ ದ್ರೌಪದಿಯ ಪಾತ್ರ ಒಂದು.
  • ಕೌರವರು: ಕೌರವರು ಪಾಂಡುವಿನ ಅಣ್ಣ ಧೃತರಾಷ್ಟ್ರನ ಮಕ್ಕಳು (ಗಾಂಧಾರಿಯಿಂದ); ಒಟ್ಟು ನೂರು ಕೌರವರು - ಇವರಲ್ಲಿ ಹಿರಿಯರು ದುರ್ಯೋಧನ ಮತ್ತು ದುಃಶಾಸನ.
  • ಕರ್ಣ: ಕರ್ಣನ ಪಾತ್ರ ಮಹಾಭಾರತದ ದುರಂತ ಪಾತ್ರಗಳಲ್ಲಿ ಒಂದು. ಮದುವೆಗೆ ಮೊದಲು ಸೂರ್ಯನಿಂದ ಕುಂತಿಯ ಮಗನಾಗಿ ಹುಟ್ಟುವ ಕರ್ಣನನ್ನು ಕುಂತಿ ನದಿಯಲ್ಲಿ ತೇಲಿಬಿಡುತ್ತಾಳೆ. ಸೂತನೊಬ್ಬನ ಮನೆಯಲ್ಲಿ ಬೆಳೆಯುವ ಕರ್ಣ ಪರಶುರಾಮನಿಂದ ಶಿಕ್ಷಣವನ್ನು ಪಡೆದರೂ ಶಾಪವನ್ನೂ ಪಡೆಯುತ್ತಾನೆ. ದುರ್ಯೋಧನ ಕರ್ಣನ ಆಪ್ತ ಗೆಳೆಯ. ಕೊನೆಗೆ ಮಹಾಭಾರತ ಯುದ್ಧದ ಸಮಯದಲ್ಲಿ ಪರಶುರಾಮನ ಶಾಪದ ಕಾರಣ ತನ್ನ ವಿದ್ಯೆ ಮರೆತುಹೋಗಿ ರಥ ಮಣ್ಣಿನಲ್ಲಿ ಹೂತಿದ್ದಾಗ ಅರ್ಜುನನ ಬಾಣದಿಂದ ಸಾಯುತ್ತಾನೆ.

[ಬದಲಾಯಿಸಿ] ಪರ್ವಗಳು

ಮಹಾಭಾರತದ ಹದಿನೆಂಟು ಪರ್ವಗಳ ಸಂಕ್ಷಿಪ್ತ ಚಿತ್ರ:

