ರತ್ನಾಕರ ವರ್ಣಿ
From Wikipedia
ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬನಾದ ರತ್ನಾಕರವರ್ಣಿಯ ಕಾಲ ಸುಮಾರು ಕ್ರಿ.ಶ. ೧೫೫೭. ಈತನ ತಂದೆ ದೇವರಾಜ. ರತ್ನಾಕರವರ್ಣಿಯು ವಿಜಯನಗರದ ಅರಸರ ಸಾಮಂತರಾಜರಾದ ಕಾರ್ಕಳದ ಭೈರರಾಜನ ಆಸ್ಥಾನದಲ್ಲಿಯ ಕವಿ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಈತನ ಜನ್ಮಸ್ಥಳ.
ರತ್ನಾಕರವರ್ಣಿ ರಚಿಸಿದ ಕೃತಿಗಳು:
- ತ್ರಿಲೋಕ ಶತಕ
- ಅಪರಾಜಿತೇಶ್ವರ ಶತಕ
- ರತ್ನಾಕರಾಧೀಶ್ವರ ಶತಕ
- ಭರತೇಶ ವೈಭವ
ಭರತೇಶ ವೈಭವವು ಹಳೆಗನ್ನಡ ಸಾಹಿತ್ಯದ ಒಂದು ಶ್ರೇಷ್ಠ ಕೃತಿ. ಇದು ರತ್ನಾಕರವರ್ಣಿಯ ಮೇರು ಕೃತಿ.
ವರ್ಗಗಳು: ಚುಟುಕು | ಕವಿಗಳು | ಹಳೆಗನ್ನಡ ಕವಿಗಳು | ಕನ್ನಡ ಸಾಹಿತ್ಯ | ಸಾಹಿತಿಗಳು