Ebooks, Audobooks and Classical Music from Liber Liber
a b c d e f g h i j k l m n o p q r s t u v w x y z





Web - Amazon

We provide Linux to the World


We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಉಸ್ತಾದ್ ಬಿಸ್ಮಿಲ್ಲಾ ಖಾನ್ - Wikipedia

ಉಸ್ತಾದ್ ಬಿಸ್ಮಿಲ್ಲಾ ಖಾನ್

From Wikipedia

ಈ ಲೇಖನವನ್ನು Bismillah Khan ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ಉಸ್ತಾದ್ ಬಿಸ್ಮಿಲ್ಲಾ ಖಾನ್
Enlarge
ಉಸ್ತಾದ್ ಬಿಸ್ಮಿಲ್ಲಾ ಖಾನ್

ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ (ಮಾರ್ಚ್ ೨೧, ೧೯೧೬ - ಆಗಸ್ಟ್ ೨೧, ೨೦೦೬) ಭಾರತರತ್ನ ಪಡೆದ ಮೂರನೆಯ ಶಾಸ್ತ್ರೀಯ ಸಂಗೀತಗಾರ. ಇವರಿಗೆ ೨೦೦೧ ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪರಿವಿಡಿ

[ಬದಲಾಯಿಸಿ] ಜೀವನ

ಇವರ ಪೂರ್ವಜರು ಬಿಹಾರಿನ ದುಮ್ರಾಓ ಸಾಮ್ರಾಜ್ಯದವರೆಂದು ಹೇಳಲಾಗುತ್ತದೆ. ಬಿಸ್ಮಿಲ್ಲಾ ಖಾನ್ ತಮ್ಮ ಚಿಕ್ಕಪ್ಪ, ಅಲಿ ಬಕ್ಸ್ ವಿಲಾಯತು ಬಳಿ ಕಲೆತರೆಂದು ಹೇಳಲಾಗುತ್ತದೆ. ಅಲಿ ಬಕ್ಸ್ ವಿಲಾಯತುರವರು ವಾರಣಾಸಿಯ ವಿಶ್ವನಾಥ ದೇವಾಲಯದೊಂದಿಗಿದ್ದವರು.

ಇವರ ಕೀರ್ತಿ ಉತ್ತುಂಗಕ್ಕೇರಿದ್ದರು ಇವರು ವಾರಣಾಸಿಯ ಸಾಮಾನ್ಯ ಜನರಂತೆ ಜೀವನ ನಡೆಸಿದರು.ಜೀವನದ ಕೊನೆಯವರೆಗು ತಮ್ಮ ಓಡಾಟಕ್ಕಾಗಿ ಸೈಕಲ್ ರಿಕ್ಷಾವನ್ನೆ ಅವಲಂಬಿಸಿದ್ದರು.

ಬಿಸ್ಮಿಲ್ಲಾ ಖಾನ್ ರವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ವಿಶ್ವ ಭಾರತಿ ವಿಶ್ವವಿದ್ಯಾಲಯ, ಶಾಂತಿನಿಕೇತನ ಗಳಿಂದ ಗೌರವಪೂರ್ವಕ ಡಾಕ್ಟರೇಟ್ ಲಭಿಸಿದೆ.

[ಬದಲಾಯಿಸಿ] ಸಾಧನೆಯ ಹಾದಿ

ಶೆಹನಾಯಿಯನ್ನು ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಾದ್ಯವಾಗಿಸಿದ ಕೀರ್ತಿ ಬಿಸ್ಮಿಲ್ಲಾ ಖಾನ್ ಅವರಿಗೆ ಸಲ್ಲಬೇಕು. ೧೯೩೭ರಲ್ಲಿ ಕಲ್ಕತ್ತದಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನದ ಇವರ ವಾದ್ಯ ಕಛೇರಿ ಶೆಹನಾಯಿಯನ್ನು ಪ್ರಮುಖ ವಾದ್ಯಗಳ ಸಾಲಿನಲ್ಲಿ ತಂದು ನಿಲ್ಲಿಸಿತು .೧೯೪೭ರ ಭಾರತದ ಸ್ವಾತಂತ್ರ್ಯದ ಸಂಧರ್ಭದಲ್ಲಿ ಕೆಂಪು ಕೋಟೆಯಲ್ಲಿ ಇವರ ಸಂಗೀತ ಕಛೇರಿ ಆಯೋಜಿಸಲಾಗಿತ್ತು. ಇದೊಂದು ಅವರ ಸಾಧನೆಗೆ ಸಂದ ಗೌರವವೇ ಸರಿ.ಜನವರಿ ೨೬ ೧೯೫೦ರ ಭಾರತ ಗಣರಾಜ್ಯೋತ್ಸವ ಸಂದರ್ಭದಲ್ಲಿ ಖಾನ್ ಕಾಫಿ ರಾಗದಲ್ಲಿ ಕೆಂಪು ಕೋಟೆಯಿಂದ ತಮ್ಮ ನಾದ ಲಹರಿಯನ್ನು ಹರಿಸಿದರು.