  1. ಆದಿಪರ್ವ: ಪರಿಚಯ, ಹಿನ್ನೆಲೆ, ಪಾಂಡವ ಮತ್ತು ಕೌರವರ ಜನನ ಹಾಗೂ ಬೆಳವಣಿಗೆ
  2. ಸಭಾಪರ್ವ: ಆಸ್ಥಾನದ ಜೀವನ, ಪಗಡೆಯಾಟ, ಇಂದ್ರಪ್ರಸ್ಥ, ಪಾಂಡವರ ವನವಾಸ ಆರಂಭ
  3. ಅರಣ್ಯಕಪರ್ವ: ಹನ್ನೆರಡು ವರ್ಷದ ವನವಾಸ
  4. ವಿರಾಟಪರ್ವ: ವಿರಾಟನ ಆಸ್ಥಾನದಲ್ಲಿ ಒಂದು ವರ್ಷದ ಅಜ್ಞಾತವಾಸ
  5. ಉದ್ಯೋಗಪರ್ವ: ಯುದ್ಧದ ತಯಾರಿ
  6. ಭೀಷ್ಮಪರ್ವ: ಯುದ್ಧ ಆರಂಭ, ಭೀಷ್ಮ ಕೌರವರ ಸೇನಾನಿ - ಕೃಷ್ಣನಿಂದ ಭಗವದ್ಗೀತೆ ಉಪದೇಶ
  7. ದ್ರೋಣಪರ್ವ: ಯುದ್ಧದ ಮುಂದುವರಿಕೆ, ದ್ರೋಣರ ಸೇನಾಧಿಪತ್ಯದಲ್ಲಿ
  8. ಕರ್ಣಪರ್ವ: ಕರ್ಣನ ಸೇನಾಧಿಪತ್ಯ, ಕರ್ಣಾವಸಾನ
  9. ಶಲ್ಯಪರ್ವ: ಶಲ್ಯನ ಸೇನಾಧಿಪತ್ಯ
  10. ಸೌಪ್ತಿಕಪರ್ವ: ಅಶ್ವತ್ಥಾಮ ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ
  11. ಸ್ತ್ರೀಪರ್ವ: ಗಾಂಧಾರಿಯ ವಿಲಾಪ
  12. ಶಾಂತಿಪರ್ವ: ಯುಧಿಷ್ಠಿರನ ಪಟ್ಟಾಭಿಷೇಕ, ಭೀಷ್ಮನಿಂದ ಸಲಹೆ
  13. ಅನುಶಾಸನಪರ್ವ: ಭೀಷ್ಮನ ಕೊನೆಯ ಮಾತುಗಳು
  14. ಅಶ್ವಮೇಧಿಕಪರ್ವ: ಯುಧಿಷ್ಠಿರನಿಂದ ಅಶ್ವಾಮೇಧ ಯಜ್ಞ
  15. ಆಶ್ರಮವಾಸಿಕಪರ್ವ: ಧೃತರಾಷ್ಟ್ರ, ಗಾಂಧಾರಿ, ಕುಂತಿಯರ ಆಶ್ರಮವಾಸ, ಕೊನೆಗೆ ಮರಣ
  16. ಮೌಸಲಪರ್ವ: ಯಾದವರಲ್ಲಿ ಕಲಹ ("ಯಾದವೀ ಕಲಹ")
  17. ಮಹಾಪ್ರಸ್ತಾನಿಕಪರ್ವ: ಪಾಂಡವರ ಮರಣದ ಮೊದಲ ಭಾಗ
  18. ಸ್ವರ್ಗಾರೋಹಣಪರ್ವ: ಪಾಂಡವರ ಸ್ವರ್ಗಾರೋಹಣ

[ಬದಲಾಯಿಸಿ] ಉಪಕಥೆಗಳು ಮತ್ತು ಗ್ರಂಥಗಳು

ಮಹಾಭಾರತದ ಭಾಗವಾದ ಹಲವು ಪ್ರಮುಖ ಕಥೆಗಳು/ಗ್ರಂಥಗಳು:

