ಕುವೆಂಪು ವಿಶ್ವವಿದ್ಯಾಲಯ
From Wikipedia
ಕುವೆಂಪು ವಿಶ್ವವಿದ್ಯಾನಿಲಯ - ಕರ್ನಾಟಕ ರಾಜ್ಯದಲ್ಲಿರುವ ವಿಶ್ಯವವಿದ್ಯಾನಿಲಯಗಳಲ್ಲಿ ಒಂದು.
ಈ ವಿಶ್ವವಿದ್ಯಾನಿಲಯವನ್ನು ಕನ್ನಡ ಸಾಹಿತ್ಯಲೋಕದ ಅಗ್ರಗಣ್ಯರಲ್ಲೊಬ್ಬರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ, ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ೧೯೮೭ನೇ ಇಸ್ವಿ ಜೂನ್ ೨೯ರಂದು ಪ್ರಾರಂಭಿಸಲಾಯಿತು.
ಮಲೆನಾಡಿನ ಪ್ರಕೃತಿ ಮಡಿಲಲ್ಲಿರುವ ಜ್ಞಾನ ಸಹ್ಯಾದ್ರಿ ಪ್ರಾಂಗಣದಲ್ಲಿ ಈ ವಿಶ್ಯವಿದ್ಯಾನಿಲಯ ಸ್ಥಾಪಿತವಾಗಿದೆ. ಈ ಪ್ರಾಂಗಣವು ಭದ್ರಾ ನದಿಯ ಹತ್ತಿರವಿದ್ದು, ಶಿವಮೊಗ್ಗದಿಂದ ೨೮ಕಿ.ಮೀ. ದೂರದಲ್ಲಿಯೂ, ಭದ್ರಾವತಿಯ ಕೈಗಾರಿಕಾ ಪಟ್ಟಣದಿಂದ ೧೮ ಕಿ.ಮೀ ದೂರದಲ್ಲಿಯೂ ಇದೆ.