ಹಿಂದಿ
From Wikipedia
ಹಿಂದಿ (हिन्दी) | |
---|---|
ಬಳಕೆ: | ಭಾರತ |
ಪ್ರದೇಶ: | ದಕ್ಷಿಣ ಏಶಿಯಾ |
ಬಳಸುವ ಜನಸ೦ಖ್ಯೆ: | ೧೮೦-೪೮೦ ಮಿಲ್ಲಿಯನ್ |
Genetic classification: | ಇಂಡೊ-ಯುರೋಪಿಯನ್ ಇಂಡೋ-ಆರ್ಯನ್ |
ಅಧಿಕೃತ ಸ್ಥಾನಮಾನ | |
ಅಧಿಕೃತ ಭಾಷೆ: | ಭಾರತ |
ಮೇಲ್ವಿಚಾರ ನಡೆಸುವ ಸಂಸ್ಥೆ: | ಕೇಂದ್ರ ಹಿಂದಿ ಡೈರೆಕ್ಟೊರೇಟ್ |
ಭಾಷಾ ಕೋಡ್ | |
ISO 639-1 | hi |
ISO 639-2 | hin |
SIL | HND |
ಇವನ್ನೂ ನೋಡಿ: ಭಾಷೆಗಳು |
ಹಿಂದಿ (हिन्दी) ಭಾರತದ ಪ್ರಮುಖ ಭಾಷೆಗಳಲ್ಲೊಂದು. ಭಾರತದ ಉತ್ತರ ಹಾಗೂ ಮಧ್ಯ ಭಾಗದ ಹಲವು ರಾಜ್ಯಗಳಲ್ಲಿ ಹಿಂದಿ ಮಾತನಾಡಲಾಗುತ್ತದೆ. ಇದು ಇಂಡೋ-ಯೂರೋಪಿಯನ್ ಭಾಷಾಬಳಗದ ಇಂಡೋ-ಇರಾನಿಯನ್ ಉಪವರ್ಗಕ್ಕೆ ಸೇರುತ್ತದೆ. ಮಧ್ಯ ಯುಗದಲ್ಲಿ ಅಸ್ತಿತ್ವದಲ್ಲಿದ್ದ ಪ್ರಾಕೃತ ಭಾಷೆಗಳಿಂದ, ಹಾಗೂ ಅವುಗಳ ಮೂಲಕ ಸಂಸ್ಕೃತದಿಂದ, ಹಿಂದಿ ವಿಕಾಸವಾಗಿದೆ. ಹಿಂದಿಯಲ್ಲಿ ಉಪಯೋಗಿಸುವ ಅನೇಕ ಪದಗಳು ಸಂಸ್ಕೃತದಿಂದ ಬಂದಿದ್ದು, ಉತ್ತರ ಭಾರತದಲ್ಲಿ ಮುಸ್ಲಿಮ್ ಪ್ರಭಾವದ ಪರಿಣಾಮವಾಗಿ ಸಾಕಷ್ಟು ಪರ್ಷಿಯನ್, ಅರಾಬಿಕ್ ಹಾಗೂ ಟರ್ಕಿಷ್ ಭಾಷೆಗಳ ಪದಗಳನ್ನು ಸಹ ಎರವಾಗಿ ಪಡೆದಿದೆ.
ಹಿಂದಿ ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದಾಗಿದ್ದು, ಭಾರತದ ಕೇಂದ್ರ ಸರ್ಕಾರ ಉಪಯೋಗಿಸುವ ಭಾಷೆಗಳಲ್ಲಿ ಒಂದು (ಇಂಗ್ಲಿಷ್ ನೊಂದಿಗೆ).
ಚೈನೀಸ್ ಭಾಷೆಯ ನಂತರ ಹಿಂದಿ ಅತಿ ಹೆಚ್ಚು ಜನರಿಂದ ಉಪಯೋಗದಲ್ಲಿದೆ. ಸುಮಾರು ೫೦ ಕೋಟಿ ಜನರು ಹಿಂದಿಯನ್ನು ಮಾತನಾಡಬಲ್ಲರು ಎಂದು ತಿಳಿಯಲಾಗಿದೆ. ಹಿಂದಿಯನ್ನು ಅರ್ಥ ಮಾಡಿಕೊಳ್ಳಬಲ್ಲವರ ಜನಸಂಖ್ಯೆ ಸುಮಾರು ೮೦ ಕೋಟಿ ಇದ್ದೀತು. ಭಾರತದಲ್ಲಿ ಸುಮಾರು ೧೮ ಕೋಟಿ ಜನರಿಗೆ ಹಿಂದಿ ಮಾತೃಭಾಷೆಯಾಗಿದೆ.
ಅಸ್ಸಾಮಿ | ಆಂಗ್ಲ(ಇಂಗ್ಲೀಷ್) | ಉರ್ದೂ | ಒಡಿಯಾ | ಕನ್ನಡ | ಕಾಶ್ಮೀರಿ | ಕೊಂಕಣಿ | ಕೊಡವ | ಗುಜರಾತಿ | ಡೋಗ್ರಿ | ತಮಿಳು | ತುಳು | ತೆಲುಗು | ನೇಪಾಲಿ | ಪಂಜಾಬಿ | ಬಂಗಾಳಿ | ಭೋಜಪುರಿ | ಬೋಡೊ | ಮಣಿಪುರಿ | ಮರಾಠಿ | ಮಲಯಾಳಂ | ಮೈಥಿಲಿ | ಸಿಂಧಿ | ಸಂಸ್ಕೃತ | ಹಿಂದಿ
ವರ್ಗಗಳು: ಭಾಷೆ | ಭಾಷೆಗಳು | ಭಾರತೀಯ ಭಾಷೆಗಳು