ಜೀವ ವಿಕಾಸವಾದ
From Wikipedia
ಜೀವ ವಿಕಾಸವಾದ (ಅಥವ ವಿಕಾಸವಾದ) ಆಧುನಿಕ ಜೀವ ವಿಜ್ಞಾನದ ಬುನಾದಿ. ಈ ವಾದವನ್ನು ಮೊದಲ ಬಾರಿಗೆ ೧೮೫೮ರಲ್ಲಿ ಚಾರ್ಲ್ಸ್ ಡಾರ್ವಿನ್ ಮತ್ತು ಆಲ್ಪ್ರೆಡ್ ವಾಲೇಸ್ ಮಂಡಿಸಿದರು. ಭೂಮಿಯ ಮೇಲೆ ಜೀವ ಉತ್ಪತ್ತಿಯಾದ ನಂತರದಿಂದ ಈಗ ಕಂಡುಬರುವ ಹಾಗು ಅಳಿದುಹೋಗಿರುವ ಜೀವ ಜಾತಿಗಳು ಯಾವ ಆಧಾರಗಳ ಮೇಲೆ ಉತ್ಪತ್ತಿಯಾಗುವವೆಂದು ವಿವರಣೆ ಈ ವಾದದ ಸಾರಾಂಶ.
ವಿಕಾಸವಾದ ಜೀವಪೀಳಿಗೆಗಳಲ್ಲಿ ಕಾಲಾನುಕ್ರಮದಲ್ಲಿ ಉಂಟಾಗುವ ಬದಲಾವಣೆಗಳನ್ನು ವಿವರಿಸುತ್ತದೆ. ಇದು ಜನಾಂಗಗಳ ಒಂದು ತಲೆಮಾರಿನಿಂದ ಮತ್ತೊಂದರ ವಂಶವಾಹಿಗಳಲ್ಲಿನ ಸೂಕ್ಷ್ಮ ಬದಲಾವಣೆ ಮತ್ತು ಒಂದು ಸಮಾನವಾದ ಮೂಲದಿಂದ ಉಗಮವಾಗಿ ಹಲವಾರು ತಲೆಮಾರುಗಳಲ್ಲಿ ಬೇರೆ ಬೇರೆ ಪೀಳಿಗೆಗಳಾಗಿ ವಿಕಾಸಗೊಳ್ಳುವ ಮಹತ್ತರ ಬದಲಾವಣೆಗಳನ್ನು ವಿವರಿಸುತ್ತದೆ.ಒಟ್ಟಿನಲ್ಲಿ ವಿಕಾಸವಾದ ಜೀವಸಂಕುಲದ ಇತಿಹಾಸವನ್ನು ಅರ್ಥೈಸಲು ಸಹಾಯ ಮಾಡುತ್ತದೆ.ಎಲ್ಲ ಜೀವಿಗಳ ಮೂಲ ಒಂದೇ ಆಗಿದ್ದು, ಕಾಲಾನುಕ್ರಮದಲ್ಲಿ ಆದ ನಿರಂತರ ನಿಧಾನ ಬದಲಾವಣೆಗಳಿಂದ ವೈವಿಧ್ಯಮಯ ಜೀವಸಂಕುಲದ ಉಗಮವಾಗಿದೆ ಎನ್ನುವುದೇ ವಿಕಾಸವಾದದ ಮೂಲತತ್ವ.
ವರ್ಗಗಳು: ಚುಟುಕು | ಜೀವಶಾಸ್ತ್ರ | ವಿಜ್ಞಾನ | ತತ್ವಶಾಸ್ತ್ರ