ಟೆಂಪ್ಲೇಟು:ನಿಮಗಿದು ಗೊತ್ತೆ?
From Wikipedia
ಗಮನಿಸಿ: ಈ ಟೆಂಪ್ಲೇಟಿನಲ್ಲಿರುವ ಮಾಹಿತಿ ತೆಗೆದುಹಾಕುವಾಗ ಅದು ಆರ್ಕೈವಿಗೆ ಸೇರಿಸುವುದನ್ನು ಮರೆಯಬೇಡಿ.
ಕನ್ನಡ ವಿಶ್ವಕೋಶದ ಹೊಸ ಲೇಖನಗಳಿಂದ...
- ಪರಮ ವೀರ ಚಕ್ರ ಪಡೆದ ಮೊದಲ ಮತ್ತು ಕೊನೆಯ ಪುರಸ್ಕೃತರು , ಕಾಕತಾಳೀಯವಾಗಿ ಹಿಮಾಚಲ ಪ್ರದೇಶದ ಪಾಲಂಪುರ ಎಂಬ ಒಂದೇ ಹಳ್ಳಿಗೆ ಸೇರಿದವರಾಗಿದ್ದಾರೆ.
- ಕನ್ನಡದ ಸಾಹಿತಿ, ಪಂಪ ಪ್ರಶಸ್ತಿ ಪುರಸ್ಕೃತ ಸೇಡಿಯಾಪು ಕೃಷ್ಣಭಟ್ಟ ಅವರ ಜನ್ಮದಿನ ಮತ್ತು ನಿಧನ ಎರಡೂ ಜೂನ್ ೮.
- ಕನ್ನಡ ಚಿತ್ರರಂಗದ ಕೊನೆಯ ಕಪ್ಪುಬಿಳುಪು ಚಿತ್ರ ಗಿರೀಶ್ ಕಾಸರವಳ್ಳಿ ನಿರ್ದೇಶನದ ಮೂರು ದಾರಿಗಳು.
- ಡಾ.ರಾಜ್ ಕುಮಾರ್ ಹಾಡಿದ ಮೊದಲ ಚಿತ್ರಗೀತೆ ಓಹಿಲೇಶ್ವರ ಚಿತ್ರದ, ಜಿ.ಕೆ.ವೆಂಕಟೇಶ್ ಸಂಗೀತದಲ್ಲಿನ ಶರಣು ಶಂಭೋ ಗೀತೆ.
- ಮುದ್ದಣ ವಿರಚಿತ ಅದ್ಭುತ ರಾಮಾಯಣಂ, ಶ್ರೀರಾಮ ಪಟ್ಟಾಭಿಷೇಕಂ, ಹಾಗೂ ಶ್ರೀ ರಾಮಾಶ್ವಮೇಧಂ ಕೃತಿಗಳು ಮುದ್ದಣನವರ ಹೆಸರಲ್ಲದೆ ಒಂದು ಕಾಲ್ಪನಿಕ ವ್ಯಕ್ತಿಯ ಹೆಸರಿನಲ್ಲಿ ಮೊದಲಬಾರಿ ಪ್ರಕಾಶನಗೊಂಡಿದ್ದವು.
- ಗುಬ್ಬಿ ವೀರಣ್ಣ ನಿರ್ಮಿಸಿದ "ಕುರುಕ್ಷೇತ್ರ" ಎಂಬ ನಾಟಕದಲ್ಲಿ ಜೀವಂತ ಆನೆ ಕುದುರೆಗಳನ್ನು ಬಳಸಲಾಗಿತ್ತು
- ಡಾ. ಎಂ ಸಿ ಮೋದಿ ತಿರುಪತಿಯಲ್ಲಿ ಒಂದೆ ದಿನದಲ್ಲಿ ೮೩೩ ಕಣ್ಣಿನ ಪೊರೆ ತೆಗೆಯುವ ಶಸ್ತ್ರ ಚಿಕಿತ್ಸೆ ಮಾಡಿ ಗಿನ್ನಿಸ್ ದಾಖಲೆ ಮಾಡಿದರು.