ಟೊಮೇಟೊ
From Wikipedia
ಈ ಲೇಖನವನ್ನು Tomato ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.
?
Tomato |
|||||||||||||||||||
---|---|---|---|---|---|---|---|---|---|---|---|---|---|---|---|---|---|---|---|
ಚಿತ್ರ:Tomato2.jpg The tomato, a berry
|
|||||||||||||||||||
ವೈಜ್ಞಾನಿಕ ವಿಂಗಡಣೆ | |||||||||||||||||||
|
|||||||||||||||||||
|
|||||||||||||||||||
Solanum lycopersicum L. |
|||||||||||||||||||
|
ಟೊಮೇಟೊ (ಸೊಲ್ಯಾನಮ್ ಲೈಕೋಪರ್ಸಿಕಮ್) ಸೋಲನೇಸಿ ಕುಟುಂಬಕ್ಕೆ ಸೇರಿದ ಒಂದು ಗಿಡ. ಮೂಲ - ಮಧ್ಯ ಅಮೇರಿಕ ಹಾಗೂ ದಕ್ಷಿಣ ಅಮೇರಿಕ. ಇದು ಅಲ್ಪಾಯುಶಿ ಗಿಡ - ವರ್ಷಕ್ಕೊಮ್ಮೆ ಬೆಳೆಯಲಾಗುತ್ತದೆ. ೧ - ೩ ಮೀ ಎತ್ತರ ಬೆಳೆಯುವ ಈ ಗಿಡ ತೆಳು ಕಾಂಡವನ್ನು ಹೊಂದಿದ್ದು ಉಳಿದ ಗಿಡಗಳ ಮೇಲೆ ಸುಲಭವಾಗಿ ಹರಡಿಕೊಳ್ಳುತ್ತದೆ. ಇದರ ಎಲೆಗಳು ೧೦-೨೫ ಸೆ ಮೀ ಉದ್ದವಿದ್ದು, ಎಲೆಗಳ ಮಧ್ಯೆ ತೆಲು ಪದರಗಳಿದ್ದು, ೮ ಸೆ ಮೀ ನಷ್ಟು ಅಗಲವುಳ್ಳ ೫ - ೯ ಎಲೆಗಳ ಗುಂಪಿನಂತೆ ಕಾಣಸಿಗುತ್ತವೆ.
ಟೊಮೇಟೊ ಎಂಬ ಪದ Nahuatl ಭಾಷೆಯಿಂದ ಉಗಮಿಸಿದ ಪದ.
ಪರಿವಿಡಿ |
[ಬದಲಾಯಿಸಿ] ಇತಿಹಾಸ
[ಬದಲಾಯಿಸಿ] Early history
ಆಂಡ್ರ್ಯೂ ಎಫ್ ಸ್ಮಿತ್ ರವರ "ದಿ ಟೊಮೇಟೋ ಇನ್ ಅಮೇರಿಕ ಪುಸ್ತಕದ ಪ್ರಕಾರ ಟೊಮೇಟೋ ದಕ್ಷಿಣ ಅಮೇರಿಕದ ಎತ್ತರ ಪ್ರದೇಶಗಳಿಂದ ಬಂದದ್ದು. ಆದರೆ ಸ್ಮಿತ್ ಸ್ಪ್ಯಾನಿಶ್ ದಕ್ಷಿಣ ಅಮೇರಿಕದಲ್ಲಿ ಕಾಲಿಡುವ ಮುಂಚೆ ಟೋಮೇಟೋ ಕೃಷಿ ನಡೆಯುತ್ತಿದ್ದ ಬಗ್ಗೆ ಯಾವುದೇ ಪುರಾವೆಯೂ ಇಲ್ಲವೆಂದು ಕೂಡ ಬರೆದಿದ್ದರು. ಆದರೆ ಇತರ ಸಂಶೋಧಕರು ಈ ವಿಷಯವನ್ನು ಅಲ್ಲಗೆಳೆದಿದ್ದಾರೆ. ಪೆರುವಿನಲ್ಲಿ ಈಗ ಕೃಷಿ ಮಾಡಲಾಗುವ ಹಣ್ಣುಗಳಿಗೂ ಹೆಚ್ಚಿನ ಐತಿಹಾಸಿಕ ಪುರಾವೆ ಇಲ್ಲದ್ದರಿಂದ. ಹೆಚ್ಚಿನ ಕೃಷಿ ಜ್ಞಾನ ಯೂರೋಪಿಯನ್ನರು ಬಂದ ಮೇಲೆ ನಶಿಸಿ ಹೋಯಿತಂತೆ.