  • ಭಗವದ್ಗೀತೆ (ಭೀಷ್ಮಪರ್ವ): ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಭಗವದ್ಗೀತೆ ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು. ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಜ್ಞಾನ, ಧ್ಯಾನ ಮತ್ತು ಕರ್ಮ ಮಾರ್ಗಗಳನ್ನು ಕೃಷ್ಣ ಅರ್ಜುನನಿಗೆ ತಿಳಿಸುತ್ತಾನೆ.
  • ದಮಯಂತಿ (ಅರಣ್ಯಕಪರ್ವ): ನಳ ಮತ್ತು ದಮಯಂತಿಯರ ಕಥೆ ಮಹಾಭಾರತದ ಪ್ರಸಿದ್ಧ ಉಪಕಥೆಗಳಲ್ಲಿ ಒಂದು. ಸ್ವಯಂವರದಲ್ಲಿ ಇಂದ್ರ, ವರುಣ ಮೊದಲಾದವರನ್ನು ಕಡೆಗಣಿಸಿ ದಮಯಂತಿ ನಳನನ್ನೇ ಮದುವೆಯಾಗುತ್ತಾಳೆ. ಜೂಜಾಡಿ ಎಲ್ಲವನ್ನೂ ನಳ ಕಳೆದುಕೊಂಡ ನಂತರ ಕಾಡಿನಲ್ಲಿ ಇರಬೇಕಾಗುತ್ತದೆ. ದಮಯಂತಿ ತನ್ನ ತಂದೆಯ ಮನೆಗೆ ಹೋಗಲೆಂದು ಅವಳನ್ನು ಬಿಟ್ಟು ಓಡಿ ಹೋಗುವ ನಳ ಅಡಿಗೆ ಭಟ್ಟ ಮತ್ತು ಕುದುರೆ ತರಬೇತುಗಾರನಾಗಿ ರಾಜನೊಬ್ಬನ ಹತ್ತಿರ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಇದರ ಅನುಮಾನ ಬಂದ ದಮಯಂತಿ ಈ ರಾಜನನ್ನು ಇನ್ನೊಂದು ಸ್ವಯಂವರಕ್ಕೆ ಕರೆಸಿ ಅಡಿಗೆಯ ರುಚಿಯಿಂದ ನಳನನ್ನು ಗುರುತು ಹಿಡಿಯುತ್ತಾಳೆ. ನಳ ಮತ್ತೆ ತನ್ನ ಆಸ್ತಿಯೆಲ್ಲವನ್ನೂ ಗೆದ್ದ ನಂತರ ಕಥೆ ಮುಗಿಯುತ್ತದೆ.
  • ಕೃಷ್ಣಾವತಾರ: ಕೃಷ್ಣನ ಸಂಪೂರ್ಣ ಕಥೆ "ಕೃಷ್ಣಾವತಾರ" ಪುರಾಣದಲ್ಲಿ ಮೂಡಿಬಂದಿದೆ. ಇದೇ ಕಥೆ ಮಹಾಭಾರತದ ಉದ್ದಕ್ಕೂ ನೇಯಲ್ಪಟ್ಟಿದೆ.
  • ಋಷ್ಯಶೃಂಗ (ಅರಣ್ಯಕಪರ್ವ): ಋಷ್ಯಶೃಂಗ ಋಷಿ, ಪೌರಾಣಿಕವಾಗಿ ವಿಭಾಂಡಕ ಋಷಿಯ ಮಗ. ರೋಮಪಾದ ರಾಜ್ಯದಲ್ಲಿ ಕ್ಷಾಮ ಬಂದಾಗ ಋಷ್ಯನೇ ಮಳೆಯನ್ನು ಅಲ್ಲಿಗೆ ತಂದನಂತೆ. ಇಂದಿನ ಕರ್ನಾಟಕ ರಾಜ್ಯದ ಶೃಂಗೇರಿಯ ಮೊದಲ ಹೆಸರು "ಋಷ್ಯಶೃಂಗಗಿರಿ" ಆಗಿತ್ತೆಂದು ಹೇಳುತ್ತಾರೆ.
  • ವಿಷ್ಣು ಸಹಸ್ರನಾಮ (ಅನುಶಾಸನಪರ್ವ): ವಿಷ್ಣು ಸಹಸ್ರನಾಮ ವಿಷ್ಣುವಿನ ೧,೦೦೦ ಹೆಸರುಗಳನ್ನು ಒಳಗೊಂಡ ಸ್ತೋತ್ರ. ಇದು ಮಹಾಭಾರತದ ಅನುಶಾಸನ ಪರ್ವದ ೧೪೯ ನೆ ಅಧ್ಯಾಯದಲ್ಲಿ ಕಂಡುಬರುತ್ತದೆ. ಯುದ್ಧದ ನಂತರ ಭೀಷ್ಮನ ಬಳಿ ಹೋಗುವ ಯುಧಿಷ್ಠಿರ ಭೀಷ್ಮನನ್ನು ಅನೇಕ ಧರ್ಮಪ್ರಶ್ನೆಗಳ ಪರಿಹಾರದ ಬಗ್ಗೆ ಕೇಳುತ್ತಾನೆ. ಹಾಗೆಯೇ, ಪುಣ್ಯಸಂಪಾದನೆಯ ದಾರಿಗಳ ಬಗ್ಗೆ ಕೇಳುತ್ತಾನೆ. ಭೀಷ್ಮ ಉತ್ತರವಾಗಿ ವಿಷ್ಣು ಸಹಸ್ರನಾಮವನ್ನು ತಿಳಿಸುತ್ತಾನೆ.
  • ರಾಮಾಯಣದ ಕಥೆಯೂ ಮಹಾಭಾರತದ ಅರಣ್ಯಪರ್ವದಲ್ಲಿ ಸಂಕ್ಷಿಪ್ತವಾಗಿ ಮೂಡಿಬಂದಿದೆ.

