ಕರ್ನಾಟಕ ವಿಶ್ವವಿದ್ಯಾಲಯ
From Wikipedia
ಕರ್ನಾಟಕ ವಿಶ್ವವಿದ್ಯಾಲಯ - ಕರ್ನಾಟಕ ಹಾಗು ಭಾರತದಲ್ಲಿನ ಪ್ರಮುಖ ವಿಶ್ವವಿದ್ಯಾಲಯಗಳಲ್ಲೊಂದು. ಏಕೀಕೃತ ಕರ್ನಾಟಕದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಮೈಸೂರು ವಿಶ್ವವಿದ್ಯಾನಿಲಯದ ನಂತರದ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿದೆ.
ಪರಿವಿಡಿ |
[ಬದಲಾಯಿಸಿ] ಸ್ಥಾಪನೆ
ಕರ್ನಾಟಕ ಏಕೀಕರಣ ೧೯೫೬ನೆಯ ಇಸವಿಯಲ್ಲಿ ಆಯಿತು. ಆವರೆಗೂ ಆಗಿನ ಮುಂಬಯಿ ಪ್ರಾಂತದಲ್ಲಿದ್ದ ಕನ್ನಡ ಪ್ರದೇಶಗಳನ್ನು ಮುಂಬಯಿ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶದಲ್ಲಿದ್ದ ಕಾಲೇಜುಗಳ ಅವಶ್ಯಕತೆಯನ್ನು ಗುರುತಿಸಿ ೧೯೪೯ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಸ್ಥಾಪನೆಯಾದಾಗ ಈ ವಿಶ್ವವಿದ್ಯಾಲಯ ಇದ್ದದ್ದು ಮುಂಬಯಿಯಲ್ಲಿ! ೧೯೫೦ರಲ್ಲಿ ವಿಶ್ವವಿದ್ಯಾಲಯವನ್ನು ಧಾರವಾಡಕ್ಕೆ ಸ್ಥಳಾಂತರಿಸಲಾಯಿತು ಹಾಗು ೧೯೫೦ ಮಾರ್ಚ್ ತಿಂಗಳಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಯಿತು.
[ಬದಲಾಯಿಸಿ] ಉಪಕುಲಪತಿಗಳು
ರಾಮದುರ್ಗ ಮೂಲದ ಶ್ರೀ ಆರ್.ಎ. ಜಹಾಗೀರದಾರಇವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದವರು, ಕರ್ನಾಟಕ ವಿಶ್ವವಿದ್ಯಾಲಯದ ಪ್ರಥಮ ಉಪಕುಲಪತಿಗಳಾದರು. ೧೯೫೪ ರಿಂದ ೧೯೬೭ರವರೆಗೆ ಶ್ರೀ ಡಿ.ಸಿ.ಪಾವಟೆ ಉಪಕುಲಪತಿಗಳಾಗಿದ್ದರು. ಈ ಅವಧಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ವಿಶೇಷ ಪ್ರಗತಿಯನ್ನು ಸಾಧಿಸಿತೆನ್ನಲಾಗಿದೆ.
[ಬದಲಾಯಿಸಿ] ಅಂಕಿ ಅಂಶಗಳು
- ಸ್ನಾತಕೋತ್ತರ ವಿಭಾಗಗಳು : ೪೮
- ಸ್ನಾತಕೋತ್ತರ ಅಧ್ಯಾಪಕರು : ೨೬೪
- ಪದವಿ ತರಗತಿಗಳ ಅಧ್ಯಾಪಕರು : ೪೨೫೨
- ಸ್ನಾತಕೋತ್ತರ ವಿದ್ಯಾರ್ಥಿಗಳು : ೪೫೩೧
- ಪದವಿಪೂರ್ವ ವಿದ್ಯಾರ್ಥಿಗಳು : ೧,೦೧,೧೪೨
[ಬದಲಾಯಿಸಿ] ಇವನ್ನೂ ನೋಡಿ
- ಕನ್ನಡ ವಿಶ್ವವಿದ್ಯಾಲಯ
- ಬೆಂಗಳೂರು ವಿಶ್ವವಿದ್ಯಾಲಯ
- ಮೈಸೂರು ವಿಶ್ವವಿದ್ಯಾಲಯ
- ಕುವೆಂಪು ವಿಶ್ವವಿದ್ಯಾಲಯ
- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