ಅದೇನಿದ್ದರೂ, ಟೊಮೇಟೊ ಹೇಗೋ ದಕ್ಷಿಣ ಅಮೇರಿಕಕ್ಕೆ ಹೊರಗಿನಿಂದ ಬಂದದ್ದು ಎಂದು ಹೇಳಲಾಗುತ್ತದೆ. ಮಾಯಾ ಮತ್ತು ಇತರ ಪಂಗಡಗಳ ಜನ ಈ ಹಣ್ಣನ್ನು ಅಡುಗೆಯಲ್ಲುಪಯೋಗಿಸುತ್ತಿದ್ದರಂತೆ. ದಕ್ಷಿಣ ಮೆಕ್ಸಿಕೊದಲ್ಲಿ ೧೬ನೇ ಶತಮಾನದಲ್ಲಿ ಇದನ್ನು ಬೆಳೆಸುತ್ತಿದ್ದರಂತೆ.
[ಬದಲಾಯಿಸಿ] ಸ್ಪೇಯ್ನ್ ನಲ್ಲಿ
ದಕ್ಷಿಣ ಅಮೇರಿಕವನ್ನು ಸ್ಪೇಯ್ನಿನವರು ಆಕ್ರಮಿಸಿದಾಗ, ಕೆರಿಬ್ಬಿಯನ್ನ ಅವರ ಕಾಲೋನಿಗಳಲ್ಲಿ ಟೊಮೇಟೊ ವಿತರಿಸಿದರು. ಫಿಲಿಪ್ಪೀನ್ಸ್ ದೇಶಕ್ಕೆ ಕೂಡ ಇದನ್ನು ತೆಗೆದುಕೊಂಡು ಹೋದರು. ಅಲ್ಲಿಂದ ಏಶಿಯಾ ಖಂಡಕ್ಕೂ ಬಂದಿತೆಂದು ಹೇಳಲಾಗುತ್ತದೆ.
ಸ್ಪೇಯ್ನಿನವರು ಯೂರೋಪಿಗೂ ಟೊಮೇಟೊ ತಂದರು. ಅಲ್ಲಿನ ವಾತಾವರಣಕ್ಕೆ ಅದು ಹುಲುಸಾಗಿ ಬೆಳೆಯಿತು, ೧೫೪೦ನೇ ಇಶವಿಯಷ್ಟೊತ್ತಿಗೆ ಬೇಸಾಯ ಪ್ರಾರಂಭವಾಗಿತ್ತು. ಸ್ಪೇಯ್ನಿನಲ್ಲಿ ೧೬೦೦ ಸಮಯದಲ್ಲಿ ಆಗಲೇ ಸಾಕಷ್ಟು ಅಡುಗೆಗಳಲ್ಲಿ ಟೊಮೇಟೋ ಬಳಸಲಾಗುತ್ತಿತ್ತು.
[ಬದಲಾಯಿಸಿ] ಟೊಮೇಟೋ ದಾಖಲೆಗಳು
ಗೊರ್ಡೊನ್ ಗ್ರಹಾಮ್, ಇಂಗ್ಲೆಂಡ್, ಒಕ್ಲೊಹೋಮ (೧೯೮೬) ಬೆಳೆದ 3.51 kg ತೂಕವಿರುವ ಟೊಮೇಟೊ ಇದುವರೆಗೂ ಅತ್ಯಂತ ಭಾರವಾಗಿರುವ ಟೊಮೇಟೊ. ಅತಿ ದೊಡ್ಡ ಟೊಮೆಟೊ ಗಿಡ 'ಸನ್ ಗೋಲ್ಡ್' ಅನ್ನು ಇಂಗ್ಲೆಂಡಿನ ನ್ಯೂಟ್ರಿಕಲ್ಚರ್ ಕಂಪನಿಯು ೨೦೦೦ ಇಸವಿಯಲ್ಲಿ ಬೆಳೆಸಿದೆ. ಇದರ ಉದ್ದ ೧೯.೮ ಮೀ (೬೫ ಅಡಿ) ಯಾಗಿದೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು ಹಾಗೂ ಉಲ್ಲೇಖಗಳು
- ಬಿ ಜಿ ಎಲ್ ಸ್ವಾಮಿ, ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ.
- Smith, A. F. (1994). The Tomato in America. University of Illinois Press. ISBN 0252070097.
- Peralta, I. E. & Spooner, D. M. (2001). Granule-bound starch synthase (Gbssi) gene phylogeny of wild tomatoes (Solanum L. section Lycopersicon [Mill.] Wettst. Subsection Lycopersicon). American Journal of Botany 88 (10): 1888–1902 (available online).
- The On-line Tomato Vine (Keith Mueller)
- Cox, S, "I say tomayto, you say tomahto", December 2000
- The California Tomato Commission
- "Thomas Jefferson's favorite vegetables"
- Tomato Study including tomato history (pdf file)
- Tomato diseases at DoItYourself.com
- Tomato pests