[ಬದಲಾಯಿಸಿ] ತತ್ವಶಾಸ್ತ್ರ

ಮಹಾಭಾರತ ವಿಶಾಲವಾದ ತತ್ವಶಾಸ್ತ್ರವನ್ನು ಒಳಗೊಂಡ ಗ್ರಂಥ. ಕೆಲವರು ಇದನ್ನು "ಐದನೆಯ ವೇದ" ಎಂದೇ ಕರೆದಿದ್ದಾರೆ. ಮಹಾಭಾರತದ ತಾತ್ವಿಕ ಬೇರುಗಳು ಇರುವುದು ವೈದಿಕ ತತ್ವಶಾಸ್ತ್ರದಲ್ಲಿ. ಮಹಾಭಾರತದ ಒಂದು ಶ್ಲೋಕ ಹೇಳುವಂತೆ, ಅದರ ಮುಖ್ಯ ಗುರಿ ನಾಲ್ಕು ಪುರುಷಾರ್ಥಗಳನ್ನು ತಿಳಿಸಿಕೊಡುವುದು: ಅರ್ಥ, ಕಾಮ, ಧರ್ಮ, ಮತ್ತು ಮೋಕ್ಷ.

ಮಹಾಭಾರತದ ಅನೇಕ ಭಾಗಗಳು, ಉಪಕಥೆಗಳು ಮತ್ತು ಉಪಗ್ರಂಥಗಳು ಪ್ರಾಚೀನ ಭಾರತದ ವಿವಿಧ ತತ್ವಶಾಸ್ತ್ರಗಳನ್ನು ವರ್ಣಿಸುತ್ತವೆ. ವೇದಾಂತ, ಸಾಂಖ್ಯ, ಯೋಗ, ಪಂಚರಾತ್ರ, ಯೋಗ ಮೊದಲಾದ ತಾತ್ವಿಕ ಸಂಪ್ರದಾಯಗಳನ್ನು ಒಳಗೊಂಡ ಮಹಾಭಾರತ ಭಾರತೀಯ ತತ್ವಶಾಸ್ತ್ರದ ಮುಖ್ಯ ಆಕರಗಳಲ್ಲಿ ಒಂದೂ ಹೌದು. ವಿವಿಧ ತಾತ್ವಿಕ ನೆಲೆಗಟ್ಟುಗಳ ಮಧ್ಯೆ ಅವುಗಳ ಬಗೆಗಿನ ಸಹಿಷ್ಣುತೆಯೂ ಮಹಾಭಾರತದ ತತ್ವಶಾಸ್ತ್ರದಲ್ಲಿ ಕಂಡುಬರುತ್ತದೆ. ಮಹಾಭಾರತದಲ್ಲಿ ವೈಶಂಪಾಯನ ಜನಮೇಜಯನಿಗೆ ಹೇಳುತ್ತಾನೆ:

"ಓ ವಿವೇಕಿ! ಇವೆಲ್ಲವೂ ಜ್ಞಾನವನ್ನೇ ಪ್ರತಿನಿಧಿಸುತ್ತವೆ ಎಂದು ತಿಳಿ: ಸಾಂಖ್ಯ, ಯೋಗ, ಪಂಚರಾತ್ರ, ಆರಣ್ಯಕ. ಅವುಗಳ ದಾರಿಗಳು ಬೇರೆ, ಆದರೆ ಮೂಲದಲ್ಲಿ ಎಲ್ಲವೂ ಒಂದೇ!"

ಮಹಾಭಾರತದಲ್ಲಿ ಅಧ್ಯಾತ್ಮಿಕ ತತ್ವಶಾಸ್ತ್ರವಲ್ಲದೇ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜನೀತಿ, ಯುದ್ಧನೀತಿ, ಖಗೋಳಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆಯೂ ಬಹಳಷ್ಟು ಮಾಹಿತಿಯುಂಟು.

