Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಪರಮ ವೀರ ಚಕ್ರ - Wikipedia

ಪರಮ ವೀರ ಚಕ್ರ

From Wikipedia

ಭಾರತದ ರಾಷ್ಟ್ರಧ್ವಜ
ಭಾರತ
ಪದಕಗಳು ಮತ್ತು ಪುರಸ್ಕಾರಗಳು
ಶೌರ್ಯ

ಪರಮ ವೀರ ಚಕ್ರ
ಮಹಾ ವೀರ ಚಕ್ರ
ವೀರ ಚಕ್ರ
ಅಶೋಕ ಚಕ್ರ
ಕೀರ್ತಿ ಚಕ್ರ
ಶೌರ್ಯ ಚಕ್ರ
ಸೇನಾ ಪದಕ
ನವಸೇನಾ ಪದಕ
ವಾಯುಸೇನಾ ಪದಕ

ಅಸಾಧಾರಣ ಸೇವೆ

ಸರ್ವೋತ್ತಮ ಯುದ್ಧ ಸೇವಾ ಪದಕ
ಪರಮ ವಿಶಿಷ್ಟ ಸೇವಾ ಪದಕ
ಉತ್ತಮ ಯುದ್ಧ ಸೇವಾ ಪದಕ
ಅತಿ ವಿಶಿಷ್ಟ ಸೇವಾ ಪದಕ
ಯುದ್ಧ ಸೇವಾ ಪದಕ
ವಿಶಿಷ್ಟ ಸೇವಾ ಪದಕ

ನಾಗರಿಕ

ರಾಷ್ಟ್ರೀಯ ಸೇವೆ
ಭಾರತ ರತ್ನ
ಪದ್ಮ ವಿಭೂಷಣ
ಪದ್ಮ ಭೂಷಣ
ಪದ್ಮಶ್ರೀ
ಸಾಹಿತ್ಯ
ಜ್ಜ್ನ್ಯಾನಪೀಠ ಪ್ರಶಸ್ತಿ
ಕಲೆ
ಸಂಗೀತ ನಾಟಕ ಅಕಾಡೆಮಿ
ಕ್ರೀಡೆ
ರಾಜೀವ್ ಗಾಂಧಿ ಖೇಲ್ ರತ್ನ
ಅರ್ಜುನ ಪ್ರಶಸ್ತಿ
ದ್ರೋಣಾಚಾರ್ಯ ಪ್ರಶಸ್ತಿ
ಚಲನಚಿತ್ರ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಇತರೆ
ಗಾಂಧಿ ಶಾಂತಿ ಪ್ರಶಸ್ತಿ

ಪರಮ ವೀರ ಚಕ್ರ ಭಾರತ ಸೇನೆಯ ಶೌರ್ಯ ಪುರಸ್ಕಾರ. ಯುದ್ಧದ ವೇಳೆ ಅಪ್ರತಿಮ ಸಾಧನೆ ಮಾಡಿದವರಿಗೆ ಸಲ್ಲುವ ಪ್ರಶಸ್ತಿ. ಭಾರತದ ಅತ್ಯುಚ್ಚ ಸೇನಾ ಪುರಸ್ಕಾರ. ಸಂಸ್ಕೃತದಲ್ಲಿ ಇದರ ಅರ್ಥ ಶೂರರಲ್ಲಿ ಶೂರ ಎಂದು.

ಪರಮ ವೀರ ಚಕ್ರ
Enlarge
ಪರಮ ವೀರ ಚಕ್ರ

ಪರಮವೀರ ಚಕ್ರವನ್ನು ಜನವರಿ ೨೬ ೧೯೫೦ (ಗಣರಾಜ್ಯ ದಿನ)ದಂದು ಆಗಸ್ಟ್ ೧೫ ೧೯೪೭ (ಸ್ವಾತಂತ್ರ್ಯ ದಿನ)ದಿಂದ ಜಾರಿಯಾಗುವಂತೆ ಸ್ಥಾಪಿಸಲಾಯಿತು. ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುವ ಈ ಪುರಸ್ಕಾರವು ಭಾರತ ರತ್ನದ ನಂತರ ದೇಶದ ಎರಡನೇ ಅತಿ ದೊಡ್ಡ ಪುರಸ್ಕಾರ.