ಬಿಸ್ಮಿಲ್ಲಾ ಖಾನ್ ಎಂದರೆ ಶೆಹನಾಯಿ ಎನ್ನುವಷ್ಟು ಶೆಹನಾಯಿ ವಾದನದಲ್ಲಿ ಹೆಸರುಗಳಿಸಿದ್ದರು.

ಖಾನ್ ರವರು ವಿದೇಶಗಳಲ್ಲು ಪ್ರಸಿದ್ಧರು. ಅಪ್ಘಾನಿಸ್ತಾನ, ಯೂರೋಪ್, ಇರಾನ್, ಇರಾಕ್, ಪಶ್ಚಿಮ ಆಫ್ರಿಕ, ಯುಎಸ್ಎ, ಯು.ಎಸ್.ಎಸ್.ಆರ್, ಕೆನಡಾ, ಹಾಂಗ್ ಕಾಂಗ್, ಜಪಾನ್, ಇದಲ್ಲದೆ ಹಲವು ದೇಶಗಳ ಮುಖ್ಯನಗರಗಳಲ್ಲಿ ಕಛೇರಿ ನಡೆಸಿ ಕೊಟ್ಟಿದ್ದಾರೆ.

[ಬದಲಾಯಿಸಿ] ಪ್ರಶಸ್ತಿಗಳು

  1. ೨೦೦೧ನೇ ಸಾಲಿನ ಭಾರತ ರತ್ನ
  2. ಪದ್ಮವಿಭೂಷಣ (೧೯೮೦)
  3. ಪದ್ಮಭೂಷಣ (೧೯೬೮)
  4. ಪದ್ಮಶ್ರೀ (೧೯೬೧)
  5. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೫೬)
  6. ಮಧ್ಯಪ್ರದೇಶ ಸರಕಾರದ ತಾನಸೇನ್ ಪ್ರಶಸ್ತಿ (೧೯೬೫)
  7. ನೆಹರು ಅಂತರಷ್ಟೀ್ರಯ ಐಕ್ಯತಾ ಪ್ರಶಸ್ತಿ(೧೯೭೩)
  8. ಸ್ವರಲಯ ಪ್ರಶಸ್ತಿ (ಮದ್ರಾಸ್)(೧೯೯೪)
  9. ರಾಜೀವ್ ಗಾಂಧಿ ಸಧ್ಬಾವನ ಪ್ರಶಸ್ತಿ (ಕಾಂಗ್ರೆಸ್ ಪಕ್ಷ) (೧೯೯೪)

[ಬದಲಾಯಿಸಿ] ಗೌರವಗಳು

  1. ಮರಾಠವಾಡ ವಿವಿಯಿಂದ ಡಿ ಲಿಟ್ (೧೯೮೬)
  2. ವಿಶ್ವಭಾರತಿ ಶಾಂತಿನಿಕೇತನದಿಂದ ಡಿ ಲಿಟ್ (೧೯೮೮)
  3. ಬನಾರಸ್ ಹಿಂದು ವಿಶ್ವವಿದ್ಯಾನಿಲಯದಿಂದ ಡಿ ಲಿಟ್ (೧೯೮೯)
  4. ಮಹಾತ್ಮಗಾಂಧಿ ಕಾಶಿವಿದ್ಯಾಪೀಠದಿಂದ ಡಿ ಲಿಟ್ (೧೯೯೫)
  5. ಸಂಗೀತ ನಾಟಕ ಅಕಾಡೆಮಿಯ ಫೆಲೊ (೧೯೯೪)
  6. ರಾಷ್ಟ್ರೀಯ ಸಂಶೋಧನಾ ಫೊ್ರಪೆಸರ್ ಶಿಪ್ (೧೯೯೫)

