ವಿಜ್ಞಾನ
From Wikipedia
ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಈ ಜ್ಞಾನವು ಮಾನವ ತನ್ನ ಇಂದ್ರಿಯಗಳಿಂದ ತಿಳಿಯುವಂತಿರಬೇಕು ಮತ್ತು ಪರಿಶೋಧನೆಗೆ ವಿಧೇಯವಾಗಿರಬೇಕು. ಈ ಜ್ಞಾನ ಸಂಪಾದನೆಯ ವಿಧಿಯನ್ನು ವೈಜ್ಞಾನಿಕ ವಿಧಿಯೆಂದು ಪರಿಗಣಿಸಲಾಗುತ್ತದೆ.
ವಿಜ್ಞಾನವನ್ನು ವಿಶಾಲವಾಗಿ ೨ ಸಮೂಹಗಳಾಗಿ ವಿಂಗಡಿಸಬಹುದು.
- ೧. ನೈಸರ್ಗಿಕ ವಿಜ್ಞಾನ
- ೨. ಸಮಾಜ ವಿಜ್ಞಾನ
ಗಣಿತ ವೈಜ್ಞಾನಿಕ ವಿಧಿಯನ್ನು ಸಂಪೂರ್ಣವಾಗಿ ಉಪಯೋಗಿಸದಿದ್ದರೂ, ಕಟ್ಟುನಿಟ್ಟಾದ ಆಯಕಟ್ಟಿನಲ್ಲಿ ಜ್ಞಾನ ಸಂಪಾದನೆ ಮಾಡುವುದರಿಂದ, ಕೆಲವೂಮ್ಮೆ ಇದನ್ನು ವಿಜ್ಞಾನದ ೩ನೇ ಸಮೂಹಕ್ಕೆ ಸೇರಿಸಲಾಗುತ್ತದೆ.