ಈ ಪುರಸ್ಕಾರವನ್ನು ಹೊಂದಿದವರು ತಮ್ಮ ಹೆಸರಿನ ಜೊತೆಗೆ ಇದರ ಹೆಸರನ್ನು ಉಪಯೊಗಿಸುವ ಅಧಿಕಾರ ಪಡೆದಿರುತ್ತಾರೆ. ಸ್ಸೆಕಂಡ್ ಲೆಫ್ಟಿನೆಂಟ್ ಅಥವಾ ಅದ್ಕ್ಕಿಂತ ಕಡಿಮೆ ಹುದ್ದೆಯಲ್ಲಿರುವ ಸೈನಿಕರಿಗೆ ಧನಯೋಗವೂ ಇದೆ. ಪುರಸ್ಕೃತರ ನಿಧನದ ನಂತರ ಅವರ ಪತ್ನಿಗೆ ಅವರ ಮರಣ ಅಥವಾ ಮರುವಿವಾಹದ ತನಕ ಮಾಸಾಶನ ಕೊಡುವ ಪದ್ಧತಿಯೂ ಇದೆ. ಆದರೆ ಈ ಮಾಸಾಶನ್ಅವು ಅತಿ ಕಡಿಮೆಯಾಗಿರುವುದು ವಿವಾದಾತ್ಮಕವಾಗಿದೆ. ಮಾರ್ಚ್ ೧೯೯೯ರಲ್ಲಿ ಇದು ತಿಂಗಳಿಗೆ ರೂ.೧,೫೦೦ ಆಗಿತ್ತು. ಆದರೆ ಬಹಳಷ್ಟು ರಾಜ್ಯಗಳು ಈ ಮಾಸಾಶನಕ್ಕಿಂತ ಹೆಚ್ಚು ದುಡ್ಡು ಈ ಮಹಿಳೆಯರಿಗೆ ಸಲ್ಲುವ ಹಾಗೆ ಮಾಡಿವೆ.


ಪರಿವಿಡಿ

[ಬದಲಾಯಿಸಿ] ವಿನ್ಯಾಸ

ಈ ಪದಕವನ್ನು ಶ್ರೀಮತಿ ಸಾವಿತ್ರಿ ಖನೋಲನ್ಕರ್ (ಮೂಲನಾಮ ಈವಾ ಯುವೊನ್ ಲಿಂಡಾ ಮಡೇ-ಡಿ-ಮರೋಸ್, ಇವರು ಭಾರತ ಭೂಸೇನೆಯ ಅಧಿಕಾರಿಯೊಬ್ಬರ ಪತ್ನಿ)ಅವರು ವಿನ್ಯಾಸಗೊಳಿಸಿದ್ದಾರೆ. ಕಾಕತಾಳೀಯವಾಗಿ ಪ್ರಥಮ ಪರಮ ವೀರ ಚಕ್ರವು ಇವರ ಅಳಿಯ ಮೇಜರ್ ಸೋಮನಾಥ ಶರ್ಮಾ ಅವರಿಗೆ ಸಂದಯವಾಯಿತು. ಪಾಕಿಸ್ತಾನದ ಬಂಡುಕೋರರನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಗಟ್ಟುವಾಗ ಇವರು ಮಡಿದರು.

