ಆಲ್ಬರ್ಟ್ ಐನ್ಸ್ಟೀನ್
From Wikipedia
ಆಲ್ಬರ್ಟ್ ಐನ್ಸ್ಟೀನ್ (ಮಾರ್ಚ್ ೧೪, ೧೮೭೯ - ಏಪ್ರಿಲ್ ೧೮, ೧೯೫೫) (ಜರ್ಮನ್ ಉಚ್ಛಾರಣೆ ) ೨೦ನೇ ಶತಮಾನದ ಮಹಾನ್ ವಿಜ್ಞಾನಿ, ಭೌತಶಾಸ್ತ್ರಜ್ಞ. ಇವರು ಸಾಪೇಕ್ಷತಾ ಸಿದ್ಧಾಂತವನ್ನು (ಥಿಯರಿ ಆಫ್ ರಿಲೇಟಿವಿಟಿ) ಜಗತ್ತಿನ ಮುಂದಿಟ್ಟವರು. ಕ್ವಾಂಟಮ್ ಮೆಕ್ಯಾನಿಕ್ಸ್, ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್ ಹಾಗೂ ವಿಶ್ವಶಾಸ್ತ್ರ (ಕಾಸ್ಮಾಲಜಿ)ದಲ್ಲಿ ಕೂಡ ಮಹತ್ತರವಾದ ಕಾಣಿಕೆ ನೀಡಿದ್ದಾರೆ. ೧೯೨೧ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಫೋಟೊ ಎಲೆಕ್ಟ್ರಿಕ್ ಎಫೆಕ್ಟ್ ಬಣ್ಣಿಸಿದ ಇವರ ವಾದ ಹಾಗೂ 'ವಾದಾತ್ಮಕ ಭೌತಶಾಸ್ತ್ರ'ಕ್ಕೆ ಇವರು ಸಲ್ಲಿಸಿದ ಸೇವೆಗೆ ಈ ಪ್ರಶಸ್ತಿ ನೀಡಲಾಯಿತು.
೧೯೧೬ರಲ್ಲಿ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ (ಜನರಲ್ ರಿಲೇಟಿವಿಟಿ ಥಿಯರಿ) ಬಿತ್ತರಿಸಿದ ನಂತರ ಐನ್ಸ್ಟೀನ್ ವಿಶ್ವದಾದ್ಯಂತ ವಿಜ್ಞಾನಿಯೊಬ್ಬರಿಗೆ ಅಸಾಮಾನ್ಯವಾದ ಪ್ರಸಿದ್ಧಿಯನ್ನು ಪಡೆದರು. ವರ್ಷಗಳು ಕಳೆದಂತೆ ಇವರ ಪ್ರಸಿದ್ಧಿ ಜಗತ್ತಿನ ಯಾವುದೇ ವಿಜ್ಞಾನಿಗಿಂತ ಹೆಚ್ಚಾಯಿತು. ಜಗತ್ತಿನ ಅತಿ ದೊಡ್ಡ ಮೇಧಾವಿಯಾಗಿ ಚಿರಪರಿಚಿತರಾದರು.ಇಂದಿಗೂ ಭೌತಶಾಸ್ತ್ರ ಕ್ಷೇತ್ರದಲ್ಲಿ ಐನ್ಸ್ಟೀನ್ ಅವರು ಮಾಡಿರುವ ಸಂಶೋಧನೆಗಳಿಂದ,ಅವರನ್ನು "ಭೌತಶಾಸ್ತ್ರದ ಜನಕ" ಎಂದೇ ವಿಜ್ಞಾನಿಗಳು ಗೌರವಿಸುತ್ತಾರೆ.ಅವರನ್ನು ಗೌರವಿಸುವ ಸಲುವಾಗಿ ಮೂಲ ವಸ್ತುವೊಂದಕ್ಕೆ 'ಐನ್ಸ್ಟೀನಿಯಮ್' ಎಂದು ಹೆಸರಿಡಲಾಗಿದೆ.