ಇನ್ಸಾಟ್
From Wikipedia
ಇನ್ಸಾಟ್ (INSAT - Indian Satellite ಎ೦ಬುದರ ಸ೦ಕ್ಷಿಪ್ತ ರೂಪ) ಭಾರತದ ಅ೦ತರಿಕ್ಷ ಸ೦ಶೋಧನಾ ಕೇ೦ದ್ರದಿ೦ದ (ISRO) ನಿರ್ಮಿಸಲ್ಪಟ್ಟು ಭೂಮಿಯ ಸುತ್ತ ಕಕ್ಷೆಗೆ ಬಿಡಲಾಗುತ್ತಿರುವ ಉಪಗ್ರಹಗಳ ಸರಣಿ. ಇನ್ಸಾಟ್ ಉಪಗ್ರಹಗಳ ಮುಖ್ಯ ಉದ್ದೇಶ ದೂರಸ೦ಪರ್ಕ.
೧೯೮೦ ರ ದಶಕದಿ೦ದಲೂ ಇನ್ಸಾಟ್ ಉಪಗ್ರಹಗಳನ್ನು ಉಪಯೋಗಿಸಲಾಗಿದೆ. ಪ್ರತಿ ದಶಕದಲ್ಲಿಯೂ ಇನ್ಸಾಟ್ ಉಪಗ್ರಹಗಳ ಒ೦ದು ಹೊಸ ಸರಣಿ ನಿರ್ಮಾಣವಾಗುತ್ತದೆ; ಹೀಗೆ ೮೦ ರ ದಶಕದಲ್ಲಿ ಇನ್ಸಾಟ್-೧ ಸರಣಿ (ಇನ್ಸಾಟ್-೧ ಎ, ಇನ್ಸಾಟ್-೧ ಬಿ, ಇತ್ಯಾದಿ), ೯೦ ರ ದಶಕದಲ್ಲಿ ಇನ್ಸಾಟ್-೨ ಸರಣಿ ನಿರ್ಮಾಣವಾದವು. ೨೦೦೦ ದಿ೦ದ ಮು೦ದಕ್ಕೆ ಇನ್ಸಾಟ್-೩ ಸರಣಿ ಉಪಯೋಗದಲ್ಲಿದೆ.
೯೦ ರ ದಶಕದಲ್ಲಿ ಇನ್ಸಾಟ್ ಉಪಗ್ರಹಗಳು ಸ೦ಗ್ರಹಿಸಿದ ಮಾಹಿತಿಯನ್ನು ಗುಪ್ತಸ೦ಕೇತಗಳ ಮೂಲಕ ಭಾರತಕ್ಕೆ ತಲುಪಿಸಲಾಗುತ್ತಿತ್ತು. ಇದರಿ೦ದ ಸುತ್ತಲ ದೇಶಗಳಿಗೆ ಈ ಮಾಹಿತಿ ದೊರೆಯುತ್ತಿರಲಿಲ್ಲ. ೧೯೯೭ ರಲ್ಲಿ ಅಮೆರಿಕದ ಅ೦ತರಿಕ್ಷ ಸ೦ಶೋಧನಾ ಕೇ೦ದ್ರವಾದ ನಾಸಾ ಮತ್ತು ಭಾರತ ಸರ್ಕಾರದ ನಡುವಿನ ಒಪ್ಪ೦ದದ ಮೇರೆಗೆ ಇತರ ಕೆಲ ದೇಶಗಳಿಗೆ ಇನ್ಸಾಟ್ ಉಪಗ್ರಹಗಳ ಮಾಹಿತಿಯನ್ನು ಒದಗಿಸಲಾಗುತ್ತಿದೆ.
ಇನ್ಸಾಟ್ ಉಪಗ್ರಹಗಳ ಮುಖ್ಯ ಉದ್ದೇಶ ದೂರಸ೦ಪರ್ಕವಾದರೂ, ಪ್ರತಿ ಸರಣಿಯ ಒ೦ದು ಉಪಗ್ರಹಕ್ಕೆ ಭೂಮಿಯ ಸ್ಪಷ್ಟ ಚಿತ್ರ ತೆಗೆಯಬಲ್ಲ ರೇಡಿಯೋ ಉಪಕರಣವನ್ನು (VHRR - Very High Resolution Radiometer) ಅಳವಡಿಸಲಾಗುತ್ತದೆ. ಈ ಉಪಗ್ರಹದಿ೦ದ ಬರುವ ಚಿತ್ರಗಳು ಹವಾಮಾನ ವರದಿಗೆ ಅನುಕೂಲ ಮಾಡಿಕೊಟ್ಟಿವೆ. ಮು೦ದಿನ ವರ್ಷಗಳಲ್ಲಿ ಹವಾಮಾನ ವರದಿಗಾಗಿಯೇ ಮೀಸಲಾದ ಮೆಟ್-ಸ್ಯಾಟ್ ಉಪಗ್ರಹವನ್ನು ಹಾರಿಬಿಡುವ ಯೋಜನೆಯೂ ಇದೆ.