ಈ ಪದಕವು ಕಂಚಿನದಾಗಿದ್ದು ದುಂಡಗಿದೆ. ಇದರ ವ್ಯಾಸ ಸುಮಾರು ಮೂರೂವರೆ ಸೆಂ.ಮಿ. ಮಧ್ಯದಲ್ಲಿ ಭಾರತ ದೇಶದ ಲಾಂಛನವಿದೆ. ಇದರ ಸುತ್ತಲೂ ಇಂದ್ರನ ವಜ್ರದ ನಾಲ್ಕು ಚಿತ್ರಗಳಿವೆ. ಹಿಂಬದಿಯಲ್ಲಿ ಎರಡು ಆಖ್ಯಾನಗಳು, ಅವುಗಳ ಮಧ್ಯೆ ಕಮಲದ ಹೂವು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಮ ವೀರ ಚಕ್ರ ಎಂದು ಬರೆದಿದೆ.

ಪದಕವನ್ನು ಹೊಂದಿದ ರಿಬ್ಬನ್ ೩೨ ಮಿ.ಮಿ. ಉದ್ದವಿದ್ದು ನೇರಳೆ (purple) ಬಣ್ಣದ್ದಾಗಿದೆ. ಇಂದ್ರನಿಗೆ ತನ್ನ ತೊಡೆಯ ಮೂಳೆಯನ್ನು ವಜ್ರಾಯುಧವನ್ನಾಗಿ ಮಾಡಿಕೊಟ್ಟ ಋಷಿ ದಧೀಚಿಯ ಸಂಕೇತವಾಗಿ ಈ ಪುರಸ್ಕಾರವನ್ನು ವಿನ್ಯಾಸಗೊಳಿಸಲಾಗಿದೆ. ಶಿವಾಜಿಯ ಖಡ್ಗವಾದ ಭವಾನಿಯ ಚಿತ್ರವೂ ಇದೆ.

[ಬದಲಾಯಿಸಿ] ಪುರಸ್ಕೃತ ಸೈನಿಕರು

  • ಮೇಜರ್ ಸೋಮನಾಥ ಶರ್ಮಾ, ೧೯೪೭
  • ಲಾನ್ಸ್ ನಾಯಕ್ ಕರಮ್ ಸಿಂಗ್, ೧೯೪೮
  • ಸೆಕಂಡ್ ಲೆಫ್ಟಿನೆಂಟ್ ರಾಮ ರಾಘೋಬ ರಾಣೆ, ೧೯೪೮
  • ನಾಯಕ್ ಜಡೂನಾಥ ಸಿಂಗ್, ೧೯೪೮
  • ಕಂಪನಿ ಹವಿಲ್ದಾರ್ ಮೇಜರ್ ಪೀರು ಸಿಂಗ್, ೧೯೪೮
  • ಕ್ಯಾಪ್ಟನ್ ಗುರುಬಚನ್ ಸಿಂಗ್ ಸಲಾರಿಯಾ, ೧೯೬೧
  • ಮೇಜರ್ ಧಾನ್ ಸಿಂಗ್ ಥಾಪಾ, ೧೯೬೨
  • ಸುಬೇದಾರ್ ಜೋಗಿಂದರ್ ಸಿಂಗ್, ೧೯೬೨
  • ಮೇಜರ್ ಶೈತಾನ್ ಸಿಂಗ್, ೧೯೬೨
  • ಕಂಪನಿ ಕ್ವಾರ್ಟರ್ ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್, ೧೯೬೫
  • ಲೆಫ್ಟಿನೆಂಟ್ ಕರ್ನಲ್ ಆರ್ದೇಶಿರ್ ತಾರಾಪೋರ್, ೧೯೬೫
  • ಲಾನ್ಸ್ ನಾಯಕ್ ಆಲ್ಬರ್ಟ್ ಎಕ್ಕ, ೧೯೭೧
  • ಫ್ಲಯಿಂಗ್ ಆಫಿಸರ್ ನಿರ್ಮಲಜಿತ್ ಸಿಂಗ್ ಸೆಖೋನ್, ೧೯೭೧
  • ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ೧೯೭೧
  • ಮೇಜರ್ ಹೋಶಿಯಾರ್ ಸಿಂಗ್, ೧೯೭೧
  • ನೈಬ್ ಸುಬೇದಾರ್ ಬಾಣಾ ಸಿಂಗ್, ೧೯೮೭
  • ಮೇಜರ್ ರಾಮಸ್ವಾಮಿ ಪರಮೇಶವರನ್, ೧೯೮೭
  • ಕ್ಯಾಪ್ಟನ್ ವಿಕ್ರಮ್ ಬಾತ್ರಾ, ೧೯೯೯
  • ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ೧೯೯೯
  • ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ೧೯೯೯
  • ರೈಫಲ್ ಮ್ಯಾನ್ ಸಂಜಯ ಕುಮಾರ್, ೧೯೯೯