[ಬದಲಾಯಿಸಿ] ಕನ್ನಡ ಸಾಹಿತ್ಯದಲ್ಲಿ ಮಹಾಭಾರತ

ಮಹಾಭಾರತದಿಂದ ಸ್ಫೂರ್ತಿ ಪಡೆದ ಕನ್ನಡ ಸಾಹಿತ್ಯ ವಿಪುಲವಾಗಿದೆ. ಕನ್ನಡದಲ್ಲಿ ಮಹಾಭಾರತದ ಮೊದಲ ಬರವಣಿಗೆಯ ಕರ್ತೃ ಆದಿಕವಿ ಪಂಪ - ಪಂಪನ ವಿಕ್ರಮಾರ್ಜುನ ವಿಜಯ ಕನ್ನಡದ ಮೇರುಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಗದ್ಯ ಮತ್ತು ಪದ್ಯಮಿಶ್ರಿತವಾದ "ಚಂಪೂ" ಶೈಲಿಯಲ್ಲಿ ಬರೆಯಲ್ಪಟ್ಟಿರುವ ಪಂಪ ಭಾರತ ತನ್ನ ಆಳವಾದ ಮಾನವೀಯ ಮೌಲ್ಯಗಳಿಗೆ ಹೆಸರಾಗಿದೆ. ಸುಮಾರು ಇದೇ ಕಾಲದ ರನ್ನನ "ಗದಾಯುದ್ಧಂ" ಮಹಾಭಾರತ ಯುದ್ಧದ ಭೀಮ-ದುರ್ಯೋಧನರ ಗದಾಯುದ್ಧವನ್ನು ಕುರಿತದ್ದಾದರೂ ಇಡಿಯ ಮಹಾಭಾರತ ಕಥೆಯನ್ನು ಸಿಂಹಾವಲೋಕನ ಕ್ರಮದಲ್ಲಿ ಪರಿಶೀಲಿಸುತ್ತದೆ.

ಕನ್ನಡದಲ್ಲಿ ಬಹಳ ಖ್ಯಾತಿ ಪಡೆದ ಮಹಾಭಾರತ, ಕುಮಾರವ್ಯಾಸ ವಿರಚಿತ "ಕರ್ಣಾಟ ಭಾರತ ಕಥಾಮಂಜರಿ"ಯು ಕುಮಾರವ್ಯಾಸ ಭಾರತ ಅಥವಾ "ಗದುಗಿನ ಭಾರತ" ಎಂದು ಕರೆಯಲ್ಪಡುತ್ತದೆ. ಈ ಕೃತಿ ಭಾಮಿನಿ ಷಟ್ಪದಿಯಲ್ಲಿ ಬರೆಯಲ್ಪಟ್ಟಿದ್ದು ತನ್ನ ಪಾತ್ರವೈವಿಧ್ಯತೆ ಹಾಗೂ ಶ್ರೀಮಂತ ರೂಪಕಗಳಿಗೆ ಹೆಸರಾಗಿದೆ. ಕುಮಾರವ್ಯಾಸ ಕೃಷ್ಣನ ಭಕ್ತ - ಕೃಷ್ಣಾವಸಾನದ ನಂತರ ಕುಮಾರವ್ಯಾಸ ತನ್ನ ಕಾವ್ಯವನ್ನು ಮುಗಿಸಿರುವುದರಿಂದ ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಮಾತ್ರ ಕುಮಾರವ್ಯಾಸ ಭಾರತ ಒಳಗೊಂಡಿದೆ. ಮಹಾಭಾರತದ ಉಳಿದ ಭಾಗ ವಾರ್ಧಕ ಷಟ್ಪದಿಯಲ್ಲಿ, ಲಕ್ಷ್ಮೀಶ ಕವಿ ವಿರಚಿತ "ಜೈಮಿನಿ ಭಾರತ"ದಲ್ಲಿ ಮೂಡಿ ಬ೦ದಿದೆ.

ಆಧುನಿಕ ಕನ್ನಡದಲ್ಲಿ ಪ್ರಸಿದ್ಧವಾದ ಮಹಾಭಾರತದ ಆವೃತ್ತಿ ಎ ಅರ್ ಕೃಷ್ಣಶಾಸ್ತ್ರಿಗಳು ಬರೆದ "ವಚನ ಭಾರತ." ಈ ಕೃತಿ ಸರಳವಾದ ಆಧುನಿಕ ಕನ್ನಡದಲ್ಲಿ ಬರೆಯಲ್ಪಟ್ಟಿದೆ. ಆಧುನಿಕ ಕನ್ನಡದಲ್ಲಿ ಮಹಾಭಾರತದ ಇನ್ನೊಂದು ಕೃತಿ "ಪರ್ವ" (ಎಸ್ ಎಲ್ ಭೈರಪ್ಪ).

