Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಜ್ಞಾನಪೀಠ - Wikipedia

ಜ್ಞಾನಪೀಠ

From Wikipedia

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಛ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ರಚಿಸಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಈ ಪ್ರಶಸ್ತಿಯನ್ನು ಮೇ ೨೨ ೧೯೬೧ ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ಐದು ಲಕ್ಷ ರುಪಾಯಿ ನಗದು ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

ಪರಿವಿಡಿ

[ಬದಲಾಯಿಸಿ] ಜ್ಞಾನಪೀಠದ ಹಿನ್ನೆಲೆ

ಈ ಪ್ರಶಸ್ತಿಯನ್ನು ಭಾರತ ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನ ಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಕನ್ನಡ ಸಾಹಿತಿಗಳು ಏಳು ಪ್ರಶಸ್ತಿಗಳನ್ನು ಪಡೆದು ಕನ್ನಡವನ್ನು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಹಿಂದಿ ಭಾಷೆಯು ಆರು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ.


[ಬದಲಾಯಿಸಿ] ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ

ವರ್ಷ ಭಾಷೆ ಲೇಖಕ ಕೃತಿ
೧೯೬೫ ಮಲೆಯಾಳಂ ಜಿ. ಶಂಕರ ಕುರುಪ್ ಓಡಕ್ಕುಳಲ್
೧೯೬೬ ಬಂಗಾಳಿ ತಾರಾಶಂಕರ ಬಂದೋಪಾಧ್ಯಾಯ ಗಣದೇವತಾ
೧೯೬೭ ಗುಜರಾತಿ ಉಮಾಶಂಕರ ಜೋಷಿ ನಿಶಿತಾ
೧೯೬೭ ಕನ್ನಡ ಕುವೆಂಪು (ಕೆ.ವಿ.ಪುಟ್ಟಪ್ಪ) ಶ್ರೀ ರಾಮಾಯಣ ದರ್ಶನಂ
೧೯೬೮ ಹಿಂದಿ ಸುಮಿತ್ರನಂದನ ಪಂತ್ ಚಿದಂಬರ
೧೯೬೯ ಉರ್ದು ಫಿರಾಖ್ ಗೊರಖಪುರಿ ಗುಲ್-ಎ-ನಗ್ಮಾ
೧೯೭೦ ತೆಲುಗು ವಿಶ್ವನಾಥ ಸತ್ಯನಾರಾಯಣ ರಾಮಾಯಣ ಕಲ್ಪವೃಕ್ಷಮು
೧೯೭೧ ಬಂಗಾಳಿ ಭಿಷ್ಣು ಡೇ ಸ್ಮೃತಿ ಸತ್ತ ಭವಿಷ್ಯತ್
೧೯೭೨ ಹಿಂದಿ ರಾಮಧಾರಿ ಸಿಂಗ್ ದಿನಕರ ಊರ್ವಶಿ
೧೯೭೩ ಕನ್ನಡ ಅಂಬಿಕಾತನಯದತ್ತ (ದ.ರಾ. ಬೇಂದ್ರೆ) ನಾಕುತಂತಿ
೧೯೭೩ ಓರಿಯ ಗೋಪಿನಾಥ ಮೊಹಂತಿ ಮತ್ತಿಮತಾಲ್