[ಬದಲಾಯಿಸಿ] ಸನಾದಿ ಅಪ್ಪಣ್ಣ

೧೯೭೭ರಲ್ಲಿ ಬಿಡುಗಡೆಯಾದ ಸನಾದಿ ಅಪ್ಪಣ್ಣ ಕನ್ನಡ ಚಲನಚಿತ್ರದಲ್ಲಿ, ಡಾ.ರಾಜ್‍ಕುಮಾರ್ ಅವರ ಶಹನಾಯಿ ವಾದಕರಾಗಿ ಅಭಿನಯಿಸಿದ ದೃಶ್ಯಗಳಿಗೆ ಅವಶ್ಯಕವಾಗಿದ್ದ ಶಹನಾಯಿ ವಾದನವನ್ನು ಬಿಸ್ಮಿಲ್ಲಾ ಖಾನ್ ಅವರು ನುಡಿಸಿದರು. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ಕರೆದರೂ ಕೇಳದೆ ಎಂಬ ಹಾಡಿನಲ್ಲಿ ಬರುವ ಶಹನಾಯಿ ವಾದನವನ್ನು ಬಿಸ್ಮಿಲ್ಲಾ ಖಾನರು ನುಡಿಸಿದ್ದಾರೆ.

[ಬದಲಾಯಿಸಿ] ಹೊರಗಿನ ಸಂಪರ್ಕಗಳು

[ಬದಲಾಯಿಸಿ] ಹಿಂದುಸ್ತಾನಿ ಸಂಗೀತ

ಭೀಮಸೇನ್ ಜೋಷಿ | ಪಂಡಿತ್ ಜಸರಾಜ್ | ಮಲ್ಲಿಕಾರ್ಜುನ ಮನ್ಸೂರ್ | ಗ೦ಗೂಬಾಯಿ ಹಾನಗಲ್ | ಬಸವರಾಜ ರಾಜಗುರು | ನಸ್ರತ್ ಫತೇ ಅಲಿ ಖಾನ್ | ಪ೦ಡಿತ್ ರವಿ ಶ೦ಕರ್ | ಶಿವಕುಮಾರ್ ಶರ್ಮಾ | ಹರಿ ಪ್ರಸಾದ್ ಚೌರಾಸಿಯಾ | ಅಲ್ಲಾ ರಖಾ ಮತ್ತು ಜಾಕಿರ್ ಹುಸೇನ್ | ಅಲಿ ಅಕ್ಬರ್ ಖಾನ್ ಮತ್ತು ಅಮ್ಜದ್ ಅಲಿ ಖಾನ್


Our "Network":

Project Gutenberg
https://gutenberg.classicistranieri.com

Encyclopaedia Britannica 1911
https://encyclopaediabritannica.classicistranieri.com

Librivox Audiobooks
https://librivox.classicistranieri.com

Linux Distributions
https://old.classicistranieri.com

Magnatune (MP3 Music)
https://magnatune.classicistranieri.com

Static Wikipedia (June 2008)
https://wikipedia.classicistranieri.com

Static Wikipedia (March 2008)
https://wikipedia2007.classicistranieri.com/mar2008/

Static Wikipedia (2007)
https://wikipedia2007.classicistranieri.com

Static Wikipedia (2006)
https://wikipedia2006.classicistranieri.com

Liber Liber
https://liberliber.classicistranieri.com

ZIM Files for Kiwix
https://zim.classicistranieri.com


Other Websites:

Bach - Goldberg Variations
https://www.goldbergvariations.org

Lazarillo de Tormes
https://www.lazarillodetormes.org

Madame Bovary
https://www.madamebovary.org

Il Fu Mattia Pascal
https://www.mattiapascal.it

The Voice in the Desert
https://www.thevoiceinthedesert.org

Confessione d'un amore fascista
https://www.amorefascista.it

Malinverno
https://www.malinverno.org

Debito formativo
https://www.debitoformativo.it

Adina Spire
https://www.adinaspire.com