ಕಾಕತಾಳೀಯವಾಗಿ ಮೊದಲ ಮತ್ತು ಕೊನೆಯ ಪುರಸ್ಕೃತರು ಹಿಮಾಚಲ ಪ್ರದೇಶದ ಪಾಲಂಪುರ ಎಂಬ ಒಂದೇ ಹಳ್ಳಿಗೆ ಸೇರಿದವರಾಗಿದ್ದಾರೆ.

[ಬದಲಾಯಿಸಿ] ನೆನಪಿಗಾಗಿ

೧೯೯೦ರಲ್ಲಿ ದೂರದರ್ಶನದಲ್ಲಿ ಪರಮ ವೀರ ಚಕ್ರ ಎಂಬ ಧಾರಾವಾಹಿ ಪ್ರಸಾರವಾಯಿತು. ಇದು ೧೫ ಕಂತುಗಳಲ್ಲಿ ಮೂಡಿಬಂತು. ಇದರಲ್ಲಿ ಪ್ರಖ್ಯಾತ ಕಲಾವಿದರು ಅಭಿನಯಿಸಿದರು. ಇವರಲ್ಲಿ ಫರೂಖ್ ಶೇಖ್, ಪುನೀತ್ ಇಸ್ಸರ್, ವಿಜಯೇಂದ್ರ ಘಾಟ್ಗೆ, ನಸೀರುದ್ದೀನ್ ಷಾ, ಮತ್ತು ಅನ್ನು ಕಪೂರ್ ಸೇರಿದ್ದಾರೆ. ಭಾರತದ ಸೇನಾ ದಳಗಳಿಂದ ಈ ಧಾರಾವಾಹಿಯ ನಿರ್ಮಾಣಕ್ಕೆ ಸಂಪೂರ್ಣ ಸಹಾಯ ದೊರೆತಿತು. ಇದರ ಶೀರ್ಷಿಕೆ ಗೀತೆ 'ಶಾನ್ ತೇರೀ ಕಮ್ ನ ಹೋ (ನಿನ್ನ ಖ್ಯಾತಿ ಎಂದೂ ಕಡಿಮೆಯಾಗದಿರಲಿ) ಬಹು ಜನಪ್ರಿಯವಾಯಿತು.

[ಬದಲಾಯಿಸಿ] ಕೆಲವು ಸಂಗತಿಗಳು

  • ೨೧ ಪುರಸ್ಕೃತರಲ್ಲಿ ೨೦ ಸೈನಿಕರು ಭಾರತೀಯ ಭೂಸೇನೆ ಮತ್ತು ಒಬ್ಬರು ಭಾರತೀಯ ವಾಯುಸೇನೆಯವರಾಗಿದ್ದಾರೆ.
  • ೧೪ ಸೈನಿಕರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
  • ಈ ಪುರಸ್ಕಾರ ದೊರೆತ ಅತಿ ದೊಡ್ಡ ಹುದ್ದೆಯೆಂದರೆ ಲೆಫ್ಟಿನೆಂಟ್ ಕರ್ನಲ್
  • ಈ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಅತಿ ಕಠಿಣವಾದದ್ದು ಎಂದು ಹೇಳಲಾಗುತ್ತದೆ.

[ಬದಲಾಯಿಸಿ] ಹೊರಗಿನ ಸಂಪರ್ಕಗಳು

Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com