ಕೆಮ್ಮಣ್ಣು ಗುಂಡಿ
From Wikipedia
ಕೆಮ್ಮಣ್ಣುಗುಂಡಿ ಕರ್ನಾಟಕದ ಪ್ರಮುಖ ಗಿರಿಧಾಮಗಳಲ್ಲಿ ಒಂದು. ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ ದೂರದಲ್ಲಿದೆ. ಚಿಕ್ಕಮಗಳೂರಿನಿಂದ ೫೫ ಕಿಲೋ ಮೀಟರ್ ದೂರದಲ್ಲಿದೆ. ಇದು ಮೈಸೂರು ಮಹಾರಾಜರಲ್ಲಿ ಒಬ್ಬರಾದ ಕೃಷ್ಣರಾಜ ಒಡೆಯರ್ ಅವರ ಮೆಚ್ಚಿನ ಬೇಸಿಗೆಯ ವಿಹಾರಸ್ಥಳವಾಗಿತ್ತು.
ಕೆಮ್ಮಣ್ಣುಗುಂಡಿಯು ೧,೪೩೪ ಮೀಟರ್ ಎತ್ತರದಲ್ಲಿದ್ದು, ದಟ್ಟವಾದ ಮರಗಿಡಗಳಿಂದ ಕೂಡಿದೆ. ಪ್ರಕೃತಿ ಸೌಂದರ್ಯ ವೀಕ್ಷಣೆಗೆ ಪ್ರಸಿಧ್ದವಾಗಿದೆ.
ಕನ್ನಡದ ಹಲವಾರು ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿದೆ. ಕೆಲವು ಪ್ರಮುಖ ಚಿತ್ರಗಳೆಂದರೆ - ಪ್ರೇಮದ ಕಾಣಿಕೆ, ಆನಂದ್,ಪ್ರೀತಿ ಮಾಡು ತಮಾಷೆ ನೋಡು
ಕೆಮ್ಮಣ್ಣುಗುಂಡಿಯಲ್ಲಿ ಯಥೇಚ್ಚವಾಗಿ ಕಬ್ಬಿಣದ ಅದಿರು ದೊರಕುತ್ತದೆ. ಭದ್ರಾವತಿಯ ಸರ್.ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಕೆಮ್ಮಣ್ಣುಗುಂಡಿಯಿಂದ ಅದಿರು ಸರಬರಾಜಾಗುತಿತ್ತು.