೧೯೭೪ ಮರಾಠಿ ವಿಷ್ಣು ಸಖಾರಾಮ್ ಖಾಂಡೇಕರ್ ಯಯಾತಿ
೧೯೭೫ ತಮಿಳು ಪಿ. ವಿ. ಅಕಿಲಂದಂ ಚಿತ್ತ್ರಪ್ಪಾವೈ
೧೯೭೬ ಬಂಗಾಳಿ ಆಶಾಪೂರ್ಣ ದೇವಿ ಪ್ರಥಮ್ ಪ್ರತಿಸೃತಿ
೧೯೭೭ ಕನ್ನಡ ಕೋಟ ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು
೧೯೭೮ ಹಿಂದಿ ಎಸ್. ಎಚ್. ವಿ ಆಜ್ಞೇಯ ಕಿತ್ನಿ ನಾವೊಃ ಮೆಃ ಕಿತ್ನಿ ಬಾರ್
೧೯೭೯ ಅಸ್ಸಾಮಿ ಬಿರೇಂದ್ರ ಕುಮಾರ ಭಟ್ಟಾಚಾರ್ಯ ಮೃತ್ಯುಂಜಯ್
೧೯೮೦ ಮಲೆಯಾಳಂ ಎಸ್. ಕೆ. ಪೊಟ್ಟೆಕಾಟ್ಟ್ ಒರು ದೇಶತ್ತಿಂಡೆ ಕಥಾ
೧೯೮೧ ಪಂಜಾಬಿ ಅಮೃತಾ ಪ್ರೀತಮ್ ಕಾಗಜ್ ಕೆ ಕನ್ವಾಸ್
೧೯೮೨ ಹಿಂದಿ ಮಹಾದೇವಿ ವರ್ಮ
೧೯೮೩ ಕನ್ನಡ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಚಿಕವೀರ ರಾಜೇಂದ್ರ
೧೯೮೪ ಮಲೆಯಾಳಂ ತಕಳಿ ಶಿವಶಂಕರ ಪಿಳ್ಳೈ
೧೯೮೫ ಗುಜರಾತಿ ಪನ್ನಾಲಾಲ್ ಪಟೇಲ್
೧೯೮೬ ಓರಿಯ ಸಚ್ಚಿದಾನಂದ ರಾವುತ ರಾಯ್
೧೯೮೭ ಮರಾಠಿ ವಿಷ್ಣು ವಾಮನ ಶಿರ್ವಾಡ್ಕರ್ ಕುಸುಮಾಗ್ರಜ
೧೯೮೮ ತೆಲುಗು ಡಾ. ಸಿ. ನಾರಾಯಣನ್ ರೆಡ್ಡಿ
೧೯೮೯ ಉರ್ದು ಖುರ್ರತುಲೈನ್ ಹೈದರ್
೧೯೯೦ ಕನ್ನಡ ವಿನಾಯಕ ಕೃಷ್ಣ ಗೋಕಾಕ್ ಭಾರತದ ಸಿಂಧು ರಶ್ಮಿ
೧೯೯೧ ಬಂಗಾಳಿ ಸುಭಾಷ್ ಮುಖೋಪಾಧ್ಯಾಯ
೧೯೯೨ ಹಿಂದಿ ನರೇಶ್ ಮೆಹತಾ
೧೯೯೩ ಓರಿಯ ಸೀತಾಕಾಂತ ಮಹಾಪಾತ್ರ
೧೯೯೪ ಕನ್ನಡ ಯು. ಆರ್. ಅನಂತಮೂರ್ತಿ ಸಮಗ್ರ ಸಾಹಿತ್ಯ
೧೯೯೫ ಮಲೆಯಾಳಂ ಎಮ್. ಟಿ ವಾಸುದೇವನ್ ನಾಯರ್
೧೯೯೬ ಬಂಗಾಳಿ ಮಹಾಶ್ವೇತಾದೇವಿ
೧೯೯೭ ಊರ್ದು ಅಲಿ ಸರ್ದಾರ್ ಜಾಫ್ರಿ
೧೯೯೮ ಕನ್ನಡ ಗಿರೀಶ್ ಕಾರ್ನಾಡ್ ಸಮಗ್ರ ಸಾಹಿತ್ಯ
೧೯೯೯ ಹಿಂದಿ ನಿರ್ಮಲ್ ವರ್ಮ
೧೯೯೯ ಪಂಜಾಬಿ ಗುರುದಯಾಳ್ ಸಿಂಗ್
೨೦೦೦ ಅಸ್ಸಾಮಿ ಇಂದಿರಾ ಗೋಸ್ವಾಮಿ
೨೦೦೧ ಗುಜರಾತಿ ರಾಜೇಂದ್ರ ಕೇಶವಲಾಲ್ ಷಾ
೨೦೦೨ ತಮಿಳು ಡಿ.ಜಯಕಾಂತನ್
೨೦೦೩ ಮರಾಠಿ ವಿಂದಾ ಕರಂದೀಕರ್ (ಗೋವಿಂದ್ ವಿನಾಯಕ್ ಕರಂದೀಕರ್)

[ಬದಲಾಯಿಸಿ] ಈ ಪುಟಗಳನ್ನೂ ನೋಡಿ

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com