ಮೇಲಿನವು ಮುಖ್ಯ ಮಹಾಭಾರತ ಕಥೆಯನ್ನು ಆಧರಿಸಿ ಬರೆದ ಕೃತಿಗಳಾದರೆ, ಮಹಾಭಾರತದ ವಿವಿಧ ಪಾತ್ರಗಳು ಮತ್ತು ಸನ್ನಿವೇಶಗಳನ್ನು ಆಧರಿಸಿ ಬರೆದ ಕೃತಿಗಳು ಅನೇಕ. ಆಧುನಿಕ ಕನ್ನಡದಲ್ಲಿ ಕುವೆಂಪು ರವರ "ಬೆರಳ್ ಗೆ ಕೊರಳ್" ಮಹಾಭಾರತದ ಏಕಲವ್ಯನ ಪಾತ್ರವನ್ನು ಆಧರಿಸಿ ಬರೆದ ನಾಟಕ. ಹಾಗೆಯೇ ಬಿ ಎಂ ಶ್ರೀ ರವರ "ಗದಾಯುದ್ಧಂ" ರನ್ನನ ಕಾವ್ಯದ ನಾಟಕ ರೂಪಾಂತರ. ಗಿರೀಶ್ ಕಾರ್ನಾಡ್ ರ "ಯಯಾತಿ" ಮಹಾಭಾರತದ ಉಪಕಥೆಯೊಂದನ್ನು ಆಧರಿಸಿ ಬರೆದ ನಾಟಕ.

[ಬದಲಾಯಿಸಿ] ಮಾಧ್ಯಮಗಳಲ್ಲಿ ಮಹಾಭಾರತ

೮೦ ರ ದಶಕದ ಕೊನೆಯಲ್ಲಿ ಮಹಾಭಾರತವನ್ನು ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರ ಮಾಡಲಾಗಿತ್ತು. ೧೯೮೯ ರಲ್ಲಿ ಬ್ರಿಟಿಷ್ ನಿರ್ದೇಶಕ ಪೀಟರ್ ಬ್ರೂಕ್ ಅವರ ನಿರ್ದೇಶನದಲ್ಲಿ ಮಹಾಭಾರತ ಚಿತ್ರವಾಗಿ ತೆಗೆಯಲ್ಪಟ್ಟಿತ್ತು. ಹಿಂದಿ ಚಿತ್ರ "ಕಲಿಯುಗ್" ಮಹಾಭಾರತದ ಕಥೆಯನ್ನೇ ಆಧುನಿಕ ಕಾಲಕ್ಕೆ ಅಳವಡಿಸಿ ತೆಗೆದ ಚಿತ್ರ. ಹಾಗೆಯೇ ಮಹಾಭಾರತದ ವಿಶಿಷ್ಟ ಪಾತ್ರಗಳ ಬಗ್ಗೆ ಸಹ ಚಿತ್ರಗಳು ನಿರ್ಮಾಣವಾಗಿವೆ. ಕನ್ನಡದಲ್ಲಿ ತೆಗೆದ ಚಿತ್ರಗಳಲ್ಲಿ "ಬಬ್ರುವಾಹನ", "ಶ್ರೀಕೃಷ್ಣಗಾರುಡಿ" ಮೊದಲಾದವು ಇಂಥ ಚಿತ್ರಗಳಲ್ಲಿ ಸೇರಿವೆ.

[ಬದಲಾಯಿಸಿ] ಕೆಲವು ಉಕ್ತಿಗಳು

ಮಹಾಭಾರತದಲ್ಲಿ ಕಂಡುಬರುವ ಕೆಲವು ಪ್ರಸಿದ್ಧ ವಾಕ್ಯಗಳು:

