ರಸಿಕ ಪುತ್ತಿಗೆ
From Wikipedia
‘ರಸಿಕ ಪುತ್ತಿಗೆ’ ಎಂದೇ ಖ್ಯಾತರಾದ ಪಿ.ಸುಬ್ರಹ್ಮಣ್ಯ ಆಚಾರ್ಯರು ೧೯೩೨ ಜೂನ ೧೫ರಂದು ಕಾರ್ಕಳ ತಾಲೂಕಿನ ಪುತ್ತಿಗೆಯಲ್ಲಿ ಜನಿಸಿದರು. ಇವರ ತಾಯಿ ನಾಗವೇಣಿ ಅಮ್ಮ; ತಂದೆ ವೆಂಕಟರಮಣಾಚಾರ್ಯ.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ ಹಾಗು ವೃತ್ತಿ
ಹಿಂದಿ ಭಾಷೆಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಹಿಂದೀ ಶಿಕ್ಷಕರಾದ ಆಚಾರ್ಯರು,ಆನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ.(ಕನ್ನಡ) ಪದವಿ ಹಾಗು ಭಾಷಾ ಶಿಕ್ಷಣದಲ್ಲಿ ಡಿಪ್ಲೋಮಾ ಪಡೆದರು.
[ಬದಲಾಯಿಸಿ] ಸಾಹಿತ್ಯ ಸೇವೆ
‘ರಸಿಕ ಪುತ್ತಿಗೆ’ ಹೆಸರಿನಲ್ಲಿ ಆಚಾರ್ಯರು ಮಕ್ಕಳಿಗಾಗಿ ಅನೇಕ ಕಥೆ, ಕಾದಂಬರಿ, ನಾಟಕ ಹಾಗು ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಮಕ್ಕಳಿಂದ ನಾಟಕಗಳನ್ನು ಆಡಿಸಿದ್ದಾರೆ. ಆಕಾಶವಾಣಿಯಲ್ಲಿ ಕಥೆ ಹಾಗು ಕವನಗಳನ್ನು ಓದಿದ್ದಾರೆ.
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಥಾಸಂಕಲನ
- ಕೊಂಬಿನ ಕಂಬಯ್ಯ
- ಇಲಿಗೆ ಅಂಜಿದ ಹುಲಿ
- ನೀತಿ ಕಥೆಗಳು
- ತುಂಟಾಟದ ಕಥೆಗಳು
- ಸುಕ್ಕಿನುಂಡೆ ಸುಬ್ಬ ಮತ್ತು ಇತರ ಕಥೆಗಳು
- ತಪೋವನದ ಸಾಹಸಿಗಳು
[ಬದಲಾಯಿಸಿ] ನಾಟಕ
- ಸತಿ ಅನುಸೂಯಾ
- ತಿಲೋತ್ತಮೆ
- ವೀರ ಜಟಾಯು
- ಮರೆವೊ ಮರೆವು
- ಸುಂದೋಪಸುಂದ
- ಅಗ್ನಿಪರೀಕ್ಷೆ
[ಬದಲಾಯಿಸಿ] ಮಕ್ಕಳ ಕಾದಂಬರಿ
- ಕೆಂಪು ಕಾದಂಬರಿ
- ಮಾರುತಿ ಶಾಲೆ ಹುಡುಗರು
- ಮೂವರು ಮಾಣಿಗಳು
[ಬದಲಾಯಿಸಿ] ಜೀವನಚರಿತ್ರೆ
- ಸೂರದಾಸ
- ತುಳಸಿದಾಸ
- ಸುಭದ್ರಾಕುಮಾರಿ ಚೌಹಾಣ
- ಟಿ.ಎಲ್.ವಾಸ್ವಾನಿ
- ಕುರಿಯ ವಿಠ್ಠಲಶಾಸ್ತ್ರಿ
- ಕೋಟಿ ಚನ್ನಯ್ಯ
[ಬದಲಾಯಿಸಿ] ಪರಿಚಯ ಕೃತಿ
- ಕಂಬಳ-ಕೊಳಿ ಅಂಕ
[ಬದಲಾಯಿಸಿ] ಪುರಸ್ಕಾರ
- ಇವರ ‘ಕೆಂಪು ಕಾರು’ ಕೃತಿಗೆ ರಾಷ್ಟ್ರೀಯ ಪ್ರಶಸ್ತಿ (NCERT) ಲಭಿಸಿದೆ.