ಕಡೂರು
From Wikipedia
ಕಡೂರು - ಇದು ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪಟ್ಟಣ. ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಕರ್ನಾಟಕರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು ೨೦೦ ಕಿಲೋಮೀಟರುಗಳ ದೂರದಲ್ಲಿದೆ.
ಹಿಂದೆ ಇದ್ದ ಮೈಸೂರು ರಾಜ್ಯ ದಲ್ಲಿ ಚಿಕ್ಕಮಗಳೂರಿನ ಬದಲು ಕಡೂರು ಜಿಲ್ಲಾ ಕೇಂದ್ರವಾಗಿತ್ತು. ೧೯೪೭ ರವರೆಗೂ ಕಡೂರು ಜಿಲ್ಲೆ ಎಂದೇ ಕರೆಯಲಾಗುತ್ತಿದ್ದು, ನಂತರ ಚಿಕ್ಕಮಗಳೂರು ಜಿಲ್ಲೆ ಅಸ್ತಿತ್ವಕ್ಕೆ ಬಂದಿತೆಂದು ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ ಅಧಿಕೃತ ಸರಕಾರಿ ಅಂತರ್ಜಾಲ ತಾಣದ ಮೂಲಕ ತಿಳಿದುಬಂದಿದೆ.
ಚಿಕ್ಕಮಗಳೂರನ್ನು ಮಲೆನಾಡು ಎಂದು ಪರಿಗಣಿಸಲಾಗಿದ್ದರೂ ಈ ಜಿಲ್ಲೆಯ ಕಡೂರು ಮತ್ತು ಬೀರೂರುಗಳಲ್ಲಿ ಬಯಲು ಸೀಮೆಯ ಹವಾಮಾನವಿದೆ. ಭತ್ತ,ರಾಗಿ,ಜೋಳ, ಗೋಧಿ ಇಲ್ಲಿಯ ಪ್ರಮುಖ ಬೆಳೆಗಳು. ತೆಂಗು, ಅಡಿಕೆ, ದ್ರಾಕ್ಷಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಕಡೂರು ತಾಲೂಕಿನ ಎಮ್ಮೆದೊಡ್ಡಿ ಎಂಬ ಸ್ಥಳವು ಕಿತ್ತಳೆ ಹಣ್ಣಿಗೆ ಪ್ರಖ್ಯಾತವಾಗಿತ್ತು. ಆದರೆ ಆ ಹಿರಿಮೆ ಈಗ ಉಳಿದಿಲ್ಲ.
ಕಡೂರಿನ ಸಮೀಪ ವೇದ ಮತ್ತು ಅವತಿ ನದಿಗಳು ಸಂಗಮಗೊಂಡು, ಮುಂದೆ ವೇದಾವತಿ ನದಿಯಾಗಿ ಹರಿಯುತ್ತದೆ.
[ಬದಲಾಯಿಸಿ] ಕಡೂರಿನ ಸುತ್ತ ಮುತ್ತ ಇರುವ ಪ್ರೇಕ್ಷಣೀಯ ಸ್ಥಳಗಳು
- ಕುಂತಿ ಹೊಳೆ - ಮಹಾಭಾರತ ಕಾಲದಲ್ಲಿ ಪಾಂಡವರು ಇಲ್ಲಿಗೆ ಬಂದಿದ್ದರೆಂಬ ಪ್ರತೀತಿ.
- ಶಂಖತೀರ್ಥ - ರಾಮಾಯಣ ಕಾಲದಲ್ಲಿ ರಾಮನು ,ಲಕ್ಷ್ಮಣ,ಸೀತೆಯರೊಡನೆ ವನವಾಸದಲ್ಲಿದ್ದಾಗ ಈ ಜಾಗಕ್ಕೂ ಭೇಟಿ ನೀಡಿದ್ದನೆಂದು ಪ್ರತೀತಿ.
- ಕನಕರಾಯನ ಗುಡ್ಡ - ಇಲ್ಲಿ ವೆಂಕಟೇಶ್ವರನ ಮೂರ್ತಿ ಸ್ವಯಂ ಉದ್ಭವವಾಗಿದೆ. ಈ ವಿಗ್ರಹ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ತಲೆಯ ಭಾಗ ದೇವಾಲಯದ ಚಾವಣಿಯನ್ನು ಸ್ಪರ್ಶಿಸಿದ ದಿನ ಪ್ರಳಯ ಆಗುತ್ತದೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಆದರೆ ಇದಕ್ಕೆ ಯಾವುದೇ ಆಧಾರಗಳಿಲ್ಲ.
- ನಿರ್ವಾಣ ಸ್ವಾಮಿ ಗುಡ್ಡ - ಏಟು ಎದುರೇಟು ಚಿತ್ರದ ಚಿತ್ರೀಕರಣ ನಡೆದಿದೆ.
- ಅಯ್ಯನ ಕೆರೆ - ಏಟು ಎದುರೇಟು ಮತ್ತಿತರ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.
- ಮಲ್ಲೇಶ್ವರ - ಗ್ರಾಮದೇವತೆ ಮಲ್ಲೇಶ್ವರದಮ್ಮನ ಜಾತ್ರೆ ನಡೆಯುತ್ತದೆ.
[ಬದಲಾಯಿಸಿ] ಪ್ರಮುಖ ದೇವಸ್ಥಾನಗಳು
- ರಾಘವೇಂದ್ರ ಸ್ವಾಮಿ ಮಠ
- ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ
- ಕನ್ನಿಕಾ ಪರಮೇಶ್ವರಿ ದೇವಸ್ಥಾನ
- ಶನಿ ಮಹಾತ್ಮನ ಗದ್ದುಗೆ
- ಆಂಜನೇಯ ದೇವಸ್ಥಾನ
- ಗಣಪತಿ ದೇವಸ್ಥಾನ