  • "ಇಲ್ಲಿ ಕಂಡುಬರುವುದು ಬೇರೆ ಕಡೆಗಳಲ್ಲಿ ಸಿಗಬಹುದು, ಆದರೆ ಇಲ್ಲಿ ಇಲ್ಲದಿರುವುದು ಇನ್ನೆಲ್ಲಿಯೂ ಸಿಗುವುದಿಲ್ಲ." -- ಆದಿಪರ್ವ.
  • "ಅತೃಪ್ತಿಯೇ ಪ್ರಗತಿಯ ಮೂಲ." -- ದುರ್ಯೋಧನ.
  • "ಅಧಿಕಾರದ ನಶೆ ಮದ್ಯದ ನಶೆಗಿಂತಲೂ ಕೆಟ್ಟದ್ದು; ಏಕೆಂದರೆ ಅಧಿಕಾರದ ನಶೆ ಇರುವವನಿಗೆ ಆತ ಕೆಳಗೆ ಬೀಳುವ ವರೆಗೂ ನಶೆ ಇಳಿಯುವುದಿಲ್ಲ." -- ವಿದುರ.
  • "ಸಾಧುಗಳನ್ನು ರಕ್ಷಿಸಲು, ದುಷ್ಟರನ್ನು ಶಿಕ್ಷಿಸಲು, ಧರ್ಮದ ಸಂಸ್ಥಾಪನೆಗಾಗಿ, ಯುಗಯುಗಗಳಲ್ಲಿಯೂ ಸಂಭವಿಸುತ್ತೇನೆ." -- ಕೃಷ್ಣ.

[ಬದಲಾಯಿಸಿ] ಬಾಹ್ಯ ಸಂಪರ್ಕಗಳು


ವೇದವ್ಯಾಸ ವಿರಚಿತ ಮಹಾಭಾರತ
ಪಾತ್ರಗಳು
ಕುರುವಂಶ ಇತರರು
ಶಂತನು | ಗಂಗೆ | ಭೀಷ್ಮ | ಸತ್ಯವತಿ | ಚಿತ್ರಾಂಗದ | ವಿಚಿತ್ರವೀರ್ಯ | ಅಂಬಿಕಾ| ಅಂಬಲಿಕಾ | ವಿದುರ | ಧೃತರಾಷ್ಟ್ರ | ಗಾಂಧಾರಿ | ಶಕುನಿ | ಸುಭದ್ರ | ಪಾಂಡು | ಕುಂತಿ | ಮಾದ್ರಿ | ಯುಧಿಷ್ಠಿರ | ಭೀಮಸೇನ | ಅರ್ಜುನ | ನಕುಲ | ಸಹದೇವ | ದುರ್ಯೋಧನ | ದುಶ್ಯಾಸನ | ಯುಯುತ್ಸು | ದುಶ್ಯಲಾ | ದ್ರೌಪದಿ | ಹಿಡಿಂಬಿ | ಘಟೋತ್ಕಚ | ಅಹಿಲಾವತಿ | ಬಬ್ರುವಾಹನ | ಅಭಿಮನ್ಯು | ಉತ್ತರೆ | ಉಲೂಚಿ ಅಂಬೆ | ಬಾರ್ಬರಿಕಾ |ಇರಾವನ | ಪರೀಕ್ಷಿತ | ವಿರಾಟ | ಕೃಪಾಚಾರ್ಯ | ದ್ರೋಣಾಚಾರ್ಯ | ಅಶ್ವತ್ಥಾಮ | ಏಕಲವ್ಯ | ಕೃತವರ್ಮ | ಜರಾಸಂಧ | ಸತ್ಯಕಿ | ಮಯಾಸುರ | ದೂರ್ವಾಸ | ಸಂಜಯ | ಜನಮೇಜಯ | ವೇದವ್ಯಾಸ | ಕರ್ಣ | ಜಯದ್ರಥ | ಕೃಷ್ಣ | ಬಲರಾಮ | ದ್ರುಪದ | ಹಿಡಿಂಬ | ದೃಷ್ಟದ್ಯುಮ್ನ | ಶಲ್ಯ | ಅತಿರಥ | ಶಿಖಂಡಿ
ಇತರೆ
ಪಾಂಡವರು | ಕೌರವರು | ಹಸ್ತಿನಾಪುರ | ಇಂದ್ರಪ್ರಸ್ಥ | ಕುರುಕ್ಷೇತ್ರ ಯುದ್ಧ | ಭಗವದ್ಗೀತೆ


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ
Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com